ನೆಲಮಂಗಲ: ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಶಾಸಕ ಮಂಜುನಾಥ್ ಲಾಕ್‍ಡೌನ್ ಸಮಯದಿಂದ ಲಕ್ಷಾಂತರ ಕುಟುಂಬಗಳಿಗೆ ದಿನಸಿ, ತರಕಾರಿ ಇನ್ನಿತರ ವಸ್ತುಗಳನ್ನ ನೀಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಹೌದು. ರಾಜ್ಯದಲ್ಲಿ ಕೊರೊನಾ ಸೋಂಕು ಹರಡಿ ಸಾಕಷ್ಟು ಬಡ ಕುಟುಂಬಗಳು ಲಾಕ್ ಡೌನ್ ಸಮಯದಲ್ಲಿ ನಾನಾ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಇತ್ತ ಕೆಲಸ ಇಲ್ಲದೆ ಒಂದೊತ್ತು ಊಟಕ್ಕೂ ಕೂಲಿ ಕಾರ್ಮಿಕರು ಮನೆಯನ್ನ ಖಾಲಿ ಮಾಡಿಕೊಂಡು ತಮ್ಮ ಊರುಗಳತ್ತ ಹೀಗಾಗಲೇ ತೆರಳಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ಬಡವರಿಗೆ ಸಹಾಯ ಮಾಡಿದ್ದಾರೆ. ಅಲ್ಲದೆ ಇಂದು ನೂರಾರು ವಿಕಲಚೇತನ ಕುಟುಂಬಕ್ಕೆ ಆಹಾರ ಕಿಟ್ ಗಳನ್ನ ನೀಡುವ ಮೂಲಕ ನೆರವಿಗೆ ದಾವಿಸಿದ್ದಾರೆ.
ವಿಕಲಚೇತನರಿಗೆ ಗೌರವಿಸಿ ಮಾತನಾಡಿದ ಶಾಸಕರು, ಕೊರೊನಾ ಮಾಹಾಮಾರಿ ಬಂದ ವೇಳೆಯಿಂದ ಈ ಬಡ ಕುಟುಂಬಗಳಿಗೆ ಸರ್ಕಾರದಿಂದ ನೀಡಲ್ಪಡುವ ಮಾಸಾಸನ 06 ತಿಂಗಳಿನಿಂದ ಇಲ್ಲದೆ ಕಷ್ಟದಲ್ಲಿರುವುದನ್ನು ಮನಗಂಡು ಆಹಾರ ಕಿಟ್ ಸಾಮಾಗ್ರಿಗಳನ್ನು ವಿತರಿಸಿಲಾಗಿದೆ. ವಿಕಲಚೇತನರು ಅಂಗವೈಕಲ್ಯತೆ ಹೊಂದಿರಬಹುದು ಆದರೆ ಅವರು ವಿಶೇಷ ಶಕ್ತಿ ಹಾಗೂ ಕೌಶಲ್ಯವನ್ನು ಹೊಂದಿರುವಂತಹ ಪ್ರತಿಭಾವಂತರಾಗಿದ್ದು ನಿಮ್ಮಗಳ ಸೇವೆಗೆ ಪುಣ್ಯದ ಕೆಲಸ ಎಂದರು.
ಈ ಸಂದರ್ಭ ಮುಖಂಡರುಗಳಾದ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮುನಿಸ್ವಾಮಣ್ಣ, ಎಪಿಎಂಸಿ ನಿರ್ದೇಶಕರಾದ ಲೋಕೇಶ್ ಗೌಡ ಕೃಷ್ಣಪ್ಪ, ಭೈರೇಗೌಡ, ರಾಮಚಂದ್ರ, ಮುನೇಗೌಡ ಮತ್ತಿತರರು ಭಾಗಿಯಾಗಿದ್ದರು.