ಕೌರವನನ್ನು ಹೋರಿಗೆ ಹೋಲಿಸಿ ಕಿಡಿಕಾರಿದ ಹೊರಟ್ಟಿ

Public TV
1 Min Read

ಧಾರವಾಡ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೋರಿಗೆ ಹೋಲಿಸಿ ಮಾತನಾಡಿದ್ದಾರೆ.

ಧಾರವಾಡದಲ್ಲಿ ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆ ಹಾಗೂ ಹಲವು ವಿಷಯಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ತಾಳ ಇಲ್ಲ, ತಂತಿಯೂ ಇಲ್ಲ. ವಲಸಿಗರು ಮತ್ತು ಮೂಲರ ಮಧ್ಯೆ ಇದ್ದಾರೆ ಎಂದು ಹೇಳಿದರು.

ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತು. ಬಿಜೆಪಿ-ಜೆಡಿಎಸ್ ಸರ್ಕಾರವೂ ರಚನೆ ಆಗಿತ್ತು. ಆದರೆ ಈಗ ಇರುವುದು ಮೂರು ಪಕ್ಷದ ಸರ್ಕಾರ ಎಂದು ಲೇವಡಿ ಮಾಡಿದ ಹೊರಟ್ಟಿ, ನಮ್ಮ ಜೆಡಿಎಸ್‍ನವರು ಎಲ್ಲರೂ ಅಲ್ಲೇ ಇದ್ದಾರೆ. ಬಿ.ಸಿ. ಪಾಟೀಲ್ ನಮ್ಮೂರಿನ ಹೋರಿ ಎಂದ ಅವರು, ಸರ್ಕಾರದಲ್ಲಿ ಎಷ್ಟು ಬೇಕು ಅಷ್ಟು ಮೇಯ್ಲಿ ಎಂದು ನಾ ಮೊನ್ನೆ ಮಾತನಾಡಿದಾಗ ಹೇಳಿದ್ದೀನಿ. ನಮ್ಮೂರ ಹೋರಿ ಎಲ್ಲಿ ಎಷ್ಟು ಮೇಯ್ದರೇನು, ಮತ್ತೇ ನಮ್ಮ ಮನೆಗೆ ಬರಬೇಕು ಎಂದರು.

ನಮ್ಮವರಿಗೆಲ್ಲ ದಬಾಯಿಸಿ ತಿನ್ನಿ ಅಂತ ಹೇಳಿದ್ದೇವೆ. ಮೂರು ಪಕ್ಷದ ಸಮ್ಮಿಶ್ರ ಸರ್ಕಾರ ಇದು. ಸದ್ಯ ನಾವಂತೂ ವಿರೋಧ ಪಕ್ಷದಲ್ಲಿದ್ದೇವೆ. ಭೂ ಸುಧಾರಣೆ ಕಾಯ್ದೆ ಸೇರಿ ಪ್ರಮುಖ ಬೇಡಿಕೆಗಳಿವೆ. ಇವೆಲ್ಲವನ್ನೂ ಸರಿಮಾಡಬೇಕು. ಇಲ್ಲದೇ ಹೋದಲ್ಲಿ ಬರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಇದೆ ಮಾರಿ ಹಬ್ಬ ಎಂದು ಕಿಡಿಕಾರಿದರು.

ಇದು 33 ಪರ್ಸೆಂಟ್ ಸರ್ಕಾರ ಎಂದ ಅವರು, ನಾವು 4 ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದೆವು, ಆದರೆ ಇವರು ಬಹಳ ತಿನ್ನುತ್ತಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *