ಗಾಂಧೀನಗರ: 5 ವರ್ಷದ ಕಂದಮ್ಮ ಅಮ್ಮನ ಶವದ ಜೊತೆ ಆಟವಾಡಿದ ಹೃದಯವಿದ್ರಾವಕ ಘಟನೆ ಗುಜರಾತಿನ ರಾಜಧಾನಿ ಗಾಂಧೀನಗರದಲ್ಲಿ ನಡೆದಿದೆ.
ಮಗುವಿನ ಜೊತೆಯಲ್ಲಿಯೇ ಮಹಿಳೆ ಅಡ್ಲಾಜ್-ಅಂಬಾಪುರ ರಸ್ತೆ ಬದಿಯ ಕಸವನ್ನ ಸ್ವಚ್ಛಗೊಳಿಸುತ್ತಿರುವಾಗ ಸಾವನ್ನಪ್ಪಿದ್ದಾರೆ. ಆದ್ರೆ ಏನು ಅರಿಯದ ಮುಗ್ಧ ಕಂದಮ್ಮ ಅಮ್ಮನ ಶವದ ಜೊತೆಯಲ್ಲಿ ಕೆಲ ಸಮಯ ಆಟವಾಡಿದೆ. ನಂತರ ಅಮ್ಮನ ಬಟ್ಟೆ ಹಿಡಿದು ಎಚ್ಚರಗೊಳಿಸುವ ಪ್ರಯತ್ನ ಮಾಡಿದೆ. ಮಗುವನ್ನ ಕಂಡ ಸಾರ್ವಜನಿಕರು ಮಹಿಳೆಯನ್ನ ಎಚ್ಚರಗೊಳಿಸಲು ಮುಂದಾಗ ಆಕೆ ಸಾವನ್ನಪ್ಪಿರೋದು ತಿಳಿದಿದೆ. ಕೂಡಲೇ ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಗುವಿನ ಜೊತೆ ಪರೀಕ್ಷೆಗೆ ತೆರಳಿದ ತಾಯಿ- ಅಮ್ಮನಾದ ಪೇದೆಯ ಫೋಟೋ ವೈರಲ್
ಮೃತ ಮಹಿಳೆ ಮಂಜೂ ದೇವಿ ಪತಿ ರಾಮನಾಥ್ ಜೋಗಿ ಹಾಗೂ ಮೂರು ಮಕ್ಕಳೊಂದಿಗೆ ಶನಿದೇವ ನಮಂದಿರದ ಬಳಿ ವಾಸವಾಗಿದ್ದರು. ಎಂದಿನಂತೆ ಪತಿ ಕೆಲಸಕ್ಕೆ ತೆರಳಿದ್ರೆ ಮಂಜೂ ದೇವಿ ಸಹ 5 ವರ್ಷದ ಕಂದಮ್ಮನ ಜೊತೆ ಪೌರ ಕೆಲಸಕ್ಕೆ ಆಗಮಿಸಿದ್ದರು. ರಸ್ತೆ ಬದಿ ಕೆಲಸ ಮಾಡೋವಾಗ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಮಂಜೂದೇವಿ ರಸ್ತೆಯಲ್ಲಿ ಕುಸಿದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ – ಬಾಣಂತಿ ರೋಧನೆ
ಮಗು ಮಾತ್ರ ತುಂಬಾ ಸಮಯದವರೆಗೂ ಅಮ್ಮನ ಶವದ ಜೊತೆಯಲ್ಲಿಯೇ ಆಟವಾಡಿದೆ. ಅಮ್ಮ ಎಚ್ಚರಗೊಳ್ಳದಿದ್ದಾಗ ಮಗು ಜೋರಾಗಿ ಅಳಲು ಆರಂಭಿಸಿದಾಗ ಸಾರ್ವಜನಿಕರು ಮಹಿಳೆ ಬಳಿ ತೆರಳಿದಾಗ ಮಂಜೂದೇವಿ ಸಾವನ್ನಪ್ಪಿರೋದು ಖಚಿತವಾಗಿದೆ. ಪೊಲೀಸರು ಶವವನ್ನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಊಟ ಮಾಡಿಸಿ ಕೈ ತೊಳೆಯಲು ಹೋದ ಅಮ್ಮ – ಮಹಡಿಯಿಂದ ಬಿದ್ದು ಮಗು ಸಾವು