ಇಬ್ಬರು ಯುವತಿಯರನ್ನ ಪ್ರೀತಿಸಿ ಒಂದೇ ಮಂಟಪದಲ್ಲಿ ಮದವೆಯಾದ ಪುಣ್ಯಾತ್ಮ..!

Public TV
2 Min Read

– ಒಂದೇ ಮನೆಯಲ್ಲಿದ್ದಾರೆ ಮೂವರು

ರಾಯ್ಪುರ: ಪ್ರೀತಿ ಮಾಡಿ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ಕಷ್ಟಪಟ್ಟರೂ ಎಷ್ಟೋ ಜನರಿಗೆ ಆ ಪ್ರೀತಿ ಉಳಿಸಿಕೊಳ್ಳಲು ಆಗುವುದಿಲ್ಲ. ಆದರೆ ಇಲ್ಲೊಬ್ಬ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವಂತೆ ಒಂದೇ ಮಂಟಪದಲ್ಲಿ ಪ್ರೀತಿ ಮಾಡಿದ ಇಬ್ಬರು ಯುವತಿಯರನ್ನು ಅವರ ಕುಟುಂಬಸ್ಥರ ಮುಂದೆಯೇ ಮದುವೆಯಾಗಿ ಸುದ್ದಿಯಾಗಿದ್ದಾನೆ.

ಹೌದು. ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾದ ಅಚ್ಚರಿಯ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಜನವರಿ 5 ರಂದು ನಡೆದ ಈ ಮದುವೆಗೆ ಸುಮಾರು 600 ಜನರು ಸಾಕ್ಷಿಯಾಗಿದ್ದಾರೆ.

ಬಸ್ತಾರ್ ಜಿಲ್ಲೆಯ ರೈತ ಮತ್ತು ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದು ಮೌರ್ಯ(21), ಬುಡಕಟ್ಟು ಯುವತಿ ಸುಂದರಿ ಕಶ್ಯಪ್ ಅವರನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಫೋನ್ ಕರೆಯಲ್ಲಿ ಮಾತನಾಡುತ್ತಾ ಇವರ ಮಧ್ಯೆ ಪ್ರೀತಿ ಚಿಗುರಿ, ಈ ಜೋಡಿ ಮದುವೆಯಾಗಲು ನಿರ್ಧರಿಸಿದರು. ಆದರೆ ವಿಧಿ ಚಂದು ಸಂಬಂಧಿಕರ ಮದುವೆಯಲ್ಲಿ ಭೇಟಿಯಾಗಿದ್ದ ಹಸೀನಾಳನ್ನು ಮತ್ತೆ ಪ್ರೀತಿಸುವಂತೆ ಮಾಡಿತು.

ಚಂದು ಈಗಾಗಲೇ ಒಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದ ಬಳಿಕ ಕೂಡ ಅದನ್ನು ಒಪ್ಪಿಕೊಂಡ ಹಸೀನಾ ತನ್ನೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿರುವಂತೆ ಚಂದುವನ್ನು ಒತ್ತಾಯಿಸಿದಳು. ಹಸೀನಾ ಮತ್ತು ಸುಂದರಿ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ತಿಳಿದುಕೊಂಡ ಬಳಿಕ ನನ್ನೊಂದಿಗೆ ಸಂಬಂಧ ಹೊಂದಲು ಒಪ್ಪಿಕೊಂಡರು. ಹೀಗೆ ಮೂವರು ದೂರವಾಣಿ ಕರೆಯಲ್ಲಿಯೇ ಸಂಪರ್ಕ ಹೊಂದಿದ್ದೆವು. ಆದರೆ ಒಂದು ದಿನ ಹಸೀನಾ ನನ್ನೊಂದಿಗೆ ವಾಸಿಸಲು ನನ್ನ ಮನೆಗೆ ಬಂದಳು. ಇದನ್ನು ತಿಳಿದ ಸುಂದರಿ ಕೂಡ ನನ್ನ ಬಳಿ ಬಂದಳು. ಅಂದಿನಿಂದ ನಾವು ಒಂದೇ ಮನೆಯಲ್ಲಿ ಕುಟುಂಬದಂತೆ ವಾಸಿಸಲು ಆರಂಭಿಸಿದ್ದೇವೆ.

ಇಬ್ಬರು ಮಹಿಳೆಯೊಂದಿಗೆ ಸಂಬಂಧ ಹೊಂದಿ ಒಂದೇ ಮನೆಯಲ್ಲಿ ವಾಸಿಸುವುದರ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಲು ಆರಂಭಿಸಿದರು. ಹಾಗಾಗಿ ಇಬ್ಬರನ್ನು ಮದುವೆಯಾಗಲು ನಿರ್ಧರಿಸಿದೆ. ಇಬ್ಬರೂ ಮಹಿಳೆಯರೂ ನನ್ನನ್ನು ಪ್ರೀತಿಸುತ್ತಾರೆ. ಇಬ್ಬರಿಗೂ ನಾನು ದ್ರೋಹ ಮಾಡಲು ಆಗುವುದಿಲ್ಲ. ಅವರಿಬ್ಬರನ್ನು ಮದುವೆಯಾಗಿ ಶಾಶ್ವತವಾಗಿ ಇಬ್ಬರೊಟ್ಟಿಗೆ ವಾಸಿಸಲು ಒಪ್ಪಿರುವುದಾಗಿ ತಿಳಿಸಿದರು. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹಸೀನಾ ಅವರ ಕುಟುಂಬ ಸದಸ್ಯರು ಬಂದಾಗ, ಸುಂದರಿ ಕುಟುಂಬದ ಸದಸ್ಯರು ಸಮಾರಂಭದಿಂದ ಹಿಂದಿರುಗಿದರು. ಒಟ್ಟಾರೆಯಾಗಿ ನಾವು ಮೂವರು ಕೂಡ ರೈತರಾಗಿ ಕೆಲಸ ಮಾಡುವುದರ ಮೂಲಕ ಜೀವನವನ್ನು ಸಂತೋಷದಿಂದ ನಡೆಸುತ್ತೇವೆ ಎಂದು ಚಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *