ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡ ಭೂಪತಿ ಬೆಡಗಿ ಶೆರಿನ್

Public TV
2 Min Read

– ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟ ಶೆರಿನ್

ಹೈದರಾಬಾದ್: ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡು ನಟಿ ಶೆರಿನ್ ಶೃಂಗಾರ್ ಅವರು ತಮ್ಮನ್ನು ಟ್ರೋಲ್ ಮಾಡುತ್ತಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ.

ಕನ್ನಡದಲ್ಲಿ ದರ್ಶನ್ ಅವರ ಜೊತೆ ದ್ರುವ ಮತ್ತು ಭೂಪತಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮೆಚ್ಚುಗೆ ಪಾತ್ರರಾಗಿದ್ದ ನಟಿ ಶೆರಿನ್, ನಂತರದ ದಿನದಲ್ಲಿ ಸ್ವಲ್ಪ ದಪ್ಪ ಆಗಿದ್ದರು. ತನ್ನ ತೆಳ್ಳಗಿನ ಮೈಮಾಟದ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಶೆರಿನ್, ನಂತರ ತನ್ನ ದಪ್ಪಗಿನ ದೇಹದ ಮೂಲಕವೇ ಬಹಳ ಟ್ರೋಲ್ ಆಗಿದ್ದರು.

https://www.instagram.com/p/CCQnLa0F9PR/

ಟ್ರೋಲ್ ಮಾಡಿದವರಿಗೆ ಈಗ ಸರಿಯಾಗಿ ಉತ್ತರ ನೀಡಿರುವ ಶೆರಿನ್, ಲಾಕ್‍ಡೌನ್ ವೇಳೆ ತನ್ನ ದೇಹವನ್ನು ದಂಡಿಸಿ ಹತ್ತು ಕೆಜಿ ಸಣ್ಣ ಆಗಿದ್ದಾರೆ. ಈ ವಿಚಾರವಾಗಿ ಇನ್‍ಸ್ಟಾ ಪೋಸ್ಟ್ ಹಾಕಿರುವ ಶೆರಿನ್, ಒಂದು ವರ್ಷದಲ್ಲಿ ಹತ್ತು ಕೆಜಿ ಸಣ್ಣ ಆಗಿದ್ದೇನೆ. ಈಗ ನನ್ನ ಲುಕ್ ನೋಡಿ ನನಗೆ ಸಂತೋಷವಾಗಿದೆ. ತೂಕ ಇಳಿಸುವುದು ಸುಲಭ ಆದರೆ ಕೆಲ ಪದಗಳನ್ನು ಅರಗಿಸಿಕೊಳ್ಳುವುದು ಕಷ್ಟ. ನಾವು ಕೆಲವರ ಸಂತೋಷಕ್ಕೆ ಮತ್ತು ದುಃಖಕ್ಕೆ ಕಾರಣವಾಗಿರುತ್ತೇವೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/CCTLAQ2lXvB/

ತೆಳ್ಳಗಿದ್ದ ಶೆರಿನ್ ದಪ್ಪ ಅಗುತ್ತಿದ್ದಂತೆ ಅವರ ದೇಹ ಸೌಂದರ್ಯವನ್ನು ಗುರಿಯಾಗಿಸಿಕೊಂಡು ಕೆಲವರು ಟ್ರೋಲ್ ಮಾಡಿದ್ದರು. ಜೊತೆಗೆ ನೀವು ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟಾಗ ನೀವು ಮಧ್ಯವಯಸ್ಕ ಆಂಟಿಯಂತೆ ಕಾಣುತ್ತಿದ್ದೀರಿ ಎಂದು ಓರ್ವ ಅಭಿಮಾನಿ ಕಮೆಂಟ್ ಮಾಡಿದ್ದ. ಇದಕ್ಕೆ ರಿಪ್ಲೈ ಕೊಟ್ಟಿದ್ದ ಶೆರಿನ್ ಜನರು ನಾವು ಹೇಗೆ ಕಾಣಿಸುತ್ತೇವೆ ಎನ್ನುವ ಆಧಾರದ ಮೇಲೆ ಬೇಗ ಜಡ್ಜ್ ಮಾಡುತ್ತಾರೆ. ನಾವು ನಿಜವಾಗಿಯು ಬಾಹ್ಯ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇದು ಸ್ವಯಂ ಪ್ರೀತಿ ಮತ್ತು ಸ್ವಯಂ ಸ್ವೀಕಾರದ ಪರಿಕಲ್ಪನೆಯೊಂದಿಗೆ ಬದುಕಲು ಕಲಿಸುತ್ತೆ ಎಂದು ತಿರುಗೇಟು ನೀಡಿದ್ದರು.

ಕನ್ನಡದ `ಪೊಲೀಸ್ ಡಾಗ್’ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶೆರಿನ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ತಮಿಳು ಚಿತ್ರದಲ್ಲಿ ಶೆರಿನ್ ಖ್ಯಾತಿ ಗಳಿಸಿದ್ದಾರೆ. ದರ್ಶನ್ ಅಭಿನಯದ ಭೂಪತಿ ಸಿನಿಮಾ ಶೆರಿನ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಧ್ರುವ, ಭೂಪತಿ, ಸಿಹಿಗಾಳಿ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಶೆರಿನ್ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕಳೆದ ವರ್ಷ ತಮಿಳು ಬಿಗ್ ಬಾಸ್-3 ನಲ್ಲಿ ಶೆರಿನ್ ಭಾಗಿಯಾಗಿದ್ದರು. ಮೂರನೇ ರನ್ನರ್ ಅಪ್ ಆಗಿ ಬಿಗ್‍ಹೌಸ್‍ನಿಂದ ಹೊರಬಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *