ಕಷ್ಟದ ಪರಿಸ್ಥಿತಿಯಲ್ಲೂ ಅಭಿಮಾನಿಗಳಿಗೆ ಸಿಹಿ ಹಂಚಿದ ಕಲಾವಿದರು

Public TV
4 Min Read

ಬೆಂಗಳೂರು: ಯುಗಾದಿ ಹಬ್ಬದಂದು ಪ್ರತಿವರ್ಷ ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟ, ನಟಿಯರ ಸಿನಿಮಾಗಳು ಥಿಯೇಟರ್‍ನಲ್ಲಿ ರಿಲೀಸ್ ಆಗುತ್ತಿದ್ದವು. ಆದರೆ ಈ ಬಾರಿ ಕೋವಿಡ್-19 ಭೀತಿ ಎದುರಾಗಿರುವುದರಿಂದ ಯಾವುದೇ ಸಿನಿಮಾಗಳು ಬಿಗ್ ಸ್ಕ್ರೀನ್‍ನಲ್ಲಿ ತೆರೆಕಂಡಿಲ್ಲ.

ಕೊರೊನಾ ಮಹಾಮಾರಿಗೆ ಜನ ಸಾಮಾನ್ಯರಷ್ಟೇ ಅಲ್ಲದೆ ಸ್ಟಾರ್ ನಟರು ಕೂಡ ಬೇಸತ್ತಿದ್ದಾರೆ. ಸದ್ಯ ಈ ಎಲ್ಲದರ ಮಧ್ಯೆ ಯುಗಾದಿ ಹಬ್ಬದ ಈ ದಿನದಂದು ಸಿನಿತಾರೆಯರೂ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆಲ್ಲದಂತೆ ಸಿಹಿಯಾಗಿ ಶುಭಾಶಯ ಕೋರಿದ್ದಾರೆ.

ನಟ ನವರಸ ನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ತಂದೆತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದ ಮನೋವಾಂಛ ಫಲಗಳನ್ನು ಈಡೇರಿಸಿ, ನಮ್ಮ ಕಾಡುತ್ತಿರುವ ಕೊರೊನಾ ವಿಶ್ವದಿಂದ ತೊಲಗಿ. ಕ್ಷೇಮ ವಿಜಯ ಆಯು ಆರೋಗ್ಯ ಮಳೆ, ಬೆಳೆ, ಧನ, ಕನಕ, ವಸ್ತು, ವಾಹನ ಸಂತಸ ದೈವಭಕ್ತಿ ಸರ್ವರಿಗೂ ಪ್ರಾಪ್ತವಾಗಲಿ ಎಂದು ರಾಯರಲ್ಲಿ ಪ್ರಾರ್ಥನೆ. ಹಿಂದುಗಳ ನಿಜ ಹೊಸವರ್ಷ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಅಭಿಮಾನಿಗಳ ಪ್ರೀತಿಯ ದಾಸ ನಟ ದರ್ಶನ್, ‘ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ. ಸುಖ, ಸಮೃದ್ಧಿ, ಶಾಂತಿ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ ಎಂದು ಆಶಿಸುತ್ತೇನೆ ನಿಮ್ಮ ದಾಸ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ.

‘ಚೈತ್ರಮಾಸದ ಪ್ರಾರಂಭದ ಸೂರ್ಯೋದಯದ ವೇಳೆ, ಚತುರ್ಮುಖ ಬ್ರಹ್ಮನು ಸಂಪೂರ್ಣ ಜಗತ್ತಿನ ಸೃಷ್ಟಿ ಮಾಡಿದನು ಎಂಬುದಾಗಿ ಯುಗಾದಿ ಬಗ್ಗೆ ಸಂಸ್ಕೃತ ಶ್ಲೋಕ ಹೇಳುತ್ತದೆ. ಹೊಸ ವರ್ಷದ ಬದುಕು ಹಬ್ಬವಾಗಿರಲು ವಾಸ್ತವಕ್ಕೆ ಮಾಸ್ಕೇ ಬೆಲ್ಲ, ಸ್ಯಾನಿಟೈಸರೇ ಬೇವು. ನವ ವಸಂತದ ಅಲೆಯಲಿ, ಜಗತ್ತಿನ ಸಂಕಷ್ಟಗಳು ದೂರಾಗಲಿ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಶುಭಾಶಯ ತಿಳಿಸಿದ್ದಾರೆ.

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಈ ನಿಮ್ಮ ಕಿಚ್ಚನಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಯುಗಾದಿ ಹಬ್ಬದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀ ಮುರುಳಿ ತಮ್ಮ ಮುಂದಿನ ಮದಗಜ ಸಿನಿಮಾದ ಮುದ್ದಾದ ಪೋಸ್ಟರ್‍ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ‘ಯುಗಾದಿ ಹಬ್ಬದ ಶುಭಾಶಯಗಳು’ ಎಂದು ವಿಶ್ ಮಾಡಿದ್ದಾರೆ.

ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ರಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯಿಸುತ್ತಿರುವ ಲಗಾಮ್ ಸಿನಿಮಾದ ಪೋಸ್ಟರ್‍ನನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ ‘ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ, ಎಲ್ಲರ ಬದುಕಿನಲ್ಲಿ ಹೊಸ ಸಂತೋಷ ಸಂಭ್ರಮ ತರಲಿ, ನಿಮ್ಮ ಜೀವನದ ಸಿಹಿ ಹೆಚ್ಚಿಸಲಿ’ ಎಂದು ಶುಭಾ ಹಾರೈಸಿದ್ದಾರೆ.

ನಟ ರಕ್ಷಿತ್ ಶೆಟ್ಟಿ, ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಶುಭವ ತರಲಿ ಯುಗಾದಿ ಎಂದು ವಿಶ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *