ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಹಾಗೂ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು ಕಳಪೆ ಸಾಧನೆ ಮಾಡುತ್ತಿದೆ.
ಕರ್ನಾಟಕ ಕೊರೊನಾ ಡೇಂಜರ್‍ನಲ್ಲಿದ್ದು ಆ್ಯಕ್ಟಿವ್ ಕೇಸ್‍ಗಳಲ್ಲಿ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 2,91,256 ಆ್ಯಕ್ಟಿವ್ ಕೇಸ್ ಗಳಿದ್ದು ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ ಹೊರತುಪಡಿಸಿದರೆ ರಾಜ್ಯದಲ್ಲಿ 98,463 ಮಂದಿಯಲ್ಲಿ ವೈರಸ್ ಜೀವಂತವಾಗಿದ್ದು ಎರಡನೇ ಸ್ಥಾನದಲ್ಲಿದೆ. ಮೂನರೇ ಸ್ಥಾನದಲ್ಲಿ ಆಂಧ್ರಪ್ರದೇಶವಿದ್ದು 93,204 ಸಕ್ರಿಯ ಪ್ರಕರಣಗಳಿದರೆ ಉತ್ತರ ಪ್ರದೇಶದಲ್ಲಿ 67,287 ಆ್ಯಕ್ಟಿವ್ ಕೇಸ್‍ಗಳಿವೆ.
ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಅಪಾಯದಲ್ಲಿದೆ. ಹಾಟ್‍ಸ್ಪಾಟ್ ಸಿಟಿ ಎನಿಸಿಕೊಂಡಿದ್ದ ಮುಂಬೈಯನ್ನೂ ಮೀರಿಸಿ ಆ್ಯಕ್ಟಿವ್ ಕೇಸ್‍ಗಳಲ್ಲಿ ಬೆಂಗಳೂರು ಎರಡನೇ ಸ್ಥಾನಕ್ಕೇರಿದೆ. ಮಹಾನಗರಗಳ ಪೈಕಿ ಪುಣೆ ಆ್ಯಕ್ಟಿವ್ ಕೇಸ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪುಣೆಯಲ್ಲಿ ಒಟ್ಟು 2,35,419 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 78,284 ಆ್ಯಕ್ಟಿವ್ ಕೇಸ್ ಗಳಿವೆ. ಬೆಂಗಳೂರಲ್ಲಿ ಒಟ್ಟು 1,73,628 ಮಂದಿ ಕೊರೊನಾಗೆ ತುತ್ತಾಗಿದ್ದು, 40,527 ಮಂದಿಯಲ್ಲಿ ವೈರಸ್ ಜೀವಂತವಾಗಿದೆ.
ಮುಂಬೈನಲ್ಲಿ 31,123, ಚೆನ್ನೈನಲ್ಲಿ 10,439, ದೆಹಲಿಯಲ್ಲಿ 28,691, ಹೈದರಾಬಾದ್‍ನಲ್ಲಿ 30,400 ಆ?ಯಕ್ಟಿವ್ ಕೇಸ್ ಗಳಿದೆ. ಸೋಂಕು ನಿಯಂತ್ರಣದಲ್ಲಿ ಚೆನೈ ಮತ್ತು ದೆಹಲಿ ಉತ್ತಮ ನಿಯಂತ್ರಣ ಸಾಧಿಸಿದೆ.