ಕೊರೊನಾ ಸೂಪರ್ ಸ್ಪ್ರೆಡರ್ಸ್ ನಿಯಂತ್ರಿಸಲು ಕೇರಳದಲ್ಲಿ ಕಮಾಂಡೋಗಳ ಬಳಕೆ

Public TV
2 Min Read

ತಿರುವನಂತಪುರಂ: ಕೊರೊನಾ ನಿಯಂತ್ರಣಕ್ಕೆ ಕೇರಳ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಗ್ರಾಮವೊಂದರಲ್ಲಿ 25 ಮಂದಿ ಕಮಾಂಡೋಗಳನ್ನು ನೇಮಕ ಮಾಡಿದೆ.

ತಿರುವನಂತಪುರಂ ಸಮೀಪದ ಸಮುದ್ರ ತೀರ ಪ್ರದೇಶದ ಪೂಂತುರ ಗ್ರಾಮದಲ್ಲಿ ಕೊರೊನಾ ಸೂಪರ್ ಸ್ಪ್ರೆಡರ್ಸ್ ನಿಂದ ಕೇರಳದ ಮೊದಲ ಕ್ಲಸ್ಟರ್ ಆಗಿ ಪರಿವರ್ತನೆ ಆಗಿದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಸ್ಪ್ರೆಡರ್ಸ್ ಗಳನ್ನು ನಿಯಂತ್ರಿಸಲು ಕಮಾಂಡೋಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಗ್ರಾಮಕ್ಕೆ ಕಮಾಂಡೋ, ಅಂಬುಲೆನ್ಸ್, ಪೊಲೀಸ್, ವಾಹನಗಳನ್ನು ಭಾರೀ ಸಂಖ್ಯೆಯಲ್ಲಿ ಕಳುಹಿಸಿದೆ. ಅಲ್ಲದೇ ಗ್ರಾಮದಲ್ಲಿ ಸ್ಪೀಕರ್ ಗಳ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಅನಗತ್ಯವಾಗಿ ಮನೆಯಿಂದ ಹೊರ ಬರುವ ಗ್ರಾಮಸ್ಥರನ್ನು ಅಂಬುಲೆನ್ಸ್ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸುತ್ತಿದ್ದಾರೆ.

ಒಬ್ಬರಿಂದ ಆರು ಜನರಿಗೆ ಸೋಂಕು ಹಬ್ಬಿದರೆ ಅವರನ್ನು ಸೂಪರ್ ಸ್ಪ್ರೆಡರ್ ಎಂದು ಭಾವಿಸಲಾಗುತ್ತದೆ. ಕೇರಳದಲ್ಲಿ ಮೊದಲ ಕ್ಲಸ್ಟರ್ ಆಗಿ ಪೂಂತುರ ಗ್ರಾಮ ಪರಿವರ್ತನೆ ಆಗುತ್ತಿದೆ. ಈ ಗ್ರಾಮದಲ್ಲಿ ಹಲವರು ಸೂಪರ್ ಸ್ಪ್ರೆಡರ್ ಗಳನ್ನು ಗುರುತಿಸಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

ಸೂಪರ್ ಸ್ಪ್ರೆಡರ್ ಗಳಲ್ಲಿ ಮೊದಲು ಆ ಪ್ರದೇಶದ ಮೀನು ವ್ಯಾಪಾರಿ ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಕುಮಾರಿಚಂದ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ. ಕೋವಿಡ್ ಸೋಂಕಿನ ಪತ್ತೆ ಕಾರ್ಯದಲ್ಲಿ ಪಾಸಿಟಿವ್ ವರದಿ ಬಂದಿರುವವರು ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಅಲ್ಲದೇ ಪೂಂತುರ ಗ್ರಾಮದ ನಿವಾಸಿಗಳಾಗಿದ್ದರು. ಈ ಪ್ರದೇಶ ಕೆಲ ವಾರ್ಡ್ ಗಳಲ್ಲಿ ಸೋಂಕಿನ ಹರಡುವಿಕೆ ಹೆಚ್ಚಾಗಿತ್ತು. ಐದು ದಿನಗಳಲ್ಲಿ 600 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, 119ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ.

ಒಬ್ಬ ಮೀನುಗಾರನಿಗೆ ಪಾಟಿಸಿವ್ ಪ್ರಕರಣ ಬಂದಿದ್ದು, ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 120 ಮಂದಿ ಹಾಗೂ ಆತನನ್ನು ಭೇಟಿ ಮಾಡಿದ್ದ 150 ಮಂದಿಯನ್ನು ಗುರುತಿಸಲಾಗಿದೆ. ಪರಿಣಾಮ ಆ ಪ್ರದೇಶದಲ್ಲಿ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ನಿರ್ವಹಿಸಲಾಗುತ್ತಿದೆ. ಗ್ರಾಮದ ಹಲವು ವಾರ್ಡ್ ಗಳಲ್ಲಿ ಕೊರೊನಾ ಭಾರೀ ಸಂಖ್ಯೆಯಲ್ಲಿ ವ್ಯಾಪಿಸಿರುವ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *