ಎಲ್ಲರೆದುರೇ ಮಹಿಳಾ ಸಿಬ್ಬಂದಿ ಜೊತೆ ಲೆಕ್ಕ ಅಧೀಕ್ಷಕ ರೋಮ್ಯಾನ್ಸ್!

Public TV
2 Min Read

– ಬೇಸತ್ತ ಸಿಬ್ಬಂದಿಯಿಂದ ವೀಡಿಯೋ
– ಬಳ್ಳಾರಿ ಜಿ.ಪಂ ಕಚೇರಿಯಲ್ಲಿ ಕಿಸ್ಸಾಯಣ

ಬಳ್ಳಾರಿ: ಸಾರ್ವಜನಿಕರ ಸೇವೆ ನಡೆಯುವ ಸರ್ಕಾರಿ ಕಚೇರಿಯಲ್ಲೇ ಅಧಿಕಾರಿಯೋರ್ವ ಮಹಿಳಾ ಸಿಬ್ಬಂದಿಯೊಂದಿಗೆ ರೋಮ್ಯಾನ್ಸ್ ಮಾಡಿ, ನಿತ್ಯ ಖುಲ್ಲಂ ಖುಲ್ಲಾ ನಡೆಸುತ್ತಿದ್ದ ಘಟನೆ ಬಳ್ಳಾರಿಯ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲಾ ಪಂಚಾಯ್ತಿಯಲ್ಲಿ ಲೆಕ್ಕ ಅಧೀಕ್ಷಕ ಸಂಪತ್ ಕುಮಾರ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು, ಆತನ ಮತ್ತೊಂದು ಮುಖದ ವೀಡಿಯೋ ವೈರಲ್ ಆಗಿದೆ. ಕಳೆದ ಒಂದು ವರ್ಷದಿಂದಲೂ ಈತ ಕಚೇರಿಯ ಅವಧಿಯ ಸಮಯದಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ಕಿಸ್ಸಾಯಾಣ ನಡೆಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಈತನ ಕೃತ್ಯದ ವೀಡಿಯೋ ಕಳೆದ 6 ರಿಂದ 7 ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಯ ಇಬ್ಬರ ರೋಮ್ಯಾನ್ಸ್ ಕಾಟಕ್ಕೆ ಕಚೇರಿಯ ಸಿಬ್ಬಂದಿ ಕೂಡ ಬೇಸತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇ ಈತನ ವಿರುದ್ಧ ಕೆಲ ಮಹಿಳಾ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಈತನ ಇಲಾಖೆಯಲ್ಲಿ ಉನ್ನತ ಹಂತದಲ್ಲಿ ಪ್ರಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಮೇಲಾಧಿಕಾರಿಗಳು ಕೂಡ ಈತನ ಮೇಲೆ ಕ್ರಮಕೈಗೊಳ್ಳದೆ ಇರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಚಪಲ ಚನ್ನಿಗರಾಯನ ಕೃತ್ಯದ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಪಂಚಾಯ್ತಿ ಅಧ್ಯಕ್ಷೆ ಭಾರತಿ, ಮಹಿಳಾ ಸಿಬ್ಬಂದಿಯ ಮೇಲೆ ಲೆಕ್ಕ ಅಧೀಕ್ಷಕ ಸಂಪತ್ ಕುಮಾರ್ ನಡೆಸುತ್ತಿದ್ದ ಕೃತ್ಯದ ಬಗ್ಗೆ ಮಾಹಿತಿ ಇತ್ತು. ಆತನ ವಿರುದ್ಧ ಈಗಾಗಲೇ 3 ಬಾರಿ ದೂರು ನೀಡಿದ್ದೇವೆ. ಅಲ್ಲದೇ ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ಮನವಿಯನ್ನು ಮಾಡಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇದನ್ನು ನೋಡಿದರೆ ಅಧಿಕಾರಿಗಳಿಗೆ ಆತನ ಪರ ಒಲವು ಇದೆಯಾ ಎಂಬ ಅನುಮಾನ ಮೂಡುತ್ತಿದೆ. ಜಿಲ್ಲಾಧಿಕಾರಿಗಳು ವರ್ಗಾವಣೆಯಾದ ಕಾರಣ ಆತನ ಮೇಲೆ ಕ್ರಮಕೈಗೊಳ್ಳಲು ಆಗಲಿಲ್ಲ ಎನ್ನಲಾಗಿದ್ದು, ಈಗ ಹೊಸದಾಗಿ ಬಂದಿರುವ ಅಧಿಕಾರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದ್ದರಿಂದ ಅವರು ಚೇತರಿಸಿಕೊಂಡು ಕಚೇರಿಗೆ ಆಗಮಿಸಿದ ಬಳಿಕ ಮತ್ತೆ ಅವರ ಮೇಲೆ ಕ್ರಮಕೈಗೊಳ್ಳಲು ಒತ್ತಡ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಜಿಪಂ ಸದಸ್ಯೆ ಉಮಾದೇವಿ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಿಮ್ಮ ವರದಿ ನೋಡಿದ ಬಳಿಕ ನನ್ನ ಗಮನಕ್ಕೆ ಬಂದಿದೆ. ಸರ್ಕಾರಿ ಕಚೇರಿಯಲ್ಲಿ ಈ ರೀತಿ ವರ್ತನೆ ಮಾಡುವುದು ಖಂಡನೀಯ. ಸರ್ಕಾರಿ ಕೆಲಸ ಸಮಯದಲ್ಲಿ ಇಂತಹ ಕೃತ್ಯ ಎಸಗಿರುವುದು ಈಗ ನಮ್ಮ ಗಮನಕ್ಕೆ ಬಂದಿದೆ. ಅಧಿಕಾರಿಗಳಿಗೆ ಕೂಡಲೇ ಕರೆ ಮಾಡಿ ಕ್ರಮಕೈಗೊಳ್ಳಲು ತಿಳಿಸುತ್ತೇವೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *