ಬೆಂಗಳೂರು: ಕೋವಿಡ್ 19 ಮಾರ್ಗಸೂಚಿ ಬೆಂಗಳೂರು ನಗರದಲ್ಲಿ ಸರಿಯಾಗಿ ಪಾಲನೆಯಾಗದ್ದಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಮೇಲೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.
ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕಾವೇರಿಗೆ ಬರುವಾಗ ಅಂಗಡಿಗಳು ಓಪನ್ ಆಗಿದ್ದನ್ನು ಯಡಿಯೂರಪ್ಪ ನೋಡಿದ್ದರು. ಇದರಿಂದ ಆಯುಕ್ತರ ಮೇಲೆ ಸಿಟ್ಟಾದ ಯಡಿಯೂರಪ್ಪ, 144 ಸೆಕ್ಷನ್ ಜಾರಿಯಾಗಿದ್ದರೂ ಅಂಗಡಿಗಳು ಓಪನ್ ಆಗಿದೆ. ಹೀಗೆ ಇದ್ದರೆ ಮಾರ್ಗಸೂಚಿಗೆ ಏನು ಬೆಲೆ? ಹೀಗಾದ್ರೆ ಕೊರೊನಾ ನಿಯಂತ್ರಣ ಸಾಧ್ಯನಾ ಎಂದು ಆಯುಕ್ತರಿಗೆ ಯಡಿಯೂರಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ.
ಯಡಿಯೂರಪ್ಪ ಗರಂ ಬೆನ್ನಲ್ಲೇ ಕಮಲ್ ಪಂಥ್ ಈಗ ಅಂಗಡಿಗಳು ಮುಚ್ಚಿಸಲು ಸೂಚನೆ ನೀಡಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಉಳಿದ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ.