ಬಿಗ್‍ಬಾಸ್ ಮನೆಯಲ್ಲಿ ಅಡುಗೆ ಮನೆಯ ವಿಚಾರವಾಗಿಯೇ ಹೆಚ್ಚು ಗಲಾಟೆಯಾಗಿರುವುದನ್ನು ನಾವು ನೋಡಿದ್ದೇವೆ. ಬೆಳಗ್ಗೆ ಸಂಬರಗಿ ಕಾಫಿ ಮಾಡುವ ವೇಳೆ ಕಾಫಿ ಪೌಡರ್ ಖಾಲಿಯಾಗಿದೆ ಇಬ್ಬರಿಗೆ ಮಾತ್ರ ಇದು ಸಾಕಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಯೇ ಇದ್ದ ಶಮಂತ್ ಹೇಳಿದ ಮಾತನ್ನು ಕೇಳಿ ಸಂಬರಗಿ ಶಾಕ್ ಆಗಿದ್ದಾರೆ.
ಕಾಫಿ ಪೌಡರ್‍ನ ಇನ್ನೊಂದು ಪ್ಯಾಕೇಟ್ ಬಚ್ಚಿಟ್ಟಿದ್ದಾರೆ ಎಂದು ಶಮಂತ್ ಹೇಳಿದ್ದಾರೆ. ಈ ವೇಳೆ ಮನೆಯ ನೂತನ ಕ್ಯಾಪ್ಟನ್ ಸಂಬರಗಿ ಏನು… ಕಾಫಿ ಪೌಡರ್ ಮುಚ್ಚಿಡುತ್ತಾರಾ ಎಲ್ಲರಿಗೂ ಅಲ್ಲವಾ. ಇವತ್ತಿನ ದಿನಕ್ಕೆ ಬದುಕಬೇಕು ಎಂದು ಡೈಲಾಗ್ ಹೊಡೆದು ಎಲ್ಲಿಟ್ಟಿದ್ದಾರೆ ಎಂದು ಸಂಬರಗಿ ಕೇಳಿದ್ದಾರೆ. ಶಮಂತ್ ಕಾಫಿ ಪೌಡರ್ ಇರುವ ಜಾಗವನ್ನು ತೋರಿಸಿ ಅರವಿಂದ್ ಇಟ್ಟಿರುವುದು ಎಂದು ಹೇಳಿದ್ದಾರೆ.
ಕಾಫಿ ಪೌಡರ್ ಇರುವುದನ್ನು ನೋಡಿದ ಸಂಬರಗಿ ಕಾಫಿ ಪೌಡರನ್ನು ಬಚ್ಚಿಡುತ್ತಾರೆ. ಇದೊಂದು ಹಗರಣ ಎಂದು ಹೇಳಿದ್ದಾರೆ. ಕಾಫಿ ಪೌಡರ್ ಸಿಕ್ಕಿತು ಎಂದು ಹೇಳುತ್ತೇನೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಸದಸ್ಯರು ಮನೆಯಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದು ವೀಕ್ಷಕರಿಗೆ ಗೊತ್ತಾಗುತ್ತದೆ. ಮನೆಯ ಸದಸ್ಯರು ಏನು ಮಾತನಾಡುತ್ತಾರೆ, ಯಾರ ಜತೆ ಇರುತ್ತಾರೆ ಎಂಬುದರ ಮೇಲೆ ಮನೆಯ ಕ್ಯಾಮೆರಾಗಳು ಕಣ್ಣಿಟ್ಟಿರುತ್ತವೆ. ಆದರೆ ಸಂಬರಗಿ ಮನೆಯಲ್ಲಿ ಅಡುಗೆ ಮನೆಯಲ್ಲಿ ಕಾಫಿ ಪೌಡರ್ ಕಳ್ಳತನದ ಹಗರಣವನ್ನು ಬಟಾಬಯಲು ಮಾಡಿದ್ದಾರೆ.
ಬಿಗ್‍ಮನೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿಯೇ ಇದೆ. ಮನೆಯ ಸದಸ್ಯರಿಗೆ ಕೆಲವರಿಗೆ ಬೇಕೆಬೇಕು. ಪ್ರತಿಯೊಬ್ಬರು ಕಾಫಿ ಕುಡಿಯುತ್ತಲೇ ಇರುತ್ತಾರೆ. ಈ ಹಿಂದೆ ಶಮಂತ್ ಕಾಫಿ ಪೌಡರ್‍ಅನ್ನು ಮುಚ್ಚಿಟ್ಟಿದ್ದರು. ಕಾಫಿ ಅವಶ್ಯಕತೆ ತುಂಬಾ ಇರುವುದರಿಂದ ಕಾಫಿ ಕಳ್ಳತನವಾಗುತ್ತಿದೆ.