ಎಫ್‍ಬಿ ದೋಸ್ತಿ, ವಾಟ್ಸಪ್ ಚಾಟಿಂಗ್- 40ರ ಮಹಿಳೆ ಮೇಲೆ 30ರ ವ್ಯಕ್ತಿಯಿಂದ ರೇಪ್

Public TV
1 Min Read

– ಮೊಬೈಲ್ ಕರೆಯಿಂದಾಗಿ ಬಯಲಾಯ್ತು ಗೆಳೆಯನ ನೀಚತನ
– ಮದ್ವೆಯಾಗೋದಾಗಿ ಹೇಳಿ 2.5 ಲಕ್ಷ ರೂ. ಲಪಟಾಯಿಸಿದ

ರಾಯ್ಪುರ: ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಪ್ರಿಯಕರನನ್ನ ಪೊಲೀಸರು ಬಂಧಿಸಿದ್ದಾರೆ.

ಬನಾರಸ ಮೂಲದ 30 ವರ್ಷದ ಸತ್ಯೇಂದ್ರ ಗಿರಿ ಬಂಧಿತ ಮೋಸಗಾರ. 2019ರಲ್ಲಿ 40 ವರ್ಷದ ದಿವ್ಯಾಂಗ ಮಹಿಳೆಗೆ ಸತ್ಯೇಂದ್ರನ ಪರಿಚಯವಾಗಿತ್ತು. ಎಫ್‍ಬಿ ಪರಿಚಯವಾದ ಇಬ್ಬರು ತಮ್ಮ ತಮ್ಮ ಮೊಬೈಲ್ ನಂಬರ್ ಬದಲಿಸಿಕೊಂಡಿದ್ದರು. ಮಹಿಳೆ ಸರ್ಕಾರಿ ಉದ್ಯೋಗಿ ಎಂದು ತಿಳಿಯುತ್ತೆಲೇ ತನ್ನ ನಯವಾದ ಮಾತುಗಳಿಂದ ಮಹಿಳೆಯನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದನು. ಮಹಿಳೆ ತಾನು ಅಂಗವಿಕಲೆ ಅಂತ ಹೇಳಿದ್ರೂ ಮದುವೆಯಾಗೋದಾಗಿ ಸತ್ಯೇಂದ್ರ ನಂಬಿಸಿದ್ದನು.

ಸೆಪ್ಟೆಂಬರ್ 2019ರಂದು ರಾಯ್ಪುರಕ್ಕೆ ಬಂದ ಸತ್ಯೇಂದ್ರ ಉಳಿದುಕೊಳ್ಳಲು ಸ್ಥಳವಿಲ್ಲ ಎಂದು ಹೇಳಿ ಮಹಿಳೆಯ ಮನೆಯಲ್ಲಿ ಠಿಕಾಣಿ ಹೂಡಿದ್ದನು. ಮಹಿಳೆಯ ಅಂಗವೈಕಲ್ಯವನ್ನ ದುರುಪಯೋಗಿಸಿಕೊಂಡ ಸತ್ಯೇಂದ್ರ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ದೂರು ದಾಖಲಿಸಲು ಮುಂದಾಗ್ತಿದ್ದಂತೆ ಮದುವೆ ಆಗೋದಾಗಿ ಮಾತು ನೀಡಿದ್ದನು. ಅಂದಿನಿಂದ ಇಬ್ರು ಮದುವೆ ಆಗದೇ ಜೊತೆಯಾಗಿರಲು ಆರಂಭಿಸಿದ್ದರು.

ಒಂದು ಮಗುವಿನ ತಂದೆ: ಕೆಲಸಕ್ಕಾಗಿ ಅಂತ ಸುಳ್ಳು ನೆಪಗಳನ್ನ ಹೇಳಿ ಸತ್ಯೇಂದ್ರ ಮಹಿಳೆಯಿಂದ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡಿದ್ದನು. ಕೆಲ ದಿನಗಳ ಹಿಂದೆ ಸತ್ಯೇಂದ್ರ ಸ್ನಾನಕ್ಕೆ ತೆರಳಿದ್ದಾಗ ಆತನ ಮೊಬೈಲ್ ಗೆ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ಮಾತನಾಡಿದ ಮಹಿಳೆ ತನ್ನ ಹೆಸರು ಸಾಲೇಹಾ, ತಾನು ಸತ್ಯೇಂದ್ರ ಪತ್ನಿ, ತಮಗೆ ಒಂದು ವರ್ಷದ ಮಗಳಿದ್ದಾಳೆ ಎಂದು ಹೇಳಿದ್ದಾಳೆ.

ಪ್ರಿಯಕರ ಸತ್ಯೇಂದ್ರ ಮದುವೆ ವಿಷಯ ತಿಳಿಯುತ್ತಿದ್ದಂತೆ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *