ಕಾಲ್‌ ಬಾಯ್‌ ಆಗಲು ಹೋಗಿ 83 ಸಾವಿರ ಕಳೆದುಕೊಂಡ ಟೆಕ್ಕಿ

Public TV
1 Min Read

ಬೆಂಗಳೂರು: ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ಟೆಕ್ಕಿಯೊಬ್ಬರು ಕಾಲ್‌ ಬಾಯ್‌ ಆಗಲು ಹೋಗಿ 83 ಸಾವಿರ ರೂ. ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಮೃತಹಳ್ಳಿ ನಿವಾಸಿಯಾದ 26 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್ ವಂಚನೆಗೊಳಗಾಗಿದ್ದು, ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪರಿಚಿರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಏನಿದು ಪ್ರಕರಣ?
ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿ ಉದ್ಯೋಗದಲ್ಲಿದ್ದರು. ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಕಂಪನಿ ಕೆಲಸದಿಂದ ಕೆಲ ಸಿಬ್ಬಂದಿಯನ್ನು ತೆಗೆದು ಹಾಕಿತ್ತು. ಮುಂದಿನ ದಿನದಲ್ಲಿ ನನ್ನನ್ನು ಕೆಲಸದಿಂದ ತೆಗೆದು ಹಾಕಬಹುದು ಎಂಬ ಆತಂಕದಿಂದ ಟೆಕ್ಕಿ ಬೇರೆ ಕೆಲಸವನ್ನು ಸರ್ಚ್‌ ಮಾಡುತ್ತಿದ್ದರು.

ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುವಾಗ ಒಂದು ವೆಬ್‌ಸೈಟ್‌ಗೆ ಹೋಗಿ ಲಾಗಿನ್‌ ಆಗಿ ಉದ್ಯೋಗದ ಬಗ್ಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸಲು ಕಾಲ್‌ ಬಾಯ್‌ ಉದ್ಯೋಗವಿದೆ. ಇದಕ್ಕೆ ವೇತನವನ್ನು ಸಹ ಪಾವತಿಸಲಾಗುತ್ತದೆ ಎಂಬ ಪ್ರತಿಕ್ರಿಯೆ ಬಂದಿದೆ.

ಕಾಲ್‌ ಬಾಯ್‌ ಉದ್ಯೋಗವನ್ನು ಒಪ್ಪಿಕೊಂಡ ಬಳಿಕ ಟೆಕ್ಕಿಗೆ ನೋಂದಣಿ ಶುಲ್ಕ ಪಾವತಿಸಬೇಕು ಎಂದು ಹೇಳಿದ್ದಾರೆ. ಇದಾದ ಬಳಿಕ ಸದಸ್ಯತ್ವ ಶುಲ್ಕ,ಸ್ಟೇಟಸ್‌ ಕನ್ಫರ್ಮೇಶನ್‌ ಕೋಡ್‌ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ವ್ಯಕ್ತಿಗಳು ಹೇಳಿದಂತೆ ನೋಂದಣಿ ಶುಲ್ಕಕ್ಕಾಗಿ 1 ಸಾವಿರ ರೂ., ಸದಸ್ಯತ್ವಕ್ಕಾಗಿ 2,500 ರೂ., ಕನ್ಫರ್ಮೇಶನ್‌ ಕೋಡ್‌ಗಾಗಿ 70 ಸಾವಿರ ರೂ. ಸೇರಿ 83 ಸಾವಿರ ರೂ. ಹಣವನ್ನು ಗೂಗಲ್‌ ಪೇ ಮೂಲಕ ಪಾವತಿಸಿದ್ದಾರೆ.

ಜುಲೈ 4 ರಿಂದ ಜುಲೈ 7ರವರೆಗೆ ಈ ವ್ಯವಹಾರದ ಮಾತುಕತೆ ನಡೆದಿದೆ. ಇದಾದ ಬಳಿಕ ಹಣವನ್ನು ನೀಡದೇ ಉದ್ಯೋಗವನ್ನು ನೀಡದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಟೆಕ್ಕಿ ದೂರು ನೀಡಿದ್ದಾರೆ. 2008ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಮೊಬೈಲ್‌ ಕರೆಗಳ ಬಗ್ಗೆ ಪರಿಶೀಲನೆ ನಡೆಸಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *