ಕೇಂದ್ರದ ಹಿಟ್ ಲಿಸ್ಟ್‌ನಲ್ಲಿ ಕರ್ನಾಟಕ ಡೇಂಜರಸ್ ಸ್ಪಾಟ್!

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಶನಿವಾರ ಒಂದೇ ದಿನ 4,537 ಮಂದಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೇಂದ್ರದ ಹಿಟ್ ಲಿಸ್ಟ್‌ನಲ್ಲಿ ಕರ್ನಾಟಕ ಡೇಂಜರಸ್ ಸ್ಪಾಟ್ ಆಗಿದೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ನಿಂದ (ಐಎಂಐ) ಕರ್ನಾಟಕದ ರಿಪೋರ್ಟ್ ಹೊರಬಂದಿದೆ. ಇದು ಕರ್ನಾಟಕದ ಹಳ್ಳಿ ಹಳ್ಳಿಗೂ, ಸಮುದಾಯಕ್ಕೆ ಕೊರೊನಾ ಹಬ್ಬುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಮಹಾನಗರಿ ಬೆಂಗಳೂರಿಗೆ ಮಾತ್ರವಲ್ಲ ಈಗ ಕರ್ನಾಟಕದ ಹಳ್ಳಿ ಹಳ್ಳಿಗೂ ಕೊರೊನಾ ಗಂಡಾಂತರವಾಗಲಿದೆ ಎಂದು ಐಎಂಐ ಎಚ್ಚರಿಕೆ ನೀಡಿದೆ.

ಮಹಾನಗರಿ ಬೆಂಗಳೂರನ್ನು ನಿಭಾಯಿಸಬಹುದು. ಆದರೆ ಕರ್ನಾಟಕ, ಮಹಾರಾಷ್ಟ್ರ, ಕೋಲ್ಕತ್ತಾ, ಗೋವಾದ ಭಾಗದಲ್ಲಿ ಕೆಲ ಹಳ್ಳಿ ಹಳ್ಳಿಯಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬುವ ಸಾಧ್ಯತೆ ಬಗ್ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ ಕೇಂದ್ರಕ್ಕೆ ಸೂಚ್ಯವಾಗಿ ತಿಳಿಸಿದೆ.

ಕರ್ನಾಟಕದಲ್ಲಿ ಸಮುದಾಯಕ್ಕೆ ಕೊರೊನಾ ಸಾಧ್ಯತೆ ಹೇಗೆ?
1. ಬೆಂಗಳೂರಿನಲ್ಲಿ ಸಮುದಾಯಕ್ಕೆ ಹಬ್ಬಿದ ಆತಂಕ ಎದುರಾದ ಸಂದರ್ಭದಲ್ಲಿಯೇ ಅನೇಕರು ಬೆಂಗಳೂರಿನಿಂದ ಹಳ್ಳಿಗೆ ಸೇರಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕೊರೊನಾ ಸ್ಫೋಟ ಸಾಧ್ಯತೆ.
2. ಕರ್ನಾಟಕದಲ್ಲಿ ಚೇತರಿಕೆಯಾಗುವಾಗಲೇ ಅನೇಕ ಜಿಲ್ಲೆಗಳಿಗೆ ಈಗ ನಿಗೂಢ ಕೇಸ್‍ಗಳದ್ದು ದೊಡ್ಡ ತಲೆನೋವಾಗಿದೆ.
3. ಮೈಸೂರು, ದಕ್ಷಿಣ ಕನ್ನಡ, ಕಲಬುರ್ಗಿ, ಧಾರವಾಡ ಈಗ ಹೊಸ ಹಾಟ್‍ಸ್ಪಾಟ್ ಆಗಿ ಬದಲಾಗಿದೆ.
4. ಬೆಂಗಳೂರು ಹೊರತು ಪಡಿಸಿ ಗ್ರಾಮೀಣ ಭಾಗದಲ್ಲಿಯೂ ಈಗ 500ರ ಗಡಿಯತ್ತ ಕೆಲ ಜಿಲ್ಲೆಯಲ್ಲಿ ಪ್ರಕರಣ ಕಂಡುಬರುತ್ತಿದೆ. ಕೇಸ್ ಹಿಸ್ಟರಿ ಇಲ್ಲದೇ ಕೊರೊನಾ ವ್ಯಾಪಿಸುತ್ತಿದೆ.

ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸಮುದಾಯಕ್ಕೆ ಹಬ್ಬುವ ಡೇಂಜರಸ್ ಹಂತದಲ್ಲಿದೆ. ಬೆಂಗಳೂರು ಹೊರತುಪಡಿಸಿ ಕೊರೊನಾಗೆ ಸಿಲುಕಿದ ಜಿಲ್ಲೆಗಳಿವು.

ಜಿಲ್ಲೆ ಸಕ್ರಿಯ ಪ್ರಕರಣ
1. ದಕ್ಷಿಣ ಕನ್ನಡ – 2183
2. ಧಾರವಾಡ – 1216
3. ಬಳ್ಳಾರಿ – 1095
4. ಮೈಸೂರು – 880
5. ಕಲುಬುರ್ಗಿ – 940
6. ಉತ್ತರ ಕನ್ನಡ – 668

Share This Article
Leave a Comment

Leave a Reply

Your email address will not be published. Required fields are marked *