ಕಿಚ್ಚನಿಗಾಗಿ ಮನೆಯವರಿಂದ ಪ್ರೀತಿಯ ಕೈ ತುತ್ತು

Public TV
1 Min Read

ಬಿಗ್‍ಬಾಸ್ ವಾರಾಂತ್ಯದ ಕಾರ್ಯಕ್ರಮವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅನಾರೋಗ್ಯದ ನಿಮಿತ್ತ ಈ ವಾರ ನಡೆಸಿಕೊಡುತ್ತಿಲ್ಲ ಎಂಬ ವಿಚಾರವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದರು. ಕಿಚ್ಚನಿಲ್ಲದೆ ವಾರಾಂತ್ಯದ ಕಾರ್ಯಕ್ರಮ ಹೇಗೆ ನಡೆಯಲಿದೆ ಎನ್ನುವ ಕುತೂಹೊಲ ಎಲ್ಲರಿಗೂ ಇತ್ತು.

 

ಸುದೀಪ್ ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರ ಸ್ಪರ್ಧಿಗಳಿಗೆ ತಿಳಿದಿರಲಿಲ್ಲ. ಆದರೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಆಗ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಬಿಗ್‍ಬಾಸ್ ಪ್ರಸಾರಮಾಡುವ ಖಾಸಗಿವಾಹಿನಿ ಈ ವಿಚಾರವನ್ನು ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದೆ.

ಬಿಗ್‍ಬಾಸ್ ಪತ್ರವೊಂದನ್ನು ಕಳುಹಿಸಿದ್ದರು, ಚಕ್ರವರ್ತಿ ಚಂದ್ರಚೂಡ್ ಪತ್ರ ಓದುತ್ತಾ ಅನಾರೋಗ್ಯದ ಕಾರಣ ಬಿಗ್‍ಬಾಸ್ ಇಂದಿನ ವಾರಾಂತ್ಯದ ಕಾರ್ಯಕ್ರಮವನ್ನು ನಡೆಸುವುದಿಲ್ಲ ಎಂದು ಹೇಳುವುದನ್ನು ಕೇಳುತ್ತಿದ್ದಂತೆ ಸ್ಪರ್ಧಿಗಳು ಆಘಾತಕ್ಕೊಳಗಾದರು. ಕೆಲವರು ಕಣ್ಣೀರಿಟ್ಟ್ರು, ಹಲವರು ಏನು ಮಾತನಾಡದೆ ಮೌನವಾಗಿದ್ದಾರೆ.

ರಾಜನಿಲ್ಲದ ಸಾಮ್ರಾಜ್ಯದಂತಾದ ಬಿಗ್‍ಬಾಸ್
ಸುದೀಪ್ ಇಲ್ಲದೇ ನಡೆಯುತ್ತಿರುವ ಮೊದಲನೇ ವಾರಾಂತ್ಯದ ಸಂಚಿಕೆ ಇದಾಗಿದೆ. ಸುದೀಪ್‍ಗಾಗಿ ಬಿಗ್ ಮನೆಯ ಸ್ಪರ್ಧಿಗಳು ಅವರಿಲ್ಲದೇ ಇರುವ ಈ ದಿನವನ್ನು ನೆನೆದು ಮನದ ದುಃಖ, ಬೇಸರವನ್ನು ಪತ್ರದ ಮೂಲಕವಾಗಿ ಸ್ಪರ್ಧಿಗಳು ಹೊರಹಾಕಿದ್ದಾರೆ. ಕಿಚ್ಚನಿಗಾಗಿ ಊಟವನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದಾರೆ.

ನೀವಿಲ್ಲದ ಈ ಮನೆ ರಾಜ ನಿಲ್ಲದ ಸಾಮ್ರಾಜ್ಯವಾಗಿದೆ. ಈ ಪ್ರತದಲ್ಲಿ ಅಕ್ಷರಗಳ ಜೊತೆಗೆ ಕಣ್ಣೀರು ತುಂಬಿಸಿದ್ದೇವೆ. ಅಭಿಮಾನವನಿಲ್ಲಿ ಪದಗಳನ್ನಾಗಿ ಜೋಡಿಸಿದ್ದೇವೆ. ಎಲ್ಲರ ಪ್ರೀತಿ ಮಮತೆ ತುಂಬಿ ನಿಮಗೆ ಕೈತುತ್ತು ಕಳುಹಿಸಿದ್ದೇವೆ. ಬೇಗ ಹುಷಾರಾಗಿ ಸಿಂಹದ ಹಾಗೇ ಬನ್ನಿ.. ನಿಮ್ಮನ್ನು ಎಲ್ಲರೂ ನೋಡಬೇಕಿದೆ ಎಂದು ಚಕ್ರವರ್ತಿ ಹೇಳುವಾಗ ಎಲ್ಲರೂ ಮೌನವಾಗಿದ್ದರು. ಸ್ಪರ್ಧಿಗಳ ಕಣ್ಣಂಚಲಿ ನೀರು ತುಂಬಿಕೊಂಡಿತ್ತು. ಇಂದಿನ ಸಂಚಿಕೆಯಲ್ಲಿ ಈ ಕುರಿತಾಗ ಹೆಚ್ಚಿನ ವಿವರಗಳು ಸಿಗಲಿದೆ. ಬಿಗ್‍ಬಾಸ್ ಸಂಚಿಕೆ ಇಂದು ಹೇಗೆ ಇರಲಿದೆ ಎಂಬುದನ್ನು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *