ಕಾರ್ಮಿಕ ಇಲಾಖೆಯ ನಿರೀಕ್ಷಕರನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಶಾಸಕ..!

Public TV
1 Min Read

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ನೋಂದಣಿ, ಸಹಾಯಧನ ವಿತರಣೆ ಹೆಸರಿನಲ್ಲಿ ಹಣ ಸುಲಿಗೆ, ನಕಲಿ ಕಾರ್ಮಿಕ ಕಾರ್ಡ್ ಗಳ ಹಾವಳಿಯ ಜೊತೆಗೆ ಏಜೆಂಟರ ಹಾವಳಿ ಹೆಚ್ಚಾದ ದೂರು ಬಂದ ಹಿನ್ನೆಲೆಯಲ್ಲಿ ಕಲಘಟಗಿ ಶಾಸಕ ಸಿಎಂ ನಿಂಬಣ್ಣನವರು ಕಾರ್ಮಿಕ ಇಲಾಖೆಯ ನಿರೀಕ್ಷಕರನ್ನ ಹಿಗ್ಗಾಮುಗ್ಗ ತರಾಟೆಗೆ ತಗೆದುಕೊಂಡ ಘಟನೆ ನಡೆದಿದೆ.

ಕಲಘಟಗಿ ತಾಲೂಕು ಪಂಚಾಯ್ತಿ ಸಭಾಭವನದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಸಮಾರಂಭದಲ್ಲಿ ಕಟ್ಟಡ ಕಾರ್ಮಿಕರಿಂದ ದೂರು ಬಂದ ಪರಿಣಾಮ ಶಾಸಕ ಸಿಎಂ ನಿಂಬಣ್ಣನವರ್, ಕಾರ್ಮಿಕ ಇಲಾಖೆಯ ಪ್ರಭಾರ ನಿರೀಕ್ಷಕ ಅಶೋಕ್ ಒಡೆಯರ್ ಬಳಿ ಇಲಾಖೆಯ ಕೆಲ ಮಾಹಿತಿ ಪಡೆಯುವ ವೇಳೆ ಅಧಿಕಾರಿ ತಡಬಡಾಯಿಸಿದರು. ಪರಿಣಾಮ ಅಧಿಕಾರಿಯನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾರ್ಮಿಕರ ಮಾಹಿತಿ ನೀಡಿ ಎಂದರೆ ಹಾರಿಕೆ ಉತ್ತರ ನೀಡುತ್ತೀರಿ. ಸರಿಯಾಗಿ ಕೆಲಸ ಮಾಡದಿದ್ದರೆ ತಾಲೂಕು ಬಿಟ್ಟು ತೊಲಗಿ ಎಂದು ಆಕ್ರೋಶಭರಿತರಾಗಿ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬೇಕಾದವರಿಗೆ ಆಹಾರದ ಕಿಟ್ ನೀಡಲು ನಿಮ್ಮ ಮನೆಯಿಂದ ತಂದಿಲ್ಲ. ಸರ್ಕಾರದಿಂದ ಕಟ್ಟಡ ಕೂಲಿ ಕಾರ್ಮಿಕರಿಗೆ ಬಂದಿವೆ. ಇದರಲ್ಲಿ ಏನಾದರೂ ಅಕ್ರಮ ನಡೆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಹಿಗ್ಗಾಮುಗ್ಗ ತರಾಟೆಗೆ ತಗೆದುಕೊಂಡು ಇತಂಹ ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇತಂಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಾಗಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಾಸಕ ಪರಮೇಶ್ವರ್ ನಾಯ್ಕ್ ಸೋದರನಿಂದ ವೃದ್ಧನ ಮೇಲೆ ಹಲ್ಲೆಗೆ ಯತ್ನ

Share This Article
Leave a Comment

Leave a Reply

Your email address will not be published. Required fields are marked *