ಕೊನೆಗೂ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡ ಕಾಜಲ್

Public TV
2 Min Read

ಹೈದರಾಬಾದ್: ಇನ್ನೇನು ಕೆಲವೇ ದಿನಗಳಲ್ಲಿ ನಟಿ ಕಾಜಲ್ ಅಗರ್ವಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದುವರೆಗೂ ತಮ್ಮ ಭಾವಿ ಪತಿಯನ್ನು ಪರಿಚಯಿಸದ ನಟಿ ಇದೀಗ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಹೌದು. ತಮ್ಮ ಭಾವಿ ಪತಿ ಜೊತೆ ತೆಗೆಸಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಾಜಲ್, ನಮ್ಮ ಕಡೆಯಿಂದ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಮದುವೆಗೂ ಮುನ್ನ ಕಾಜಲ್ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಕಾಜಲ್ ಮತ್ತು ಗೌತಮ್ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಾಜಲ್ ನಿಶ್ಚಿತಾರ್ಥದ ರಿಂಗ್ ರಿವೀಲ್ ಮಾಡಿದ್ದರು. ಕಾಜಲ್ ಉಂಗುರವನ್ನು ತೋರಿಸುತ್ತಿರುವ ಕೈ ಬೆರಳಿನ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿತ್ತು. ಉಂಗುರ ತೋರಿಸಿ ಸೂಪರ್ ಎಂದು ಹೇಳಿರುವ ವಿಡಿಯೋ ಎಲ್ಲಾ ಕಡೆ ಹರಿದಾಡಿತ್ತು. ನಿಶ್ಚಿತಾರ್ಥದ ಬಳಿಕ ಕಾಜಲ್ ಎಲ್ಲಿಯೂ ಉಂಗುರ ರಿವೀಲ್ ಮಾಡಿರಲಿಲ್ಲ.

 

View this post on Instagram

 

Happy Dussehra from us to you ! @kitchlug #kajgautkitched

A post shared by Kajal Aggarwal (@kajalaggarwalofficial) on

ಈ ಹಿಂದೆ ಮದುವೆ ವಿಚಾರವನ್ನು ಕೂಡ ಇನ್ ಸ್ಟಾ ಮೂಲಕವೇ ರಿವೀಲ್ ಮಾಡಿದ್ದರು. ನಾನು ಇದೇ ಅಕ್ಟೋಬರ್ 30ರಂದು ಗೌತಮ್ ಕಿಚ್ಲು ಅವರನ್ನು ಮುಂಬೈನಲ್ಲಿ ಮದುವೆ ಆಗುತ್ತಿದ್ದೇನೆ. ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಆಹ್ವಾನಿಸಲಾಗಿದೆ. ಹೊಸ ಜೀವನಕ್ಕೆ ಕಾಲಿಡಲು ನಾನು ಥ್ರಿಲ್ ಆಗಿದ್ದೇನೆ. ಇಷ್ಟು ದಿನ ನೀವು ತೋರಿಸಿದ ಅನಿಯಮಿತ ಪ್ರೀತಿಗೆ ಅಭಾರಿಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಹೊಸ ಬದುಕಿಗೆ ಎಂಟ್ರಿ ಕೊಡಲು ಉತ್ಸುಕಳಾಗಿದ್ದೇನೆ. ಮುಂದೆಯೂ ನಾನು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿಮ್ಮನನ್ನ ರಂಜಿಸುತ್ತೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ಕಾಜಲ್ ಬರೆದುಕೊಂಡಿದ್ದರು.

 

View this post on Instagram

 

♾????????

A post shared by Kajal Aggarwal (@kajalaggarwalofficial) on


ಕಾಜಲ್ ಅಗರ್ವಾಲ್ ಮದುವೆ ಆಗುತ್ತಿರುವ ಗೌತಮ್ ಕಿಚ್ಲು, ಡಿಸರ್ನ್ ಲಿವಿಂಗ್ ಸಂಸ್ಥೆಯ ಸ್ಥಾಪಕರು. ಇನ್ನು ಗೌತಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಾವು ಓರ್ವ ಇಂಟಿರೀಯರ್ ಡಿಸೈನರ್, ಡಿಸರ್ನ್ ಲಿವಿಂಗ್ ಸ್ಥಾಪಕ ಎಂದು ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *