ಕಾರ್ಯಕರ್ತನ ಕೈಯಲ್ಲಿ ಶೂ ಧರಿಸಿಕೊಂಡ ಸಿದ್ದರಾಮಯ್ಯ

Public TV
1 Min Read

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಕಾರ್ಯಕರ್ತರೊಬ್ಬರನಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಶೂ ತೊಡಿಸಿದ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಹಾರೋಬಂಡೆ ಬಳಿಯ ಸಾಯಿಬಾಬಾ ಮಂದಿರದ ಬಳಿ ನಡೆಯಿತು.

ಬಾಗೇಪಲ್ಲಿಗೆ ಆಗಮಿಸುತ್ತಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಜಿ.ಎಚ್.ನಾಗರಾಜ್ ನಿರ್ಮಾಣ ಮಾಡಿರೋ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಕಾರಿನಿಂದ ಆಗಮನದ ವೇಳೆ ಶೂ ತೆಗೆಯಲು ಕಷ್ಟಪಡುತ್ತಿದ್ದ ಸಿದ್ದರಾಮಯ್ಯರನ್ನ ಕಂಡ ಕಾಂಗ್ರೆಸ್ ಕಾರ್ಯಕರ್ತ ನಾರಾಯಣಸ್ವಾಮಿ ಎಂಬವರು ಶೂ ತೆಗೆದು ಸಹಾಯ ಮಾಡಿದರು.

ಇನ್ನೂ ದರ್ಶನ ಪಡೆದು ಹಿಂದಿರುಗುವಾಗ ಸಹ ಶೂ ಹಾಕಿಕೊಳ್ಳಲು ಕಷ್ಟಪಡ್ತಿದ್ದ ಸಿದ್ದರಾಮಯ್ಯರನ್ನ ಕಂಡು ಮತ್ತೆ ಶೂ ಧಾರಣೆ ಮಾಡಿ ನಾರಾಯಣಸ್ವಾಮಿ ಸಹಾಯ ಮಾಡಿದ್ರು. ಇದ್ರಿಂದ ಸಿದ್ದರಾಯಮ್ಯನವರು ಸಹ ಕೊಂಚ ಕಸಿವಿಸಿಗೊಂಡರು.

ಕ್ಷೇತ್ರದ ಶಾಸಕ ಎಸ್‍ಎನ್ ಸುಬ್ಬಾರೆಡ್ಡಿ ಆಯೋಜಿಸಿದ್ದ ಪುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಎರಡು ವ್ಯಾಕ್ಸಿನ್ ಇದೆ ಯಾವಾದಾದ್ರೂ ಪಡೆದುಕೊಳ್ಳಿ, ಸ್ಪುಟನಿಕ್ ಫೈಜರ್ ಸಹ ದೇಶಕ್ಕ ತರಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. 136 ಕೋಟಿ ಇರುವ ದೇಶ 100 ಕೋಟಿ ಜನರಿಗೆ ವ್ಯಾಕ್ಸಿನ್ ಮಾಡಿದರೆ ಕೊರೊನಾಗೆ ತಡೆ ಯೊಡ್ಡಬಹುದು. ಆದರೆ ಪ್ರಧಾನಮಂತ್ರಿ ನರೇಂದ್ರಮೋದಿ ಭಾರತದ ಜನರಿಗೆ ವ್ಯಾಕ್ಸಿನ್ ಮಾಡುವ ಬದಲು ಬೇರೆ ದೇಶದ ಜನರಿಗೆ ಆರೂವರೆ ಕೋಟಿ ಲಸಿಕೆ ಕಳುಹಿಸಿದ್ದಾರೆ. ವ್ಯಾಕ್ಸಿನ್ ಕಾರ್ಯ ವೇಗ ಮಾಡಬೇಕಾದ ಯಡಿಯೂರಪ್ಪ ನಿದ್ದೆ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಕೊಡೋ ಕೆಲಸ ಮಾಡುತ್ತಿಲ್ಲ ಎಂದು ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಅವರದ್ದು ರಾಕ್ಷಸ ಸರ್ಕಾರ, ಪಕೋಡ ಮಾರೋಣ ಅಂದ್ರೆ ಎಣ್ಣೆ ರೇಟ್ ಜಾಸ್ತಿ: ಸಿದ್ದರಾಮಯ್ಯ

ಕಾಗೋಡು ತಿಮ್ಮಪ್ಪನವರಿಗೆ ವ್ಯಾಕ್ಸಿನ್ ಸಿಕ್ಕಿಲ್ಲ. ವ್ಯಾಕ್ಸಿನ್ ಪಡೆಯಲು ಬಂದವರನ್ನ ವಾಪಾಸ್ ಕಳುಹಿಸಿದ್ದಾರೆ. ನರೇಂದ್ರ ಮೋದಿ ಸುಳ್ಳುಗಾರ ಅವರಷ್ಟು ಸುಳ್ಳು ಹೇಳೋ ಪ್ರಧಾನಿ ಬೇರೆ ಯಾರೂ ಇಲ್ಲ ಅಚ್ಚೇ ದಿನ್ ಬರುತ್ತೆ ಅಂದ್ರಿ? ಎಲ್ಲಿ ಅಚ್ಛೆ ದಿನ್? ಎಂದು ಅಂತ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಓಲಗವಿಲ್ಲ, ಸಂಬಂಧಿಕರಿಲ್ಲ- 500 ರೂಪಾಯಿಯಲ್ಲಿ ಸಿಂಪಲ್ ಮದುವೆ

Share This Article
Leave a Comment

Leave a Reply

Your email address will not be published. Required fields are marked *