ಪಿಯು ಫಲಿತಾಂಶ, ಎಂದಿನಂತೆ ಬಾಲಕಿಯರೇ ಮೇಲುಗೈ – ಉಡುಪಿ, ದಕ್ಷಿಣ ಕನ್ನಡ ಫಸ್ಟ್‌

Public TV
2 Min Read

– ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಫಲಿತಾಂಶ
– ಮೆಸೇಜ್‌ ಮೂಲಕ ಬರಲಿದೆ ಫಲಿತಾಂಶ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ.69.20 ಫಲಿತಾಂಶ ದಾಖಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಗಿತ ಕಂಡಿದೆ. ಕಳೆದ ವರ್ಷ ಶೇ.68.68 ಫಲಿತಾಂಶ ಬಂದಿತ್ತು. 5,56,267 ಹೊಸದಾಗಿ ಬರೆದ ವಿದ್ಯಾರ್ಥಿಗಳ ಪೈಕಿ 3,84,947 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮೊದಲ ಸ್ಥಾನ ಸಿಕ್ಕಿದೆ. ಕೊಡಗು, ಉತ್ತರ ಕನ್ನಡ ಜಿಲ್ಲೆಗಳು ಕ್ರಮವಾಗಿ ಎರಡು, ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ವಿಜಯಪುರಕ್ಕೆ ಕೊನೆಯ ಸ್ಥಾನ ಸಿಕ್ಕಿದೆ. 1,83,725 (ಶೇ.54.55) ಬಾಲಕರು 2,43,572 (ಶೇ.68.73) ಬಾಲಕಿಯರು ತೇರ್ಗಡೆಯಾಗಿದ್ದಾರೆ.

ಇಂದು ಬೆಳಿಗ್ಗೆ 11.30ಕ್ಕೆ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಪಿಯು ಬೋರ್ಡ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಅನೇಕ ಸವಾಲಿನ ಮಧ್ಯೆ ಪರೀಕ್ಷೆ ನಡೆದಿದೆ. ದೇಶದಲ್ಲಿ ಮೊದಲ ರಾಜ್ಯ ಈ ಕಷ್ಟದಲ್ಲಿ ಪರೀಕ್ಷೆ ಮಾಡಿ ಫಲಿತಾಂಶ ನೀಡುತ್ತಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗಲಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸರ್ಕಾರ ಅಧಿಕೃತ ಜಾಲತಾಣ www.karresults.nic.in ಗಳಲ್ಲಿಯೂ ಸಹ ವೀಕ್ಷಿಸಬಹುದು.

ಜಿಲ್ಲಾವಾರು ಫಲಿತಾಂಶ
ಉಡುಪಿ, ದಕ್ಷಿಣ ಕನ್ನಡ ಮೊದಲ ಸ್ಥಾನ – ಶೇ.90.71
ಕೊಡಗು ಎರಡನೇ ಸ್ಥಾನ – ಶೇ.81.53
ಉತ್ತರ ಕನ್ನಡ ಮೂರನೇ ಸ್ಥಾನ – ಶೇ.80.97

ಯಾವ ಶ್ರೇಣಿಯಲ್ಲಿ ಎಷ್ಟು ಮಂದಿ?
ಉನ್ನತ – 68,866
ಪ್ರಥಮ – 2,21,866
ದ್ವಿತೀಯ – 77,455
ತೃತೀಯ – 49,110

ವಿಭಾಗವಾರು ಫಲಿತಾಂಶ
ಕಲಾ – ಶೇ.41.27(ಕಳೆದ ವರ್ಷ ಶೇ.50.53)
ವಿಜ್ಞಾನ -ಶೇ.76.02% ( ಕಳೆದ ವರ್ಷ ಶೇ. 66.58)
ಕಾಮರ್ಸ್-ಶೇ. 65.53( ಕಳೆದ ವರ್ಷ 66.39)

ವಿಭಾಗವಾರು ಅತಿ ಹೆಚ್ಚು ಅಂಕ
ಕಲಾ – 594
ವಾಣಿಜ್ಯ  – 598
ವಿಜ್ಞಾನ  – 596

 

ಈ ಬಾರಿ ಒಟ್ಟು 6 ಲಕ್ಷದ 80 ಸಾವಿರದ 49 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 3 ಲಕ್ಷದ 38 ಸಾವಿರದ 431 ವಿದ್ಯಾರ್ಥಿಗಳು ಹಾಗೂ 3 ಲಕ್ಷದ 41 ಸಾವಿರದ 618 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ರಾಜ್ಯಾದ್ಯಂತ 1016 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 70 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿತ್ತು. ಒಟ್ಟು 11,970 ಶಿಕ್ಷಕರು ಮೌಲ್ಯಮಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *