ಬೆಂಗಳೂರು: ಸತತ ಮೂರು ಗಂಟೆಗಳ ನಂತರ ಪಾದರಾಯನಪುರದ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಅಂಬುಲೆನ್ಸ್ ಮೂಲಕ ಇಮ್ರಾನ್ ಪಾಷಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಮನವೊಲಿಸದ ನಂತರ ಇಮ್ರಾನ್ ಮನೆಯಿಂದ ಹೊರ ಬಂದಿದ್ದಾರೆ. ಮನೆಯಿಂದ ಹೊರಗೆ ಬಂದು, ಜನರ ಕಡೆಗೆ ಕೈ ಬೀಸಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಹೋಗಿದ್ದಾರೆ.
ಇಮ್ರಾನ್ ಪಾಷಾಗೆ ಇರೋದು ಎರಡನೇ ಹಂತದ ಕೊರೊನಾವಾಗಿದೆ. ಅತಿಯಾದ ನೆಗಡಿ ಮತ್ತು ಕೆಮ್ಮು ಇದೆ. ಇದರಿಂದ ಕುಟುಂಬಸ್ಥರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಅಲ್ಲದೇ ಇಮ್ರಾನ್‍ಗೆ 8 ದಿನದ ಹಿಂದೆಯೇ ಉಸಿರಾಟದ ತೊಂದರೆ ಇತ್ತು. ಮೂರು ದಿನದ ಹಿಂದೆ ದಿನಸಿ ವಿತರಣೆ ಕೂಡ ಮಾಡಿದ್ದರು. ಹೀಗಾಗಿ ಇಮ್ರಾನ್ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ.
ಇಮ್ರಾನ್‍ಗೆ ಶುಕ್ರವಾರ ರಾತ್ರಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಆದರೆ ಇದುವರೆಗೂ ಆಸ್ಪತ್ರೆಗೆ ಹೋಗದೆ ಮನೆಯಲ್ಲಿದ್ದರು. ಬೆಳಗ್ಗೆಯಿಂದಲೇ ಅವರ ಮನೆ ಮುಂದೆ ಆರೋಗ್ಯ ಅಧಿಕಾರಿಗಳು, ಪೊಲೀಸರು ಕಾದು ಕುಳಿತಿದ್ದರು. ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಇಮ್ರಾನ್ ಮನೆಯಿಂದ ಹೊರಬಾರದೆ ಕುಳಿತಿದ್ದರು. ಅಷ್ಟೇ ಅಲ್ಲದೇ ಇಮ್ರಾನ್ ತಂದೆ ಮತ್ತು ಜಮೀರ್ ಆಹಮ್ಮದ್ ಕೂಡ ಮನೆಯ ಬಳಿ ಬಂದು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಇಮ್ರಾನ್ ಪಾಷಾ ಹೊರಗೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಮನೆಯಿಂದ ಹೊರಬಾರದಿದ್ದರೆ ಕೇಸ್ ದಾಖಲು ಮಾಡಬೇಕಾಗುತ್ತೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಬೇಲ್ ಸಿಕ್ಕೊಲ್ಲ. ವರದಿ ಬರುವ ತನಕ ಪ್ರತ್ಯೇಕ ಐಲೋಲೇಷನ್ ಅಲ್ಲಿ ಇರಿ ಅಂತ ವಾರ್ನಿಂಗ್ ಕೂಡ ಮಾಡಿದ್ದರು. ಕೊನೆಗೆ ಇಮ್ರಾನ್ ಮನಸ್ಸು ಬದಲಾಯಿಸಿ ಮನೆಯಿಂದ ಹೊರ ಬಂದು ಆಸ್ಪತ್ರೆಗೆ ಹೋಗಿದ್ದಾರೆ.