ಕೊರೊನಾ ಸಂಕಷ್ಟ- ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ?

Public TV
1 Min Read

ನವದೆಹಲಿ: ಕೊರೊನಾ ಸೋಂಕು ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಸಾಧ್ಯತೆಗಳು ಕಂಡು ಬರುತ್ತಿಲ್ಲ. ಹೀಗಾಗಿ ಮುಂದಿನ ಒಂದು ವರ್ಷ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ವರ್ಕ್ ಫ್ರಂ ಹೋಂ ಮಾದರಿಯಲ್ಲಿ ‘ಲರ್ನ್ ಫ್ರಂ ಹೋಮ್’ ಹೆಸರಿನಲ್ಲಿ ಹೊಸ ಕಲಿಕಾ ಪದ್ಧತಿ ಜಾರಿಗೆ ತರಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಚಿಂತನೆ ನಡೆಸಿದೆ. ಕೊರೊನಾ ಮುಂದಿನ ಒಂದು ವರ್ಷಗಳ ಕಾಲ ನಿಯಂತ್ರಣ ಅಸಾಧ್ಯ ಎನ್ನಲಾಗುತ್ತಿದೆ. ಹೀಗಾಗಿ ಒಂದು ವರ್ಷದ ಮಟ್ಟಿಗೆ ಲರ್ನ್ ಫ್ರಂ ಹೋಮ್ ವ್ಯವಸ್ಥೆ ಜಾರಿಗೆ ತರಲು ತಯಾರಿ ಮಾಡಿಕೊಳ್ಳುತ್ತಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ದೇಶದ 7,964 ಮಂದಿಗೆ ಕೊರೊನಾ- 265 ಜನ ಸಾವು

ಇದಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಮಾರ್ಗಸೂಚಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ 220 ದಿನಗಳ ಕಲಿಕೆಯನ್ನು ವಿಂಗಡಿಸಲಾಗಿದೆ. ಹೊಸ ಪದ್ಧತಿ ಪ್ರಕಾರ 100 ದಿನ ಮಕ್ಕಳು ಮನೆಯಲ್ಲೇ ಕುಳಿತು ಆನ್‍ಲೈನ್ ಮತ್ತು ಶಾಲೆಯ ಇತರೆ ತಂತ್ರಜ್ಞಾನ ಬಳಸಿ ಶಿಕ್ಷಣ ಪಡೆಯಬಹುದಾಗಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಸರ್ಕಾರಿ ಟಿವಿ ಚಾನಲ್‍ಗಳ ಮೂಲಕ ಶಿಕ್ಷಣ ನೀಡುವ ಸಾಧ್ಯತೆ ಇದೆ. ಬಾಕಿ 100 ದಿನಗಳು ಮಾತ್ರ ಶಾಲೆಯಲ್ಲಿ ತರಗತಿ ಹಾಜರಾಗಬೇಕು. ಉಳಿದ 20 ದಿನಗಳಲ್ಲಿ ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆ ಮತ್ತಿತರ ಪಠ್ಯೇತರ ಚಟುವಟಿಕೆ ಮೀಸಲಿಡುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಈ ಸಂಬಂಧ ಹಲವು ಆಯಾಮಗಳಲ್ಲಿ ಚಿಂತನೆ ನಡೆಸಿರುವ ಎಂಎಚ್‌ಆರ್‌ಡಿ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಿದೆ. ಬಳಿಕ ಈ ವ್ಯವಸ್ಥೆಯನ್ನು ಅಧಿಕೃತ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *