ಕೆಲವೇ ದಿನಗಳಲ್ಲಿ ಮುರಿದು ಹೋಯ್ತು ಮದ್ವೆಯಾದ ಸೆಕ್ಸ್ ಡಾಲ್

Public TV
2 Min Read

– ಬಾಡಿಬಿಲ್ಡರ್ ವಿಚಿತ್ರ ಪ್ರೇಮ ಕಹಾನಿ
– ಒಂದು ವರ್ಷದಿಂದ ಬೊಂಬೆ ಜೊತೆ ಡೇಟಿಂಗ್

ನುರ್-ಸುಲ್ತಾನ್: ಪ್ರೀತಿಸಿ ಮದುವೆಯಾದ ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಬಾಡಿ ಬಿಲ್ಡರ್ ಓರ್ವ ಕಣ್ಣೀರಿಟ್ಟಿದ್ದಾನೆ. ಖಜಕಸ್ತಾನದ ಯೋರಿ ತುಲೋಚ್ಕೋ ನವೆಂಬರ್ ನಲ್ಲಿ ತಾನು ಮೆಚ್ಚಿದ ಡಾಲ್ ಮಾರ್ಗೋ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದನು. ಇದೀಗ ಗೊಂಬೆ ಮುರಿದಿದ್ದು, ಮೊದಲ ಕ್ರಿಸ್‍ಮಸ್ ಹಬ್ಬವನ್ನ ಒಂಟಿಯಾಗಿ ಆಚರಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ.

ಕಳೆದ ಒಂದು ವರ್ಷದಿಂದ ಮಾರ್ಗೋ ಜೊತೆ ಯೋರಿ ಡೇಟಿಂಗ್ ನಲ್ಲಿದ್ದನು. ಮಾರ್ಚ್ ನಲ್ಲಿ ನಡೆಯಬೇಕಿದ್ದ ಯೋರಿ ಮತ್ತು ಮಾಗೋ ಮದುವೆ ಕೊರೊನಾದಿಂದ ಮುಂದೂಡಲ್ಪಟ್ಟಿತ್ತು. ಕೊನೆಗೆ ನವೆಂಬರ್ ನಲ್ಲಿ 12 ಜನರ ಸಮ್ಮುಖದಲ್ಲಿ ಗೊಂಬೆ ಬೆರಳಿಗೆ ಉಂಗುರ ತೊಡೆಸಿದ್ದನು. ನಮ್ಮ ಸಂಬಂಧ ಎಲ್ಲರಗಿಂತ ಭಿನ್ನವಾದದ್ದು ಎಂದು ಹೇಳಿ ಮಾರ್ಗೋ ತುಟಿಗೆ ತುಟಿಯನ್ನ ಸೇರಿಸಿದ್ದನು. ಯೋರಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇಡೀ ಜಗತ್ತಿನಲ್ಲೆಡೆ ಗುರುತಿಸಿಕೊಂಡಿದ್ದನು.

ಮದುವೆಯಾದ ತಿಂಗಳಳೊಳಗೆ ಯೋರಿಯ ಪ್ರೀತಿ ಗೊಂಬೆ ಪತ್ನಿ ಮುರಿದಿದೆ. ಹಾಗಾಗಿ ಗೊಂಬೆಯನ್ನ ರಿಪೇರಿಗಾಗಿ ಬೇರೊಂದು ನಗರಕ್ಕೆ ಕಳುಹಿಸಿರುವ ಯೋನಿ ಒಂಟಿತನದ ದಿನಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾನೆ. ಅವಳು ಶೀಘ್ರದಲ್ಲೇ ಮನೆಗೆ ಹಿಂದಿರುಗಲಿದ್ದಾಳೆ ಅಂತ ಯೋರಿ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ಸದ್ಯ ಗೆಳೆಯರೊಂದಿಗೆ ದಿನಗಳನ್ನ ಕಳೆಯುತ್ತಿರೋದಾಗಿ ಯೋರಿ ಹೇಳಿದ್ದಾನೆ.

ಅವಳಿಗೆ ಒಬ್ಬಳಿಗೆ ನಡೆಯಲು ಆಗಲ್ಲ. ಅಡುಗೆ ಮಾಡಲು ಸಹ ಬರಲ್ಲ. ಆದ್ರೆ ಆಕೆಗೆ ಜಾರ್ಜಿಯನ್ ಕಸೀನ್ ಅಂದ್ರೆ ಬಲು ಇಷ್ಟ. ಖಿನ್ಕಲಿ ಅವಳ ಇಷ್ಟವಾದ ಡಿಶ್. ಅವಳು ಕೇವಲ ಗೊಂಬೆಯಲ್ಲ, ಅದರೊಳಗೊಂದು ನಿಷ್ಕಲ್ಮಶವಾದ ಆತ್ಮವಿದೆ ಎಂದು ಯೋರಿ ಮಾರ್ಗೋಳ ಗುಣಗಳನ್ನ ಕೊಂಡಾಡಿದ್ದಾನೆ.

ಮೊದಲಿಗೆ ಮಾರ್ಗೋ ಜೊತೆಗಿನ ಫೋಟೋಗಳನ್ನ ಹಂಚಿಕೊಂಡಾಗ ಎಲ್ಲರೂ ಆಕೆಯನ್ನ ನೋಡುತ್ತಾರೆ ಎಂದು ಅಸೂಯೆ ಎನಿಸಿ ಡಿಲೀಟ್ ಮಾಡಿದೆ. ಕೆಲವರು ನನ್ನನ್ನ ಸ್ಯಾಡಿಸ್ಟ್, ಲೈಂಗಿಕ ರೋಗಿ, ಸಲಿಂಗಿ ಹಲವು ಪದಗಳಿಂದ ನನ್ನನ್ನು ಕಟುವಾಗಿ ಟೀಕಿಸಿದರು. ಆದ್ರೆ ನಮ್ಮಿಬ್ಬರ ಬಾಂಧವ್ಯ ಮದುವೆಗಿಂತಲೂ ಅಮೂಲ್ಯವಾದದ್ದು. ಒಂದು ವರ್ಷದ ಹಿಂದೆ ಮಾರ್ಗೊಳ ಸೌಂದರ್ಯಕ್ಕೆ ಮಾರು ಹೋದ ನಾನು ಆಕೆಯನ್ನ ಪ್ರೀತಿಸತೊಡಗಿದೆ. ನಾನು ಲೈಂಗಿಕ ಪ್ರಕ್ರಿಯೆಯನ್ನು ಇಷ್ಟಪಡುತ್ತೇನೆ. ಲಿಂಗ ಮತ್ತು ಲೈಂಗಿಕ ದೃಷ್ಟಿಕೋನ ಇಲ್ಲಿ ಮುಖ್ಯವಲ್ಲ. ಮಾರ್ಗೊ ಜೊತೆಗಿನ ಲೈಂಗಿಕ ಜೀವನವನ್ನು ವಿವರಿಸುವುದು ಕಷ್ಟ ಎಂದು ಯೋರಿ ಹೇಳಿದ್ದಾನೆ.

ಸದ್ಯ ಮುರಿತಕ್ಕೊಳ್ಳಗಾಗಿರುವ ಗೊಂಬೆಯನ್ನ ರಿಪೇರಿಗೆ ಬೇರೆ ಕಡೆ ಕಳುಹಿಸಿದ್ದು, ಆಕೆಯ ಆಗಮನಕ್ಕಾಗಿ ಜಾತಕ ಪಕ್ಷಿಯಂತೆ ಯೋರಿ ಕಾಯುತ್ತಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *