ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?

Public TV
2 Min Read

ಬೆಂಗಳೂರು: ದೇಶಾದ್ಯಂತ ಜನ ಕೊರೊನಾ ನಿರೋಧಕ ಲಸಿಕೆಯನ್ನು ಇಂಜೆಕ್ಷನ್ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ ಈ ಇಂಜೆಕ್ಷನ್ ತೆಗೆದುಕೊಳ್ಳಲು ನಿರ್ದೇಶಕರು ಹೆದರಿಕೊಂಡ್ರಾ ಎಂಬ ಪ್ರಶ್ನೆಯೊಂದು ಮೂಡಿದೆ.

https://twitter.com/prashanth_neel/status/1402163198451601409

ಹೌದು. ಕೈಗೆ ನರ್ಸ್ ಇಂಜೆಕ್ಷನ್ ನೀಡುವಾಗ ಪ್ರಶಾಂತ್ ನೀಲ್ ಅವರು ಬಲಗಡೆಗೆ ತಿರುಗಿ ತಮ್ಮ ಒಂದು ಕೈಯನ್ನು ಕಣ್ಣಿಗೆ ಇಟ್ಟಿದ್ದಾರೆ. ಇದು ಅವರು ಇಂಜೆಕ್ಷನ್ ತೆಗೆದುಕೊಳ್ಳಲು ಭಯಪಟ್ಟುಕೊಂಡಂತೆ ಕಾಣಿಸುತ್ತಿದೆ. ಇದನ್ನೂ ಓದಿ: ಬದುಕಿದ್ದವರ ಹೆಸರಲ್ಲೇ ರೆಡಿಯಾಗುತ್ತೆ ಡೆತ್ ಸರ್ಟಿಫಿಕೇಟ್- ಕೋವಿಡ್ ಬೇಕಾ, ನಾನ್ ಕೋವಿಡ್ ಬೇಕಾ?

ತಾವು ಲಸಿಕೆ ಪಡೆದುಕೊಂಡ ಫೋಟೋವನ್ನು ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಇಂದು ನಾನು ಕೊರೊನಾ ಲಸಿಕೆ ಪಡೆದುಕೊಂಡಿದ್ದೇನೆ. ಯಾರೆಲ್ಲ ಲಸಿಕೆ ಪಡೆದುಕೊಂಡಿಲ್ಲವೋ ಅವರೆಲ್ಲರೂ ಈ ಕೂಡಲೇ ತಮ್ಮ ಕುಟುಂಬ ಸಮೇತರಾಗಿ ಲಸಿಕೆ ಪಡೆದುಕೊಳ್ಳಿ ಎಂದು ಕರೆ ನೀಡಿದ್ದಾರೆ.

ಪ್ರಶಾಂತ್ ನೀಲ್ ಅವರು ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಒಬ್ಬರು ಸರ್, ಇಂಜೆಕ್ಷನ್ ಕೈಗೆ ಕೊಟ್ಟಿರೋದು. ನೀವ್ಯಾಕೆ ಕಣ್ಣು ಮುಚ್ಚಿದ್ದಿರಾ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ನರ್ಸ್ ಕಂಡ್ರೆ ನಾಚಿಕೆ ಇರಬೇಕು ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ

ಕೆಜಿಎಫ್ ನಟಿ ರವೀನಾ ಟಂಡನ್ ಕೂಡ ಕಾಮೆಂಟ್ ಮಾಡಿದ್ದಾರೆ, ಪ್ರಶಾಂತ್ ಸರ್ ಇದು ತುಂಬಾ ಮುದ್ದಾಗಿದೆ. ನಾನು ಲಸಿಕೆ ಪಡೆದಕೊಂಡ ವೀಡಿಯೋವನ್ನು ದಯವಿಟ್ಟು ನೋಡಿ. ಅದತಿಂದ ನಿಮಗೆ ಧೈರ್ಯ ಬರುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ನೀಲ್, ಮೇಡಂ ಬಹುಶಃ ನಾವು ವೀಡಿಯೋ ನೋಡಲೇ ಬೇಕು. ನೀವು ಲಸಿಕೆ ಪಡೆದ ವೀಡಿಯೋ ನಮ್ಮನ್ನು ಪ್ರೇರೇಪಿಸಬಹುದು ಎಂದು ಬರೆದುಕೊಂಡು ನಗುವ ಎಮೋಜಿ ಹಾಕಿದ್ದಾರೆ.

https://twitter.com/prashanth_neel/status/1402175521308303362

ಒಟ್ಟಿನಲ್ಲಿ ಪ್ರಶಾಂತ್ ನೀಲ್ ಅವರ ಫೋಟೋಗೆ ಫನ್ನಿಯಾಗಿ ಸಾಕಷ್ಟು ಕಾಮೆಂಟ್ ಗಳು ಹಾಗೂ ಮೀಮ್ಸ್ ಗಳು ಬಂದಿವೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪ್ರಶಾಂತ್ ನೀಲ್ ಅವರು ಥಿಂಕ್ ಡಿಫರೆಂಟ್ ಎಂಬಂತೆ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *