ಎಂತಹ ಕಷ್ಟ ಬಂದ್ರೂ ಎದುರಿಸೋದನ್ನ ಕಲಿಸಿರುವುದೇ ದರ್ಶನ್ ಸರ್: ಪವನ್ ಒಡೆಯರ್

Public TV
2 Min Read

– ಪುನೀತ್, ಉಪ್ಪಿ, ಗಣೇಶ್, ರವಿಚಂದ್ರನ್ ಬಗ್ಗೆ ಒಡೆಯರ್ ಮಾತು

ಬೆಂಗಳೂರು: ಎಂತಹ ಕಷ್ಟ ಬಂದರೂ ಅದನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿಸಿರುವುದೇ ದರ್ಶನ್ ಸರ್ ಎಂದು ನಿರ್ದೇಶಕ ಪವನ್ ಒಡೆಯರ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಡಿಹೊಗಳಿದ್ದಾರೆ.

‘ಬದಲಾಗು ನೀನು ಬದಲಾಯಿಸು ನೀನು’ ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಯಾಂಡಲ್‍ವುಡ್ ಸ್ಟಾರ್ ಗಳು ಸೇರಿ ಕೊರೊನಾ ವಿರುದ್ಧ ದೃಶ್ಯ ರೂಪಕವನ್ನು ಸಿದ್ಧ ಮಾಡುತ್ತಿದ್ದಾರೆ. ಇದರ ಹೊಣೆ ಹೊತ್ತಿರುವ ಪವನ್ ಒಡೆಯರ್, ಎಲ್ಲ ಸ್ಟಾರ್ ನಟರನ್ನು ಭೇಟಿಯಾಗಿ ಅವರ ಜೊತೆ ಫೋಟೋ ತೆಗೆದುಕೊಂಡು ಕೆಲ ಸಾಲುಗಳೊಂದಿಗೆ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ವಿಚಾರವಾಗಿ ದರ್ಶನ್ ಅವರ ಬಗ್ಗೆ ಟ್ವೀಟ್ ಮಾಡಿರುವ ಒಡೆಯರ್, ಎಂತಹ ಸಂಕಷ್ಟ ಎದುರಾದರೂ, ಅದನ್ನು ಎದುರಿಸಿ ಮೆಟ್ಟಿ ನಿಲ್ಲುವುದನ್ನು ಕಲಿಸಿರುವುದೇ ದರ್ಶನ್ ಸರ್ ಅವರ ವ್ಯಕ್ತಿತ್ವ. ಮಾತೃ ಮಮತೆ, ಸದಾ ಎಲ್ಲರಿಗೂ ಒಳ್ಳೆದಾಗಲಿ ಅನ್ನುವ ಅವರ ಗುಣ ಅತ್ಯದ್ಭುತ, ಜಗನ್ಮಾತೆ ಚಾಮುಂಡೇಶ್ವರಿಯ ಪುತ್ರ ದರ್ಶನ್ ಸರ್ ಅವರು, ಬದಲಾಗು ನೀನು ಬದಲಾಯಿಸು ನೀನು ದೃಶ್ಯ ರೂಪಕಕ್ಕೆ ನಿಮ್ಮ ಸಮಯ ನೀಡಿದ್ದಕೆ ಥ್ಯಾಂಕ್ಸ್ ಸರ್ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆಯೂ ಟ್ವೀಟ್ ಮಾಡಿದ್ದು, ದೇವರುಗಳು ದೇವಲೋಕಕ್ಕೆ ಹೋಗಬೇಕಾದರೆ, ಒಂದು ದೈವಾಂಶವನ್ನು ಭೂಲೋಕದಲ್ಲಿ ಬಿಟ್ಟು ಹೋಗುತ್ತಾರೆ. ಅದೇ ಅಪ್ಪು ಸರ್ ಅವರ ನಗು. ಮಗುವಿನ ಮನಸ್ಸು, ಮುತ್ತಿನಂತಹ ನಗು ಹೊತ್ತಿರುವ ನಮ್ಮ ಅಪ್ಪು ಸರ್ ಯಾವಾಗಲೂ, ಎಲ್ಲರಿಗೂ ಹತ್ತಿರ. ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯ ರೂಪಕಕ್ಕೆ ನಿಮ್ಮ ಸಮಯ ನೀಡಿದ್ದಕ್ಕಾಗಿ ಲವ್ ಯೂ ಸರ್ ಎಂದು ಬರೆದುಕೊಂಡಿದ್ದಾರೆ.

ಚಂದನವನದ ಚೆಲುವ, ಚಿನ್ನದ ಹುಡುಗ ಗಣೇಶ್ ಸರ್ ಅವ್ರಿಗೆ ಒಂದೇ ಒಂದು ಕರೆ ಮಾಡಿದ್ದೂ, ಮುಂದಿನ 10 ನಿಮಿಷದಲ್ಲಿ ಅವರ ಮನೆಯಲ್ಲಿ ಇದ್ದೆವು. ಇಂತಹ ಹೃದಯ ಶ್ರೀಮಂತಿಕೆಯುಳ್ಳ ನೀವು ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯ ರೂಪಕಕ್ಕೆ ದನಿಗೂಡಿಸಿದ್ದಕ್ಕೆ ಧನ್ಯವಾದಗಳು ಸರ್ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಕರುನಾಡಿನ ಕನಸುಗಾರನ ಜೊತೆ ಹೀಗೆ ಒಂದು ಫೋಟೋ ತೆಗೆದುಕೊಳ್ಳಬೇಕು ಎಂಬ ನನ್ನ ಕನಸು ನನಸಾದ ಕ್ಷಣ. ರವಿ ಸರ್ ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯ ರೂಪಕಕ್ಕೆ ನಿಮ್ಮ ಸಮಯ ನೀಡಿದ್ದಕ್ಕೆ ಧನ್ಯವಾದಗಳು ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಬರೆದರೆ, ನಂತರ ಉಪ್ಪಿ ಸರ್ ಜೊತೆ ಸಮಯ ಕಳೆದಾಗಲೆಲ್ಲ ಅನಿಸುವುದು ಒಂದೇ, ಹೊಸದೊಂದು ಆಲೋಚನೆಗೆ ನಾಂದಿ ಹಾಡಲಿಕ್ಕೆ ನಿರ್ಧಾರ ಮಾಡಿಸೋ ಅದ್ಭುತ ವ್ಯಕ್ತಿತ್ವಕ್ಕೆ ಸಾವಿರ ಸಲಾಂ. ನೀವು ನಮಗೆ ಸ್ಫೂರ್ತಿ ಸರ್ ಎಂದು ಉಪೇಂದ್ರ ಅವರ ಬಗ್ಗೆ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *