ಇನ್ಮುಂದೆ ಚಾರ್ಮಾಡಿಯಲ್ಲಿ ವಾಹನ ನಿಲ್ಲಿಸಿದ್ರೆ ಬೀಳುತ್ತೆ ಕೇಸ್!

Public TV
1 Min Read

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಚಾರ್ಮಾಡಿ ಘಾಟಿಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ಕೇಸ್ ಬೀಳೋದು ಗ್ಯಾರಂಟಿಯಾಗಿದೆ.

ಈ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಣಕಲ್ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ನಾಮಫಲಕ ಕೂಡ ಹಾಕಿದೆ. ಮಳೆಯ ನಡುವೆ ವಾಹನ ನಿಲ್ಲಿಸಿ ಅಪಾಯ ಸ್ಥಳಗಳಲ್ಲಿ ಜನ ಓಡಾಟ ಮಾಡುವುದು ಹೆಚ್ಚಾಗಿದೆ.

ಈ ಹಿಂದೆ ನಿಷೇಧದ ಮಧ್ಯೆಯೂ ಪ್ರವಾಸಿಗರು ಸೆಲ್ಫಿ ಕ್ರೇಜ್ ಮುಂದುವರಿಸಿದ್ದರು. ಕಳೆದೆರಡು ವರ್ಷಗಳಲ್ಲಿ ಚಾರ್ಮಾಡಿ ಮಾರ್ಗದಲ್ಲಿ ಸೆಲ್ಫಿ ಕ್ರೇಜಿಗೆ ಸಾವು-ನೋವು ಕೂಡ ಸಂಭವಿಸಿವೆ. ಕಳೆದ ವರ್ಷ ಕೂಡ ಪ್ರವಾಸಿಗನೋರ್ವ ಬಂಡೆ ಮೇಲಿಂದ ಜಾರಿ ಬಿದ್ದು ಕೈ ಮುರಿದುಕೊಂಡಿದ್ದ. ಈಗ ಈ ಮಾರ್ಗವಾಗಿ ಸಂಚರಿಸೋ ಪ್ರವಾಸಿಗರು ಮತ್ತದೇ ತಪ್ಪುಗಳನ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *