ಕೊಚ್ಚಿ ಹೋಗುತ್ತಿದ್ದಾಗ ಹಗ್ಗ ನೀಡಿದ್ರೂ ಬಾರದ ಯುವಕ – ಹೃದಯಾಘಾತದಿಂದ ಸಾವು

Public TV
1 Min Read

ಕಲಬುರಗಿ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವನೋರ್ವ ಭಯಗೊಂಡು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಕೂಕಿನ ಚಂದನಲ್ಲಿ ಗ್ರಾಮದ ಬಳಿ ನಡೆದಿದೆ.

ಸಾವನ್ನಪ್ಪಿದ ಯುವಕನನ್ನು ಪೀರಶೆಟ್ಟಿ (29) ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆ ನೀರಿನಿಂದ ಹಳ್ಳ ಕೊಳ್ಳಗಳು ತುಂಬಿ ರಭಸದಿಂದ ಹರಿಯುತ್ತಿವೆ. ಈ ಸಮಯದಲ್ಲಿ ಹಳ್ಳ ದಾಟಲು ಹೋದ ಪೀರಶೆಟ್ಟಿ ನೀರನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ.

ಆದರೆ ಹಳ್ಳಕ್ಕೆ ಆಡಲಾಗಿ ಹಾಕಿದ್ದ ಕಂಬವನ್ನು ಹಿಡಿದು ಪೀರಶೆಟ್ಟಿ ನೀರಿನ ಮಧ್ಯದಲ್ಲಿ ನಿಂತುಕೊಂಡಿದ್ದಾನೆ. ಈ ವೇಳೆ ಆತನಿಗೆ ಸ್ಥಳದಲ್ಲಿದ್ದ ಕೆಲವರು ಹಗ್ಗ ನೀಡಿದ್ದಾರೆ. ನೀರಿನ ರಭಸಕ್ಕೆ ಭಯಗೊಂಡ ಯುವಕ ಹಗ್ಗ ಹಿಡಿದು ಮೇಲೆ ಬಂದಿಲ್ಲ. ಆದರೆ ಕೆಲ ಸಮಯದ ನಂತರ ಭಯದಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಈ ವೇಳೆ ಯುವಕನನ್ನು ರಕ್ಷಿಸಲು ಆತನ ಸಹೋದರ ಕೂಡ ನೀರಿಗೆ ಇಳಿದಿದ್ದಾರೆ. ಆದರೆ ನೀರಿನ ರಭಸಕ್ಕೆ ಅವರು ಕೊಚ್ಚಿಹೋಗಿದ್ದು, ನಂತರ ಕಷ್ಟಪಟ್ಟು ಈಜಿ ದಡ ಸೇರಿದ್ದಾರೆ.

ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *