ಕೋವಿಡ್ ಸಮಯದಲ್ಲಿ ವಿಎಚ್‍ಪಿಯಿಂದ ಸಮಾಜ ಸೇವೆ – ಏನೇನು ಮಾಡಿದೆ?

Public TV
1 Min Read

ಬೆಂಗಳೂರು: ಕೊರೊನಾ ಸಂಕಷ್ಟ ಸಮಯದಲ್ಲಿ ವಿಶ್ವ ಹಿಂದೂ ಪರಿಷದ್ ರಾಜ್ಯಾದ್ಯಂತ ಹಲವು ರೀತಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಕೊರೊನಾದಿಂದ ಬಳಲುತ್ತಿರುವ ಅನೇಕ ಮಂದಿಗೆ ಆಕ್ಸಿಜನ್, ಊಟ, ಉಚಿತ ಆಟೋ ಸೇವೆ ಹೀಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ.

ಈಗ ವಿಶ್ವ ಹಿಂದೂ ಪರಿಷದ್ ಬೆಂಗಳೂರಿನ ಕೇಂದ್ರ ಕಾರ್ಯಾಲಯದಿಂದ ಬೆಳಗಾವಿಗೆ 5, ಶಿವಮೊಗ್ಗಕ್ಕೆ 2, ಚಿತ್ರದುರ್ಗ 1, ಮಂಗಳೂರಿಗೆ 1 ಆಕ್ಸಿಜನ್ ಸಾಂದ್ರಕವನ್ನು ಕಳುಹಿಸಿ ಕೊಡಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀಬಸವರಾಜ್ ಜಿ ಅವರು ಸೇವಾಕಾರ್ಯಗಳ ವಿವರ ನೀಡಿದರು.

ಏನೇನು ಮಾಡಿದೆ?
* ಎಲ್ಲಾ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ
* ಮಂಗಳೂರಿನಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಆಟೋ ಸೇವೆ, ಅದಕ್ಕಾಗಿ ಸಹಾಯವಾಣಿ ಆರಂಭ
* ಮಂಗಳೂರು, ಸುರತ್ಕಲ್, ಉಪ್ಪಿನಂಗಡಿ, ಮಡಿಕೇರಿ, ಚಿತ್ರದುರ್ಗ, ಮಳವಳ್ಳಿ, ತುಮಕೂರು, ಬೆಳಗಾವಿ, ಹುಬ್ಬಳ್ಳಿ ಹೀಗೆ ಹಲವಾರು ಕಡೆ ಕೋವಿಡ್‍ನಿಂದ ಮೃತಪಟ್ಟವರನ್ನು ಹಿಂದೂ ಪದ್ಧತಿಯಂತೆ ಅಂತ್ಯಕ್ರಿಯೆ.
* ಶಿವಮೊಗ್ಗದಲ್ಲಿ ಅನ್ನ ಪರಬ್ರಹ್ಮ ಎನ್ನುವ ಕಾರ್ಯಕ್ರಮದಡಿ ಹಸಿದವರಿಗೆ ಪ್ರತಿದಿನ ನಗರದಾದ್ಯಂತ 1 ಸಾವಿರ ಆಹಾರ ಪೊಟ್ಟಣ ವಿತರಣೆ
* ಬೆಂಗಳೂರಿನಲ್ಲಿ ಕೋವಿಡ್ ಆಗಿ ಹೋ ಐಸೋಲೇಷನ್‍ನಲ್ಲಿ ಇರುವವರಿಗೆ ಮೆಡಿಸನ್ ವಿತರಣೆ.
* ಚಿತ್ರದುರ್ಗದ ಜಿಲ್ಲೆಯ ಹೊಳಲ್ಕೆರೆಯ ಸರಕಾರಿ ಆಸ್ಪತ್ರೆಗಳಲ್ಲಿರುವ ರೋಗಿಗಳ ಸಂಬಂಧಿಗಳಿಗೆ ಪ್ರತಿನಿತ್ಯ 200 ಆಹಾರ ಪೊಟ್ಟಣ ವಿತರಣೆ.
* ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಸೇವಾ ಭಾರತೀಯಿಂದ 40 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರದ ಮೂಲಕ ಸಹಾಯ.
* ಚಿತ್ರದುರ್ಗದಲ್ಲಿ ವಿಹಿಂಪ ಮತ್ತು ಜೈನ್ ಸಮುದಾಯ ಒಟ್ಟಾಗಿ 12 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರವನ್ನು ತೆರೆದಿಒದೆ.
* ವಿಶ್ವ ಹಿಂದೂ ಪರಿಷದ್ ಕರ್ನಾಟಕ ಕೇಂದ್ರಕಾರ್ಯಾಲಯ ಧರ್ಮಶ್ರೀಯಲ್ಲಿ ಎರಡು ದಿನಗಳ ಕಾಲ ವ್ಯಾಕ್ಸಿನೇಷನ್ ಡ್ರೈವ್.
* ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷದ್, ಆರ್‍ಎಸ್‍ಎಸ್ ಏಕಲ್ ವಿದ್ಯಾಲಯದ ಆಶ್ರಯದಲ್ಲಿ ಕೋವಿಡ್ ಕೇರ್ ಸೆಂಟರ್.

Share This Article
Leave a Comment

Leave a Reply

Your email address will not be published. Required fields are marked *