ಐದನೇ ವಾರವೂ ಮಹಿಳಾ ಸ್ಪರ್ಧಿಯೇ ಎಲಿಮಿನೇಟ್ ಆಗ್ತಾರಾ?- ಬಿಗ್ ಮನೆಯಲ್ಲಿ ಚರ್ಚೆ

Public TV
2 Min Read

ಬಿಗ್‍ಬಾಸ್ ಮನೆಯಿಂದ ಪ್ರತಿವಾರ ಎಲಿಮಿನೇಟ್ ಆಗಿ ಹೆಂಗಳೆಯರೆ ಹೊರ ಹೋಗುತ್ತಿದ್ದಾರೆ. ಈ ವಿಚಾರವಾಗಿ ಮನೆಯಲ್ಲಿರುವ ಮಹಿಳಾ ಸದಸ್ಯರಿಗೆ ಕೊಂಚ ಬೇಸರವಾಗಿದೆ. ಪ್ರತಿವಾರ ಮಹಿಳೆಯರೆ ಹೋಗುತ್ತಿರುವುದರ ಹಿಂದೆ ಇದೆ ಆ ಒಂದು ಗುಟ್ಟು…

ಹೌದು ಮೊದಲ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ, 2ನೇ ವಾರ ನಿರ್ಮಲಾ ಚೆನ್ನಪ್ಪ, 3ನೇ ವಾರ ಗೀತಾ ಮನೆಯಿಂದ ಹೊರ ನಡೆದಿದ್ದರು. ಈ ವಾರವಾದರೂ ಪುರುಷ ಸ್ಪರ್ಧಿ ಮನೆಯಿಂದ ಆಚೆ ಹೋಗ್ತಾರೆ ಅನ್ನೋ ಲೆಕ್ಕಾಚಾರಗಳು ಆರಂಭಗೊಂಡಿದ್ದವು. ಆದರೆ ಈ ಬಾರಿಯೂ ಮನೆಯಿಂದ ಮಹಿಳಾ ಸ್ಪರ್ಧಿ ಚಂದ್ರಕಲಾ ಮೋಹನ್ ಹೊರ ನಡೆದಿದ್ದಾರೆ. ಇದು ಬಿಗ್‍ಬಾಸ್ ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ.

ಪ್ರತಿವಾರ ಮನೆಯಿಂದ ಹೆಣ್ಣುಮಕ್ಕಳೆ ಹೊರಗೆ ಹೋಗುತ್ತಿದ್ದೇವೆ. ನಾವು ನಮ್ಮನ್ನು ಬಿಟ್ಟು ಕೊಡಬಾರದು. ನಾವು ಸ್ಟ್ರಾಂಗ್ ಆಗಿದ್ದೇವೆ ಎಂದು ಶುಭಾ ಪೂಂಜಾ ಮತ್ತು ನಿಧಿ ಮಾತನಾಡಿಕೊಂಡಿದ್ದರು. ಈ ವಿಚಾರವಾಗಿ ಮನೆಯ ಹೆಂಗಳೆಯರು ಮನೆಯ ಸ್ಪರ್ಧಿಗಳ ಬಳಿ ಬೇಸರವನ್ನು ಹೊರ ಹಾಕಿದ್ದರು. ಈ ವಿಚಾರ ಸೂಪರ್ ಸಂಡೆ ವಿಥ್ ಸುದೀಪದಲ್ಲಿ ಚರ್ಚೆಯಾಗಿದೆ. ನೀವೆ ನಿಮಗೆ ಅನ್ನಿಸಿದ ಹೆಸರನ್ನು ತೆಗುಕೊಳ್ಳುತ್ತಿದ್ದೀರಾ. ನೀವೆ ಸೂಚಿಸಿದ ವ್ಯಕ್ತಿ ಮನೆಯಿಂದ ಆಚೆ ಹೋಗುತ್ತಿದ್ದಾರೆ. ನೀವೆ ಹೆಸರು ಸೂಚಿಸಿ ಹೆಣ್ಣು ಮಕ್ಕಳೆ ಹೋಗುತ್ತಿದ್ದಾರೆ ಎನ್ನುವುದು ತಪ್ಪಾಗುತ್ತದೆ. ಸರಿಮಾಡಿಕೊಳ್ಳಿ ಎಂದು ಸುದೀಪ್ ಹೇಳಿದ್ದಾರೆ.

ಮನೆಯ ಪುರುಷ ಸ್ಪರ್ಧಿಗಳು ನಾವು ಟಾಸ್ಕ್ ನೋಡಿ ಅವರು ಹೇಗೆ ಇರುತ್ತಾರೆ ಎಂದು ನಾವು ಯೋಚಿಸಿ ಪ್ರಾಮಾಣಿಕವಾಗಿ ಹೆಸರು ಸೂಚಿಸುತ್ತಿದ್ದೇವೆ. ನಾವು ನಮ್ಮ ನಮ್ಮ ನಿರ್ಧಾರಗಳನ್ನು ಹೇಳಿಕೊಳ್ಳುತ್ತಿದ್ದೇವೆ ಇದರಲ್ಲಿ ಯಾವ ಗೇಮ್ ಪ್ಲ್ಯಾನಿಂಗ್ ಇಲ್ಲ ಸರ್ ಎಂದು ಹೇಳಿದ್ದಾರೆ.

ಚಂದ್ರಕಲಾ ಮೋಹನ್ ಅವರಿಗೆ ಸುದೀಪ್ ಮುಂದಿನವಾರ ಈ ಜಾಗದಲ್ಲಿ ಯಾರು ಇರಬೇಕು ಎಂದು ಕೇಳಿದಾಗ ನಿಧಿ ಅವರ ಹೆಸರನ್ನು ಚಂದ್ರಕಲಾ ಕೆಲವು ಕಾರಣಗಳನ್ನು ಕೊಟ್ಟು ಸೂಚಿಸಿದ್ದಾರೆ. ಹೀಗಾಗಿ ಎಲ್ಲೋ ಒಂದು ಕಡೆ ಮುಂದಿನ ವಾರವು ಹೆಣ್ಣು ಮಕ್ಕಳೆ ಹೊರಗೆ ಬರುತ್ತಾರೆ ಅನ್ನೋ ಅನುಮಾನ ಶುರುವಾಗಿದೆ.

ಆಟ ಎಂದರೆ ಏಳು ಬೀಳು ಇರುವುದು ಸಹಜ. ಹೆಣ್ಣು, ಗಂಡು ಎನ್ನುವ ಬೇಧವಿಲ್ಲದೆ ಸರಿಸಮಾನವಾಗಿ ಫೈಟ್ ಕೊಟ್ಟಾಗ ಮಾತ್ರ ಬಿಗ್‍ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯ ಎಂದು ಬಿಗ್‍ಬಾಸ್ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *