ಕೊರೊನಾದಿಂದ ಡೆಲಿವರಿ ಬಾಯ್ ಆದ 4 ಲಕ್ಷ ಸಂಬಳ ಪಡೆಯುತ್ತಿದ್ದ ಪೈಲಟ್

Public TV
1 Min Read

-ಈಗ ದಿನಕ್ಕೆ 2 ಸಾವಿರ ಗಳಿಸೋದು ಕಷ್ಟ
-ಹಳೆಯದೆಲ್ಲ ನೆನಪು ಬಂದಾಗ ವಿಮಾನ ನೋಡ್ತೀನಿ

‎ಬ್ಯಾಂಗ್‌ಕಾಕ್: ಕೊರೊನಾದಿಂದ ತಿಂಗಳಿಂದ 4 ರಿಂದ 5 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಪೈಲಟ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

ಕೊರೊನಾ ಸುಳಿಗೆ ಸಿಲುಕಿ ಹಲವರು ಜೀವವನ್ನ ಕಳೆದುಕೊಂಡದ್ರೆ, ಬಹುತೇಕರು ಜೀವನವನ್ನು ಕಳೆದುಕೊಳ್ಳುವಂತಾಗಿದೆ. ಕೊರೊನಾ ತಡೆಗಾಗಿ ವಿಶ್ವಮಟ್ಟದಲ್ಲಿ ಲಾಕ್‍ಡೌನ್ ಸೂತ್ರ ಜಾರಿಗೊಳಿಸಿದ ಪರಿಣಾಮ ಎಷ್ಟೋ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಕೂಲಿ ಕಾರ್ಮಿಕರು ವಾಹನದ ವ್ಯವಸ್ಥೆ ಇಲ್ಲದೇ ಕಾಲ್ನಡಿಗೆಯಲ್ಲಿಯೇ ತಲೆಯ ಮೇಲೆ ಚೀಲ ಹೊತ್ತು ಹೆಜ್ಜೆ ಹಾಕಿರುವ ದೃಶ್ಯಗಳು ಕಣ್ಮುಂದೆ ಬರುತ್ತವೆ.

42 ವರ್ಷದ ನಾಕರಿನ್ ಇಂಟಾ ನಾಲ್ಕು ವರ್ಷಗಳಿಂದ ಪೈಲಟ್ ವೃತ್ತಿಯಲ್ಲಿದ್ದಾರೆ. ಕೊರೊನಾದಿಂದಾಗಿ ಉದ್ಯೋಗ ಕಳೆದುಕೊಂಡ ನಾಕರಿನ್ ಕುಟುಂಬ ನಿರ್ವಹಣೆಗಾಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

ಈ ಕುರಿತಿ ಮಾತನಾಡಿರುವ ನಾಕರಿನ್, ನಮ್ಮ ಏರ್ ಲೈನ್ಸ್ ಬಹುತೇಕ ಸಿಬ್ಬಂದಿಯನ್ನು ಸಂಬಳ ರಹಿತ ರಜೆಯ ಮೇಲೆ ಕಳುಹಿಸಿದೆ. ನನ್ನ ಸಹೋದ್ಯೋಗಿಗಳು ಬೇರೆ ವ್ಯವಹಾರಗಳಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ರೆ ಎಲ್ಲರೂ ಏರ್ ಲೈನ್ಸ್ ನಲ್ಲಿ ಪಡೆಯುತ್ತಿದ್ದ ಸಂಬಳಕ್ಕಿಂತ ಕಡಿಮೆ ಹಣಕ್ಕಾಗಿ ಉದ್ಯೋಗ ಮಾಡುತ್ತಿದ್ದಾರೆ. ಆದ್ರೆ ಏರ್ ಲೈನ್ಸ್ ಯಾರನ್ನೂ ಕೆಲಸದಿಂದ ತೆಗೆದು ಹಾಕಿಲ್ಲ. ಮತ್ತೆ ನಮ್ಮನ್ನು ಕೆಲಸಕ್ಕೆ ಕರೆಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.

ಓರ್ವ ಪೈಲಟ್ ತಿಂಗಳಿಗೆ 4 ರಿಂದ 5 ಲಕ್ಷ ರೂ. ಸಂಬಳ ಪಡೆಯುತ್ತಿದ್ದರು. ಈಗ ಅವರಿಗೆ ದಿನಕ್ಕೆ 2 ಸಾವಿರ ರೂ. ಹೊಂದಿಸಲು ಕಷ್ಟವಾಗ್ತಿದೆ. ನನ್ನ ಕ್ಯಾಪ್ಟನ್, ಸಿಬ್ಬಂದಿ ನೆನಪು ಆದಾಗ ಆಕಾಶದಲ್ಲಿ ಹಾರುತ್ತಿರುವ ವಿಮಾನವನ್ನು ನೋಡುತ್ತೇನೆ. ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿದಾಗ ಮೊದಲು ಆರ್ಡರ್ ಬಂದಾಗ ನೀಡಿದ ಸೇವೆಯ ಅನುಭವ ತುಂಬಾ ವಿಭಿನ್ನವಾಗಿತ್ತು ಎಂದು ನಾಕರಿನ್ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *