ಕನ್ನಡ ಕೊಳಕು ಭಾಷೆ ಎಂದ ವೆಬ್‍ಸೈಟ್ – ಪೇಜ್ ಅನ್ನು ಸರ್ಚ್‍ನಿಂದ ಕಿತ್ತೆಸೆದ ಗೂಗಲ್

Public TV
1 Min Read

ಬೆಂಗಳೂರು: ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂಬ ಫಲಿತಾಂಶ ನೀಡುತ್ತಿದ್ದ ವೆಬ್‍ಸೈಟ್ ಪೇಜ್ ಅನ್ನು ಗೂಗಲ್ ತನ್ನ ಸರ್ಚ್‍ನಿಂದಲೇ ತೆಗೆದು ಹಾಕಿದೆ.

ಆಗಿದ್ದು ಏನು?
www.debtconsolidationsquad.com ವೆಬ್‍ಸೈಟ್‍ Which is the ugliest language in india ಪ್ರಶ್ನೆಗೆ ಕನ್ನಡ ಉತ್ತರವನ್ನು ನೀಡಿತ್ತು. ಈ ಪುಟದಲ್ಲಿರುವ ಮಾಹಿತಿ ಗೂಗಲ್ ಸರ್ಚ್‍ನಲ್ಲಿ ಕಾಣುತ್ತಿತ್ತು.

 

ಗೂಗಲ್ ಸರ್ಚ್‍ನಲ್ಲಿ ಈ ಮಾಹಿತಿ ಕಾಣುತ್ತಿದ್ದಂತೆ ಇಂದು ಭಾರೀ ಸಂಖ್ಯೆಯಲ್ಲಿ ಕನ್ನಡಿಗರು ರಿಪೋರ್ಟ್ ಮಾಡಲು ಆರಂಭಿಸಿದರು. ಜನರ ರಿಪೋರ್ಟ್ ಗಮನಿಸಿದ ಗೂಗಲ್ ಸರ್ಚ್ ಈಗ ಆ ಉತ್ತರ ಪ್ರದರ್ಶನವಾಗುತ್ತಿದ್ದ ಪುಟವನ್ನೇ ಸರ್ಚ್‍ನಿಂದ ತೆಗೆದು ಹಾಕಿದೆ.

ಗೂಗಲ್‍ನದ್ದು ತಪ್ಪಿಲ್ಲ:
ಈ ಪ್ರಮಾದ ಗೂಗಲ್‍ನಿಂದ ಆಗಿದ್ದಲ್ಲ. ಬಳಕೆದಾರರು ಯಾವುದೇ ಮಾಹಿತಿ ಹುಡುಕಿದಾಗ ಅದಕ್ಕೆ ಸಂಬಂಧಿಸಿದ ಹತ್ತಿರದ ಮಾಹಿತಿಯನ್ನು ಗೂಗಲ್ ತನ್ನ ಸರ್ಚ್ ರಿಸಲ್ಟ್ ನಲ್ಲಿ ತೋರಿಸುತ್ತದೆ. ಹೀಗಾಗಿ www.debtconsolidationsquad.com ವೆಬ್‍ಸೈಟ್ ನಲ್ಲಿ Which is the ugliest language in India ಪ್ರಶ್ನೆ ಇದ್ದ ಕಾರಣ ಆ ವೆಬ್‍ಸೈಟ್ ತೋರಿಸಿದೆ. ಗೂಗಲ್ ಯಾವಾಗಲೂ ಸರ್ಚ್ ಮಾಡಿದ ಫಲಿತಾಂಶವನ್ನು ನೀಡುತ್ತದೆ ಹೊರತು ಉದ್ದೇಶಪೂರ್ವಕವಾಗಿ ಈ ರೀತಿಯ ಫಲಿತಾಂಶವನ್ನು ಪ್ರಕಟಿಸುವುದಿಲ್ಲ.

ಬಳಕೆದಾರ ಹುಡುಕಿದಾಗ ಫಲಿತಾಂಶವನ್ನು ಗೂಗಲ್ ಸರ್ಚ್ ತೋರಿಸುತ್ತದೆಯೋ ಹೊರತು ಆ ಫಲಿತಾಂಶ ಸರಿ ಇದೆಯೋ ತಪ್ಪಿದೆಯೋ ಎಂಬುದನ್ನು ಪರಿಶೀಲಿಸುವುದಿಲ್ಲ. ಅಷ್ಟೇ ಅಲ್ಲದೇ ಇದು ಅಸಾಧ್ಯ. ಆದರೆ ಬಳಕೆದಾರರಿಗೆ ಆಯ್ಕೆಯನ್ನು ನೀಡಿದ್ದು ಒಂದು ವೇಳೆ ತಪ್ಪು ಮಾಹಿತಿಗಳು ಇದ್ದಲ್ಲಿ ಆ ಪೇಜ್ ಅನ್ನು ರಿಪೋರ್ಟ್ ಮಾಡಬಹುದಾಗಿದೆ. ರಿಪೋರ್ಟ್‍ಗಳ ಸಂಖ್ಯೆ ಜಾಸ್ತಿಯಾದರೆ ಗೂಗಲ್ ಸರ್ಚ್‍ನಲ್ಲಿ ಕೆಲಸ ಮಾಡುವವರು ಈ ವಿಚಾರವನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಂಡು ಆ ಪೇಜ್‍ಗಳನ್ನು ಸರ್ಚ್‍ನಿಂದ ತೆಗೆದು ಹಾಕುತ್ತಾರೆ. ಗೂಗಲ್ ಸರ್ಚ್‍ನ ಕೊನೆಯಲ್ಲಿ ‘Send Feedback” ಆಯ್ಕೆಯನ್ನು ಕ್ಲಿಕ್ ಮಾಡಿ ರಿಪೋರ್ಟ್ ಮಾಡಬಹುದಾಗಿದೆ. ಇದನ್ನೂ ಓದಿ : 3 ಕೆಂಪು ಟಿಕ್ ಮಾರ್ಕ್, ಕೋರ್ಟ್ ಸಮನ್ಸ್ – ದಯವಿಟ್ಟು ಈ ಮೆಸೇಜ್ ಶೇರ್ ಮಾಡಬೇಡಿ

 

 

Share This Article
Leave a Comment

Leave a Reply

Your email address will not be published. Required fields are marked *