ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟ – 6 ಮಂದಿಗೆ ಗಾಯ

Public TV
1 Min Read

ಬೆಂಗಳೂರು: ಇಲ್ಲಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ 06 ಮಂದಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಐಎಎಲ್ ನ ಎರಡನೇ ಟರ್ಮಿನಲ್ ಗಾಗಿ ರಸ್ತೆ ನಿರ್ಮಾಣ ಕಾರ್ಯ ಬಲು ಜೋರಾಗಿ ಸಾಗಿದ್ದು, ಈ ವೇಳೆ ಕಾರ್ಗೋ ಕಾಂಪ್ಲೆಕ್ಸ್ ಮುಂಭಾಗದ ರಸ್ತೆಯಲ್ಲಿ ನ ಅಂಡರ್ ಪಾಸ್ ಓಳಗೆ ರಸ್ತೆಗೆ ಕಪ್ಪು ಬಿಳಿ ಸೂಚಕ ಸಂಕೇತಗಳ ಪಟ್ಟಿಯನ್ನ ಬಳಿಯಕಾಗುತ್ತಿತ್ತು. ಇದಕ್ಕಾಗಿ ಕ್ಯಾಂಟರ್ ಒಂದರಲ್ಲಿ ಕಪ್ಪು ಬಳಿ ಬಣ್ಣವನ್ನ ಬಿಸಿ ಮಾಡುವ ಸಿಲಿಂಡರ್ ಇಟ್ಟಿದ್ದು ಆಕಸ್ಮಿಕವಾಗಿ ಸಿಲಿಂಡರ್ ಬ್ಲಾಸ್ಟ್ ಆಗಿದೆ.

ರಭಸಕ್ಕೆ ಕ್ಯಾಂಟರ್ ಗೂ ಸಹ ಬೆಂಕಿ ತಗುಲಿದ್ದು ಘಟನೆಯಲ್ಲಿ 06 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅವಿನಾಶ್, ಸಿರಾಜ್, ಅಜಯ್, ನಾಗೇಶ್ ರಾವ್, ಪ್ರಶಾಂತ್, ಗೌತಮ್ ಗಾಯಗೊಂಡವರು. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರ ಎನ್ನಲಾಗುತ್ತಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಈ ಸಂಬಂಧ ಕೇಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *