ಕೊರೊನಾ ನಿಯಂತ್ರಣಕ್ಕೆ ಬಿಎಸ್‍ವೈ ಹಗಲು ರಾತ್ರಿ ಶ್ರಮಿಸ್ತಿದ್ದಾರೆ: ಆರ್. ಅಶೋಕ್

Public TV
1 Min Read

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಮೇಕ್ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ ನಂತರ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆ ವೇಳೆ ಮಕ್ಕಳ ತಜ್ಞರು ಆಸ್ಪತ್ರೆ ಕೊರತೆ ಆಗಬಾರದು. ಹೀಗಾಗಿ ಮಕ್ಕಳಿಗೆ ಚಿಕಿತ್ಸೆ ಕೊಡುವ ಇತರೆ ಪರಿಣಿತ ವೈದ್ಯರಿಗೆ ನಿಮ್ಹಾನ್ಸ್‍ನಲ್ಲಿ ತರಬೇತಿ ನೀಡಲಾಗುತ್ತಿದೆ. ಕೊರೊನಾ 3ನೇ ಅಲೆಯನ್ನ ಎದುರಿಸೋದು ನಮ್ಮ ಸರ್ಕಾರದಿಂದ ದೃಢ ಸಂಕಲ್ಪವಾಗಿದೆ. ಈಗಾಗಲೇ ಮೂರನೇ ಅಲೆ ಎದುರಿಸಲು ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ

ಕೇವಲ 1 ತಿಂಗಳ ಅವಧಿಯಲ್ಲಿ ದೇಶ-ರಾಜ್ಯದ ಮೊಟ್ಟ ಮೊದಲ ಆಸ್ಪತ್ರೆ ನಿರ್ಮಾಣ ಆಗಿದೆ. ರಡು ತಿಂಗಳ ಒಳಗೆ 3ನೇ ಅಲೆ ಬರಬಹುದು ಅಂತ ತಜ್ಞರು ತಿಳಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಸದಾ ಮಾಡುತ್ತಾರೆ. ಅವರು ಬೇಡ ಅಂದ್ರೂ ಮಾಡುತ್ತಾರೆ. ಆದರೆ ಬಿಎಸ್‍ವೈ ಕೊರೊನಾ ಕಂಟ್ರೋಲ್‍ಗಾಗಿ ಹಗಲು ರಾತ್ರಿ ದುಡಿದಿದ್ದಾರೆ ಎಂದರು. ಇದನ್ನೂ ಓದಿ:  ಅಂದು ಬೆಸ್ಟ್ ಫ್ರೆಂಡ್ ಹೆಂಡ್ತಿಯಾದ್ರು, ಇಂದು ಪತ್ನಿಯೇ ಬೆಸ್ಟ್ ಫ್ರೆಂಡ್: ರಮೇಶ್

ಈ ಮೊದಲು ಕೇರಳ ಮಾಡೆಲ್ ಅಂತಿದ್ರು ಆದರೆ ಈಗ ಕರ್ನಾಟಕ ಮಾಡೆಲ್ ಆಗಿದೆ. ಎಷ್ಟೇ ಟೀಕೆ ಟಿಪ್ಪಣಿ ಮಾಡಿದ್ರೂ ಕೊರೊನಾ ಕಂಟ್ರೋಲ್‍ಗೆ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಮೂರನೇ ಅಲೆಯನ್ನ ಇನ್ನಷ್ಟು ಸಮರ್ಥವಾಗಿ ಕಂಟ್ರೋಲ್ ಮಾಡುತ್ತೇವೆ ಅಂತ ಅತ್ಮವಿಶ್ವಾಸ ವ್ಯಕ್ತಪಡಿಸದರು.

Share This Article
Leave a Comment

Leave a Reply

Your email address will not be published. Required fields are marked *