ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಕಳ್ಳ ಅಂದರ್

Public TV
1 Min Read

ಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ನಗರದಲ್ಲಿ ಬೈಕ್‍ಗಳ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಆರೋಪಿಯನ್ನು ಹಿಡಿಯುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಂದ್ರಳ್ಳಿ ಮೂಲದ ನಿಖಿಲ್ ಬಂಧಿತ ಆರೋಪಿ. ಆರೋಪಿ ನಿಖಿಲ್(21) ವರ್ಷದ ಯುವಕನಾಗಿದ್ದು, ದುಶ್ಚಟಗಳ ದಾಸನಾಗಿ, ದುಶ್ಚಟಗಳಿಗೆ ಶೋಕಿ ಮಾಡುವುದಕ್ಕೆ ಹಣ ಹೊಂದಿಸಲು ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿ ಅದರಿಂದ ಬಂದಂತಹ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಕಳೆದ ಒಂದು ತಿಂಗಳ ಹಿಂದೆ ರಾಬರಿ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ. ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಆರೋಪಿ ನಿಖಿಲ್ ಮತ್ತೆ ಹಳೆ ಚಾಳಿಯನ್ನು ಮುಂದುವರಿಸಿದ್ದು, ಮನೆಗಳ ಮುಂದೆ ನಿಲ್ಲಿಸಿರೋ ವಾಹನಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಿಂಗಳೊಂದರಲ್ಲಿ ಆರೇಳು ಬೈಕ್ ಗಳ ಕಳ್ಳತನವಾಗಿತ್ತು. ಬೈಕ್ ಕಳ್ಳತನ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸರು ಕಾರ್ಯಚರಣೆಗಿಳಿದು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಆರೋಪಿ ನಿಖಿಲ್‍ನನ್ನು ಬಂಧಿಸಿದ್ದಾರೆ. ಆರೋಪಿಯಿಂದ ವಿವಿಧ ಕಂಪನಿಯ ಲಕ್ಷಾಂತರ ರೂ. ಬೆಲೆ ಬಾಳುವ 6 ದ್ವೀಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಬ್ಯಾಡರಹಳ್ಳಿ ಸೇರಿದಂತೆ ವಿವಿಧ ಠಾಣೆಯಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *