ಕೊವ್ಯಾಕ್ಸಿನ್‌ ಅಲ್ಲ ಕೋವಿಶೀಲ್ಡ್‌ ಬಗ್ಗೆಯೂ ಪ್ರಶ್ನೆ – ಲಸಿಕೆ ವಿಚಾರದಲ್ಲೂ ರಾಜಕೀಯ ಜೋರು

Public TV
2 Min Read

– ಎರಡು ಸಂಸ್ಥೆಗಳು ಆರಂಭಗೊಂಡಿದ್ದು ಕಾಂಗ್ರೆಸ್‌ ಅವಧಿಯಲ್ಲಿ
– ಮೊದಲು ಮೋದಿ ಲಸಿಕೆ ತೆಗೆದುಕೊಳ್ಳಲಿ

ನವದೆಹಲಿ: ಭಾರತದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆ ಮಾಡೋದಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ವಿಪರ್ಯಾಸ ಎಂದರೆ ಈ ವಿಚಾರದಲ್ಲಿಯೂ ರಾಜಕೀಯ ನುಸುಳಿದೆ.

3ನೇ ಹಂತದ ಪ್ರಯೋಗದ ಹಂತದಲ್ಲಿರುವಾಗಲೇ ಕೋವ್ಯಾಕ್ಸಿನ್‍ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ನಿನ್ನೆ ಕಾಂಗ್ರೆಸ್‍ನ ಶಶಿತರೂರ್, ಜೈರಾಮ್ ರಮೇಶ್, ಆನಂದ್ ಶರ್ಮಾ ಸೇರಿ ಹಲವರು ಟ್ವೀಟ್ ಮೇಲೆ ಟ್ವೀಟ್ ಮಾಡಿ, ಹಲವು ಅನುಮಾನ ವ್ಯಕ್ತಪಡಿಸಿದ್ದರು. ಬಿಜೆಪಿ ಮತ್ತು ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಈಗ ಬಿಹಾರ ಕಾಂಗ್ರೆಸ್ ಮುಖಂಡ ಅಜಿತ್ ಶರ್ಮಾ, ನೇರವಾಗಿ ಪ್ರಧಾನಿ ಮೋದಿಯನ್ನು ಟಾರ್ಗೆಟ್ ಮಾಡಿದ್ದಾರೆ.

ಲಸಿಕೆ ಬರುತ್ತಿರುವುದು ಸಂತೋಷ. ಆದರೆ ಈ ಲಸಿಕೆ ರಕ್ಷಣೆ ಬಗ್ಗೆ ಜನರಲ್ಲಿ ಹಲವು ಅನುಮಾನಗಳಿವೆ. ಈ ಅನುಮಾನಗಳನ್ನು ಬಗೆಹರಿಸಲು ಖುದ್ದು ಪ್ರಧಾನಿ ಮೋದಿ ಮತ್ತು ಇತರೆ ಬಿಜೆಪಿ ನಾಯಕರು ಮೊದಲ ಲಸಿಕೆ ಹಾಕಿಸಿಕೊಳ್ಳಬೇಕು. ಆಗಷ್ಟೇ ಜನರಲ್ಲಿ ನಂಬಿಕೆ ಮೂಡಲು ಸಾಧ್ಯ ಎಂದಿದ್ದಾರೆ.

ಈ ಗಲಾಟೆಯ ನಡುವೆ ಕ್ರೆಡಿಟ್ ಪಾಲಿಟಿಕ್ಸ್‌ ಮಾಡಲು ಕಾಂಗ್ರೆಸ್ ತೊಡಗಿದೆ. ಈ ಲಸಿಕೆಗಳ ಘನತೆ ತಮ್ಮದೇ ಅಂತಾ ಬಿಜೆಪಿ ಹೇಳಿಕೊಳ್ಳುತ್ತಿದೆ. ವಾಸ್ತವದಲ್ಲಿ ಅದನ್ನು ತಯಾರಿಸಿರೋದು ಸಿರಂ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು. ಈ ಸಂಸ್ಥೆಗಳು ಪ್ರಾರಂಭ ಆಗಿದ್ದು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎನ್ನುವುದನ್ನು ನೆನಪಲ್ಲಿಟ್ಟುಕೊಳ್ಳಬೇಕು ಎಂದು ಅಜಿತ್ ಶರ್ಮಾ ಹೇಳಿಕೊಂಡಿದ್ದಾರೆ.

ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಬಿಜೆಪಿಯ ಸಂಬಿತ್ ಪಾತ್ರ, ವಿಪಕ್ಷಗಳು ಇಲ್ಲೂ ರಾಜಕೀಯ ಮಾಡುತ್ತಿವೆ. ಲಸಿಕೆ ಸಂಶೋಧಿಸಿದ ದೇಶಿಯ ವಿಜ್ಞಾನಿಗಳ ಶ್ರಮವನ್ನು ಅಪಮಾನಿಸುತ್ತಿವೆ ಎಂದು ಆಪಾದಿಸಿದ್ದಾರೆ. ಲಸಿಕೆ ಸಿಕ್ಕಿರೋದಕ್ಕೆ ಇಡೀ ದೇಶ ಖುಷಿ ಆಗಿದೆ. ಆದ್ರೆ ಕಾಂಗ್ರೆಸ್ ಮಾತ್ರ ಖುಷಿಯಾಗಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ಕೇವಲ ಕೊವ್ಯಾಕ್ಸಿನ್ ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಕೋವಿಶೀಲ್ಡ್‌ಗೆ ಅನುಮತಿ ನೀಡಿದ ಬಗ್ಗೆಯೂ ವಿಪಕ್ಷಗಳು, ಕೆಲ ತಜ್ಞರು ಪ್ರಶ್ನೆ ಎತ್ತಿದ್ದಾರೆ.

ಏನು ಪ್ರಶ್ನೆಗಳು?
ಪ್ರಶ್ನೆ 1 – ಕೋವಿಶೀಲ್ಡ್ ಲಸಿಕೆಯ ಡೊಸೇಜ್ ಬಗ್ಗೆ ಗೊಂದಲ
ಪ್ರಶ್ನೆ 2 – ಕೋವಿಶೀಲ್ಡ್ ಲಸಿಕೆಯ 3ನೇ ಹಂತ ಕ್ಲಿನಿಕಲ್ ಟ್ರಯಲ್‍ನ ಮಾಹಿತಿ ಬಯಲು ಮಾಡ್ತಿಲ್ಲ ಯಾಕೆ?
ಪ್ರಶ್ನೆ 3 – ಕೋವಿಶೀಲ್ಡ್ ಪರಿಣಾಮಕಾರಿತ್ವ ನಿಖರವಾಗಿಲ್ಲ
ಪ್ರಶ್ನೆ 4 – ಷರತ್ತುಬದ್ಧ ಅನುಮತಿ ಎಂದಿದೆ. ಆ ಷರತ್ತುಗಳು ಏನು? ಮಾಹಿತಿ ಏಕಿಲ್ಲ?
ಪ್ರಶ್ನೆ 5 – 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ಪೂರ್ಣಗೊಳ್ಳದೇ ಕೊವ್ಯಾಕ್ಸಿನ್‍ಗೆ ಅನುಮತಿ ನೀಡಲು ಅನುಸರಿಸಿದ ಮಾನದಂಡಗಳೇನು?
ಪ್ರಶ್ನೆ 6 – ಕೊವ್ಯಾಕ್ಸಿನ್ ಪರಿಣಾಮಕಾರಿತ್ವದ ಬಗ್ಗೆ ದತ್ತಾಂಶಗಳು ಎಲ್ಲಿ?
ಪ್ರಶ್ನೆ 7 – ಕೊವ್ಯಾಕ್ಸಿನ್ ಪರಿಣಾಮಕಾರಿತ್ವದ ಮಾಹಿತಿ ಇಲ್ಲದೇ ಅನುಮತಿ ಹೇಗೆ ಸಾಧ್ಯ?

 

Share This Article
Leave a Comment

Leave a Reply

Your email address will not be published. Required fields are marked *