ಓ ನನ್ನ ಕಂದ, ಬಂಗಾರವೇ ಕ್ಷಮಿಸು ಬಿಡು: ಸುಶಾಂತ್‍ಗೆ ಅಕ್ಕನ ಪತ್ರ

Public TV
3 Min Read

-ತಮ್ಮ ಬರೆದ ಪತ್ರ ಹಂಚಿಕೊಂಡ ಶ್ವೇತಾ ಸಿಂಗ್

ಮುಂಬೈ: ಮೃತ ಸೋದರ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‍ಗೆ ಸೋದರಿ ಶ್ವೇತಾ ಸಿಂಗ್ ಕೀರ್ತಿ ಭಾವನಾತ್ಮಕ ಪತ್ರ ಬರೆದು ಓ ನನ್ನ ಕಂದ, ಬಂಗಾರ ನಮ್ಮನ್ನ ಕ್ಷಮಿಸು ಬಿಡು ಎಂದು ಕೇಳಿಕೊಂಡಿದ್ದಾರೆ. ಫೇಸ್‍ಬುಕ್‍ನಲ್ಲಿ ಶ್ವೇತಾ ಸಿಂಗ್ ಬರೆದಿರುವ ಸಾಲುಗಳು ಹಾಗೂ ತಮ್ಮ ಅಕ್ಕನಿಗೆ ಬರೆದ ಪತ್ರ ಫೋಟೋ ವೈರಲ್ ಆಗುತ್ತಿದೆ.

ಮುದ್ದು ತಮ್ಮನಿಗೆ ಅಕ್ಕನ ಓಲೆ:
ನನ್ನ ಬೇಬಿ, ನನ್ನ ಬಾಬು, ನನ್ನ ಕಂದ ಇಂದು ನೀನು ನಮ್ಮ ಜೊತೆ ಇಂದು ದೈಹಿಕವಾಗಿಲ್ಲ. ನೀನು ತುಂಬಾ ನೋವಿನಲ್ಲಿದ್ದೆ ಎಂಬ ವಿಚಾರ ಗೊತ್ತು. ನೀನು ಓರ್ವ ಫೈಟರ್, ಎಲ್ಲ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುತ್ತಿದ್ದೆ. ನಿನ್ನ ಆ ಎಲ್ಲ ನೋವುಗಳಿಗೆ ನಾನು ಏನೂ ಮಾಡಲಾಗಲಿಲ್ಲ ಬಂಗಾರ. ಹಾಗಾಗಿ ನನ್ನನ್ನು ಕ್ಷಮಿಸುಬಿಡು. ಒಂದು ವೇಳೆ ನಿನ್ನ ಎಲ್ಲ ನೋವುಗಳನ್ನ ತೆಗೆದುಕೊಳ್ಳುವ ಶಕ್ತಿ ಇದ್ದಿದ್ದರೆ ನಾನು ಪಡೆದುಕೊಂಡು, ನನ್ನ ಎಲ್ಲ ಖುಷಿಯನ್ನ ನಿನಗೆ ನೀಡುತ್ತಿದ್ದೆ. ನಿಮ್ಮ ಹೊಳಪಿನ ಕಣ್ಣುಗಳು ಜಗತ್ತಿಗೆ ಕನಸು ಕಾಣುವುದನ್ನ ಕಲಿಸಿತು. ನಿನ್ನಯ ಮುಗ್ಧ ನಗು, ನಿನ್ನ ನಿಷ್ಕಲ್ಮಶ ಹೃದಯದ ಪ್ರತಿ ಬಿಂಬವಾಗಿತ್ತು. ನಿನ್ನನ್ನ ನಾನು ಯಾವಾಗಲೂ ಪ್ರೀತಿಸುತ್ತೇನೆ. ನೀನು ಎಲ್ಲಿಯೇ ಇರು ಖುಷಿಯಾಗಿರು ಎಂದಿದ್ದಾರೆ.

ನನ್ನ ಪ್ರೀತಿ ಪಾತ್ರವಾದ ವ್ಯಕ್ತಿಗಳಲ್ಲಿ ನೀನು ಮೊದಲಿಗ. ಇದು ಕಷ್ಟದ ಸಮಯ ಎಂದು ನನಗೆ ಗೊತ್ತು. ದ್ವೇಷದ ಜಾಗದಲ್ಲಿ ಪ್ರೀತಿ, ಕೋಪದ ಬದಲಾಗಿ ದಯೆ ಮತ್ತೆ ಕರುಣೆಯನ್ನ ಆಯ್ಕೆ ಮಾಡಿಕೊಳ್ಳೋಣ ಎಂದು ಬರೆದು ತನಗಾಗಿ ತಮ್ಮ ಬರೆದಿದ್ದ ಹಳೆಯ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

ಸುಶಾಂತ್ ಬರೆದ ಪತ್ರದಲ್ಲೇನಿದೆ?
ಅವಳು ಹೇಳುವುದನ್ನ ಖಂಡಿತಾ ಮಾಡುತ್ತಾಳೆ ಮತ್ತು ಅವಳು ಹೇಳುವುದನ್ನು ಖಂಡಿತ ಮಾಡಲ್ಲ. ಒಟ್ಟಿನಲ್ಲಿ ಎರಡೂ ಸಾಲುಗಳು ಒಂದೇ. ಈ ರೀತಿಯ ಮಹಿಳೆಯರಲ್ಲಿ ನೀನೇ ನಂಬರ್ ಒನ್. ಲವ್ ಯು, ನಿನ್ನ ತಮ್ಮ ಸುಶಾಂತ್.

ಜೂನ್ 14ರಂದು ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಮನೆಯ ತಮ್ಮ ಕೋಣೆಯಲ್ಲಿರುವ ಫ್ಯಾನಿಗೆ ನೇಣು ಬಿಗಿದುಕೊಂಡು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಲಿವುಡ್‍ನಲ್ಲಿ ಸ್ವಜನಪಕ್ಷಪಾತಕ್ಕೆ ಸೂಸೈಡ್ ಗೆ ಕಾರಣ ಎಂದು ಹೇಳಲಾಗುತ್ತಿದೆ. ಜೂನ್ 15 ಸೋಮವಾರ ಸಂಜೆ ಮುಂಬೈನ ವಿಲೆ ಪಾರ್ಲೆಯ ಸಮಾಜ ಸೇವಾ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯ್ತು.

ಬುಧವಾರ ಬಿಹಾರದ ಮುಜ್ಫಫರ್ ನ್ಯಾಯಾಲಯದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್, ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ನಟ ಸಲ್ಮಾನ್ ಖಾನ್ ವಿರುದ್ಧ ವಕೀಲ ಲ ಸುಧಿರ್ ಕುಮಾರ್ ಓಜಾ ದೂರು ಸಲ್ಲಿಸಿದ್ದಾರೆ.

ಏಳು ಸಿನಿಮಾಗಳಿಂದ ಸುಶಾಂತ್ ಅವರನ್ನು ಕೈ ಬಿಡಲಾಗಿತ್ತು. ಜೊತೆಗೆ ಕೆಲ ಸಿನಿಮಾಗಳು ಬಿಡುಗಡೆ ಆಗಿಲ್ಲ. ಈ ಎಲ್ಲ ಘಟನೆಗಳು ಸುಶಾಂತ್ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನಟ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಕೀಲ ಓಜಾ ಆರೋಪಿಸಿ, ಐಪಿಸಿ ಸೆಕ್ಸನ್ 306, 109, 504 ಮತ್ತು 506 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಕೈ ಪೋ ಚೆ ಸಿನಿಮಾ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದ ಸುಶಾಂತ್‍ಗೆ ಧೋನಿ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು. 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುಶಾಂತ್ ಅವರನ್ನು ಬಾಲಿವುಡ್ ತಾರತಮ್ಯದಿಂದ ನೋಡಲಾಗುತ್ತಿತ್ತು ಎಂಬ ಸುದ್ದಿ ಹರಿದಾಡಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‍ನಲ್ಲಿ ತಾರತಮ್ಯದ ಜನರು ಪ್ರಶ್ನೆ ಎತ್ತುತ್ತಿದ್ದಾರೆ. ಸುಶಾಂತ್‍ನನ್ನು ಮಾನಸಿಕವಾಗು ಕುಗ್ಗಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಯ್ತು. ಇದು ಸೂಸೈಡ್ ಅಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ನಟ ಕಂಗನಾ ರಣಾವತ್ ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *