ಕಾಲಿವುಡ್ ‘ಪೌಡರ್’ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ 50 ಸೆಲೆಬ್ರಿಟಿಗಳು

Public TV
1 Min Read

ಕಾಲಿವುಡ್ ಬಹು ನಿರೀಕ್ಷಿತ ‘ಪೌಡರ್’ ಚಿತ್ರದ ಟೀಸರ್ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದೆ. ಚಿತ್ರತಂಡ ದಕ್ಷಿಣ ಭಾರತದ 50 ಸೆಲೆಬ್ರಿಟಿಗಳ ಕೈಯಲ್ಲಿ ಟೀಸರ್ ಬಿಡುಗಡೆ ಮಾಡಿಸುವ ಮೂಲಕ ವಿಶೇಷತೆ ಮೆರೆದಿದೆ. ರಾಣಾ ದಗ್ಗುಬಾಟಿ, ಮಮ್ಮುಟ್ಟಿ, ಎ.ಆರ್ ರೆಹಮಾನ್, ರಿತಿಕ್ ಸಿಂಗ್, ತಮನ್ನಾ, ಆರ್ ಮಾಧವನ್ ಸೇರಿದಂತೆ 50 ಸೆಲೆಬ್ರಿಟಿಗಳು ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ಗಳಲ್ಲಿ ‘ಪೌಡರ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ವಿಭಿನ್ನವಾಗಿ ಟೀಸರ್ ಬಿಡುಗಡೆ ಮಾಡಿ ಗಮನ ಸೆಳೆದಿರುವ ‘ಪೌಡರ್’ ಚಿತ್ರ ಟೀಸರ್ ಮೂಲಕವೂ ಕ್ಯೂರಿಯಾಸಿಟಿ ಹುಟ್ಟುಹಾಕಿದೆ.

ತಮಿಳು ಚಿತ್ರರಂಗದ ಜನಪ್ರಿಯ ಪಿಆರ್‍ಓ ನಿಖಿಲ್ ಮುರುಕನ್ ‘ಪೌಡರ್’ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪವರ್ ಫುಲ್ ಸಬ್ಜೆಕ್ಟ್ ಮೂಲಕ ನಿಖಿಲ್ ಮುರುಕನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ತಮ್ಮ ಬಹು ವರ್ಷಗಳ ಕನಸು ನನಸು ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಿಖಿಲ್ ಮುರುಕನ್ ಬಣ್ಣಹಚ್ಚಿದ್ದು, ನಟಿ ವಿದ್ಯಾ ಪ್ರದೀಪ್ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಕ್ರೈಂ, ಥ್ರಿಲ್ಲರ್ ಕಥಾಹಂದರವುಳ್ಳ ‘ಪೌಡರ್’ ಚಿತ್ರವನ್ನು ಈ ಹಿಂದೆ ‘ದಾ ದಾ 87’ ಚಿತ್ರ ನಿರ್ದೇಶಿಸಿದ್ದ ವಿಜಯ್ ಶ್ರೀ ಜಿ ನಿರ್ದೇಶನ ಮಾಡುತ್ತಿದ್ದಾರೆ. ನರ ಮನುಷ್ಯರ ಮಾಂಸ ಮಾರಾಟ ಮಾಫಿಯಾ ಸುತ್ತಾ ಹೆಣೆಯಲಾದ ಕ್ರೈಂ ಥ್ರಿಲ್ಲರ್ ಚಿತ್ರ ಎನ್ನುವುದನ್ನು ಟೀಸರ್ ತುಣುಕು ಹೇಳುತ್ತಿದ್ದು ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಟೀಸರ್ ಬಿಜಿಎಂ ಸಖತ್ ಕಿಕ್ ನೀಡುತ್ತಿದ್ದು, ಚಿತ್ರದ ಮೇಲೆ ಸಿನಿ ಪ್ರೇಮಿಗಳಲ್ಲಿ ಬಾರೀ ನಿರೀಕ್ಷೆ ಮೂಡಿಸಿದೆ.

ಆರಂಭದಲ್ಲೇ ಸಖತ್ ಸೌಂಡ್ ಮಾಡುತ್ತಿರುವ ‘ಪೌಡರ್’ ಚಿತ್ರದ ತಾರಾಬಳಗದಲ್ಲಿ ಮೊಟ್ಟ ರಾಜೇಂದ್ರನ್, ಮನೋಬಲ್, ಮನೋಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರಾಜಪಂಡ್ರಿ ಕ್ಯಾಮೆರಾ ಕೈಚಳಕ, ಸ್ಯಾಮ್ ಸಿ.ಎಸ್ ಸಂಗೀತ ನಿರ್ದೇಶನವಿದ್ದು, ಜಿ ಮೀಡಿಯಾ ಬ್ಯಾನರ್ ಅಡಿಯಲ್ಲಿ ಜಯ ಶ್ರೀ ವಿಜಯ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *