ಐಪಿಎಲ್‍ಗೂ ಮುನ್ನ ಡ್ಯಾಶಿಂಗ್ ಲುಕ್‍ನಲ್ಲಿ ಕಾಣಿಸಿಕೊಂಡ ಧೋನಿ

Public TV
1 Min Read

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಆಗಾಗ ಹೇರ್ ಸ್ಟೈಲ್ ಬದಲಿಸುತ್ತಲೇ ಇರುತ್ತಾರೆ. ಈ ಹಿಂದೆ ಉದ್ದನೆ ಕೂದಲು ಬಿಟ್ಟುಕೊಂಡು ಟ್ರೆಂಡ್ ಸೃಷ್ಟಿಸಿದ್ದರು. ಇದೀಗ ಇದ್ದಕ್ಕಿದ್ದಂತೆ ಡ್ಯಾಶಿಂಗ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನು ಆಕ್ಟಿವ್ ಆಗಿಲ್ಲ. ಆದರೆ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಧೋನಿಯವರ ಈ ಡ್ಯಾಶಿಂಗ್ ಲುಕ್‍ನ್ನು ಹಂಚಿಕೊಂಡಿದ್ದು, ಈ ಹೊಸ ಲುಕ್‍ನ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ನೆಚ್ಚಿನ ಕ್ರಿಕೆಟಿಗನ ಹೇರ್ ಸ್ಟೈಲ್ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

 

View this post on Instagram

 

A post shared by Aalim Hakim (@aalimhakim)

ಅಂದಹಾಗೆ ಈ ಕೇಶ ವಿನ್ಯಾಸಕ್ಕೆ The Uber Cool Fox-Hawk Cut ಎಂದು ಹೆಸರಿಡಲಾಗಿದೆ. ಧೋನಿಯವರು ಹೊಸ ಫಂಕಿ ಹೇರ್ ಸ್ಟೈಲ್ ಹಾಗೂ ಗಡ್ಡದ ಫೋಟೋಗಳಿಗೆ ಪೋಸ್ ನಿಡಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಸಹ ಆಲಿಮ್ ಹಕೀಮ್ ಅವರ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.

ಈ ಫೋಟೋ ಕಂಡು ಫುಲ್ ಫಿದಾ ಆಗಿರುವ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಅವರು 25ರ ಯುವಕನಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ನಿಜವಾಗಿಯೂ ಇವರಿಗೆ 40 ವರ್ಷಗಳು ಆದರೆ 25 ವರ್ಷಗಳಂತೆ ಕಾಣುತ್ತಿದ್ದಾರೆ ಎಂದು ಅಭಿಮಾನಿ ಕಮೆಂಟ್ ಮಾಡಿದ್ದಾರೆ.

2020ರ ಆಗಸ್ಟ್ ನಲ್ಲಿ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಐಪಿಎಲ್‍ನ 14ನೇ ಆವೃತ್ತಿಗೆ ಸಿದ್ಧವಾಗುತ್ತಿದ್ದು, ಯುಎಇನಲ್ಲಿ ಪಂದ್ಯಗಳು ನಡೆಯಲಿವೆ.

Share This Article
Leave a Comment

Leave a Reply

Your email address will not be published. Required fields are marked *