ಕೊರೊನಾದಿಂದ ಕೌರವ ಬೇಗ ಗುಣಮುಖರಾಗಲು ಅಭಿಮಾನಿಗಳಿಂದ ಪೂಜೆ

Public TV
1 Min Read

ಕೊಪ್ಪಳ: ಸಚಿವ ಬಿ.ಸಿ ಪಾಟೀಲ್ ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೌರವನ ಅಭಿಮಾನಿ ಬಳಗದಿಂದ ಸಚಿವರು ಮತ್ತು ಕುಟುಂಬ ವರ್ಗದವರು ಬೇಗ ಗುಣ ಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿರುವ ಶ್ರೀ ಕೋಟೆ ಆಂಜನೇಯ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿ.ಸಿ.ಪಾಟೀಲ್ ಅಭಿಮಾನಿ ಬಳಗದ ಬಸನಗೌಡ ಕಕ್ಕರಗೊಳರವರು ನೇತೃತ್ವದಲ್ಲಿ ಸಚಿವರು ಕೊರೊನಾ ಸೋಂಕಿನಿಂದ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಕೃಷಿ ಸಚಿವರಾಗಿ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಗಲಿರುಳು ರಾಜ್ಯಾದ್ಯಾದಂತೆ ಸಂಚರಿಸಿ ರೈತರ ಏಳಿಗೆಗಾಗಿ ಶ್ರಮಿಸುತ್ತಿರುವ ಸಚಿವರು ಬೇಗ ಗುಣಮುಖರಾಗಿ ಮತ್ತೆ ತಮ್ಮ ಕಾರ್ಯಗಳತ್ತ ತೊಡಗಿಕೊಳ್ಳಲಿ ಎಂದು ಬೇಡಿಕೊಂಡರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಪತ್ನಿ, ಅಳಿಯ ಹಾಗೂ ಅವರ ನಿವಾಸದ ಸಿಬ್ಬಂದಿ ಸೇರಿ ಒಟ್ಟು ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದು, ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗ ಸೇರಿದಂತೆ ಒಟ್ಟು ಐವರಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರನ್ನು ನಿರ್ದಿಷ್ಟವಾದ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. ಅವರೆಲ್ಲ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಹಾರೈಕೆಯೂ ಇರಲಿ ಎಂದು ಬರೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *