ಕೊನೆ ಇನ್‍ಸ್ಟಾ ಪೋಸ್ಟ್ ನಲ್ಲಿ ಅಮ್ಮನ ಬಗ್ಗೆ ಭಾವುಕ ಮಾತು

Public TV
1 Min Read

-ಖಿನ್ನತೆಗೆ ಜಾರಿದ್ರಾ ಸುಶಾಂತ್?
-ಒಂಟಿತನದ ಸುಳಿವು ನೀಡಿತ್ತು ಕೊನೆ ಪೋಸ್ಟ್
-ಕಣ್ಣೀರು ತರಿಸುತ್ತೆ ಅಮ್ಮ-ಮಗನ ಕಪ್ಪು ಬಿಳುಪು ಫೋಟೋ

ಮುಂಬೈ: ಇರ್ಫಾನ್ ಖಾನ್, ರಿಷಿ ಕಪೂರ್, ವಾಜೀದ್ ಖಾನ್ ಬಳಿಕ ಬಾಲಿವುಡ್ ಉದ್ಯಮದ ಮತ್ತೊಂದು ಕೊಂಡಿ ಕಳಚಿದೆ. ಹಂತ ಹಂತವಾಗಿ ಸ್ಟಾರ್ ಪಟ್ಟಕ್ಕೇರಿದ ಸುಶಾಂತ್ ಸಿಂಗ್ ರಜಪೂರ್ ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಡೀ ಬಾಲಿವುಡ್‍ನಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಗಣ್ಯರು ನಟನ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಮೃತ ಸುಶಾಂತ್ ಕೊನೆಯ ಇನ್‍ಸ್ಟಾಗ್ರಾಂ ಪೋಸ್ಟ್ ಮತ್ತಷ್ಟು ಕಣ್ಣೀರು ತರಿಸುವಂತಿದೆ.

ತಾಯಿ ಫೋಟೋ ಶೇರ್ ಮಾಡಿಕೊಂಡಿರುವ ಸುಶಾಂತ್, ಹಳೆಯ ನೆನಪುಗಳಿಂದ ಕಣ್ಣೀರು ಆವಿಯಾಗಿ ಹೋಗಿದೆ. ನಿನ್ನ ನಗುವಿನಿಂದ ಕೊನೆಯಾದ ಕನಸು ಮೂಡುತ್ತಿದೆ. ಎರಡಲ್ಲಿ ಯಾವುದನ್ನು ಆಯ್ಕೆ ಮಾಡಲಿ ಅಮ್ಮ, ಇವುಗಳಲ್ಲಿ ಯಾವುದನ್ನ ಆಯ್ಕೆ ಮಾಡಿಕೊಳ್ಳಲಿ ಎಂದು ಬರೆದುಕೊಂಡಿದ್ದರು. ತಾಯಿ ಮತ್ತು ತಮ್ಮ ಕಪ್ಪು-ಬಿಳುಪು ಫೋಟೋ ಪೋಸ್ಟ್ ಮಾಡಿದ್ದರು.

ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸುಶಾಂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಒಬ್ಬರೇ ವಾಸವಾಗಿದ್ದರು. ಇಂದು ಮನೆಗೆ ಕೆಲಸದವರು ಬಂದಾಗ ಸಾವಿನ ವಿಷಯ ಬೆಳಕಿಗೆ ಬಂದಿದೆ. ಲಾಕ್‍ಡೌನ್ ಹಿನ್ನೆಲೆ ಒಂಟಿಯಾಗಿದ್ದ ಸುಶಾಂತ್ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸರು ಸುಶಾಂತ್ ಪಾರ್ಥಿವ ಶರೀರವವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಪೊಲೀಸರು ಸುಶಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಂದ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಹಾಗೆ ನೆರೆಹೊರೆಯವರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *