ಕೊರೊನಾ ವ್ಯಾಕ್ಸಿನ್‍ಗೆ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ

Public TV
1 Min Read

ಬೆಂಗಳೂರು: ಲಸಿಕೆ ಪಡೆಯಲು ಆನ್‍ಲೈನ್ ರಿಜಿಸ್ಟ್ರೇಶನ್ ಕಡ್ಡಾಯವಲ್ಲ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಪೂರ್ವ ನೋಂದಣಿ ಅಥವಾ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ. ಗ್ರಾಮೀಣ ಭಾಗದ ಜನರಿಗೆ ಆನ್‍ಲೈನ್ ಕಷ್ಟವಾದ ಹಿನ್ನೆಲೆ ಸಚಿವಾಲಯ ಈ ನಿರ್ಧಾರ ಪ್ರಕಟಿಸಿದೆ.

ಆನ್‍ಲೈನ್ ನೋಂದಣಿ ಸಮಸ್ಯೆ ಹಿನ್ನೆಲೆ ಗ್ರಾಮೀಣ ಭಾಗದ ಜನರಿಗೆ ವ್ಯಾಕ್ಸಿನೇಷನ್ ಆಗಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಹೊಸ ಆದೇಶದನ್ವಯ 18 ವರ್ಷ ಮೇಲ್ಪಟ್ಟವರು ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ ವ್ಯಾಕ್ಸಿನ್ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಲಸಿಕಾ ಕೇಂದ್ರದಲ್ಲಿಯೇ ನೋಂದಣಿ ವ್ಯವಸ್ಥೆ ಇರಲಿದೆ. ಜನರು ನೇರವಾಗಿ ನೋಂದಣಿ ಮಾಡಿಕೊಂಡು ಅದೇ ದಿನ ಲಸಿಕೆ ಪಡೆಯಬಹುದಾಗಿದೆ.

ಆನ್‍ಲೈನ್ ರಿಜಿಸ್ಟ್ರೇಶನ್ ಇಲ್ಲದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳುವ ಪ್ರಕ್ರಿಯೆ ಯನ್ನು ವಾಕ್ ಇನ್ ಅಂತಾ ಕರೆಯುತ್ತಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕೋ-ವಿನ್‍ನಲ್ಲಿ ರಾಜ್ಯಗಳು ಗ್ರಾಮೀಣ ಅಥವಾ ನಗರ ಎಂದು ವರ್ಗೀಕರಿಸಿದ್ದು, ಒಟ್ಟು 69,995 ವ್ಯಾಕ್ಸಿನೇಷನ್ ಕೇಂದ್ರಗಳು ಇವೆ.

49,883 ವ್ಯಾಕ್ಸಿನೇಷನ್ ಕೇಂದ್ರಗಳು, ಅಂದರೆ 71% ಗ್ರಾಮೀಣ ಪ್ರದೇಶಗಳಲ್ಲಿವೆ. ಅತಿ ಹೆಚ್ಚು ವ್ಯಾಕ್ಸಿನೇಷನ್ ಸೆಂಟರ್ ಗ್ರಾಮೀಣ ಭಾಗದ ಕಡೆ ಇರುವುದರಿಂದ ಆನ್ ರಿಜಿಸ್ಟ್ರೇಶನ್ ದೊಡ್ಡ ಸಮಸ್ಯೆ ಆಗ್ತಿದೆ ಎಂಬುದು ವರದಿಯಾಗಿದೆ. ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗುತ್ತೆ ಅಂತಾ ಆನ್‍ಲೈನ್ ನೋಂದಣಿ ರದ್ದುಗೊಳಿಸಿ ನೇರವಾಗಿ ಹತ್ತಿರದ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *