ಇದು ಮೋದಿ ಸರ್ಕಾರದ ಅಂತ್ಯದ ಆರಂಭವಷ್ಟೇ – ದಿನೇಶ್‌ ಗುಂಡೂರಾವ್‌ ಕಿಡಿ

Public TV
1 Min Read

ಬೆಂಗಳೂರು: ಸದ್ಯ ಕೇಂದ್ರ ಸರ್ಕಾರವೂ ಇದೇ ಹೇಡಿ ಮಾರ್ಗ ಅನುಸರಿಸಿ ಪ್ರತಿಭಟನೆಯ ದನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಈ ಸರ್ಕಾರದ ಅಂತ್ಯದ ಆರಂಭವಷ್ಟೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಒಂದು ಪ್ರತಿಭಟನೆ ಹಾಗೂ ಟೀಕೆಯನ್ನು ಸೈದ್ಧಾಂತಿಕವಾಗಿ ಹಾಗೂ ನೈತಿಕವಾಗಿ ಎದುರಿಸಲಾಗದ ಸರ್ಕಾರವೊಂದು ಅನುಸರಿಸುವ ಹೇಡಿಯ ಮಾರ್ಗವೇ ದೇಶದ್ರೋಹದ ಕೇಸ್ ಎಂದು ಸರಣಿ ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಗುಂಡೂರಾವ್‌ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
ದೇಶದ್ರೋಹದ ವ್ಯಾಖ್ಯಾನ ನೀಡುವ ಐಪಿಸಿ 24 ಮೋದಿ-ಶಾ ಜೋಡಿಗಳ ಮಾರಕಾಸ್ತ್ರವಾಗಿದೆ. ತಮ್ಮ ವಿರುದ್ಧ ರಚನಾತ್ಮಕವಾಗಿ ಪ್ರತಿಭಟಿಸಿದವರನ್ನೂ ಈ ಜೋಡಿ ಸೆಕ್ಷನ್124 ಅಸ್ತ್ರ ಪ್ರಯೋಗಿಸಿ ದಮನ ಮಾಡುವ ಕಾರ್ಯ ಮಾಡುತ್ತಿದೆ. ವಿಶ್ವದ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದೇ ದೇಶದ್ರೋಹವೆಂಬುದು ಪ್ರಜಾಪ್ರಭುತ್ವದ ಅಣಕ

ಸರ್ಕಾರದ ವಿರುದ್ಧ ಪ್ರತಿಭಟಿಸಿದವರ ಮೇಲೆಲ್ಲಾ ದೇಶದ್ರೋಹಿ ಕೇಸ್ ಹಾಕುವುದಾದರೆ, ಕೇಂದ್ರ ಸರ್ಕಾರ ತಮ್ಮದೇ ಪಕ್ಷದ ಸುಬ್ರಹ್ಮಣ್ಯ ಸ್ವಾಮಿ ವಿರುದ್ಧವೂ ದೇಶದ್ರೋಹದ ಕೇಸ್ ದಾಖಲಿಸಲಿದೆಯೇ? ಯಾಕೆಂದರೆ ಇತ್ತೀಚೆಗೆ ಕೇಂದ್ರದ ಜನ ವಿರೋಧಿ ನೀತಿಯನ್ನು ಸುಬ್ರಮಣ್ಯ ಸ್ವಾಮಿಯವರು ಪದೇ ಪದೇ ಟೀಕಿಸಿ ಪ್ರತಿಭಟಿಸಿದ್ದಾರೆ. ಅವರಿಗೆ ಯಾವ ಪಟ್ಟ?

ಟೂಲ್‌ಕಿಟ್ ಬಗ್ಗೆ ಇಂದು ಆಕಾಶ ಸೂರು ಒಂದು ಮಾಡುತ್ತಿರುವ ಬಿಜೆಪಿ ನಾಯಕರು ‘ಲೋಕಪಾಲ’ ಮಸೂದೆ ಪ್ರತಿಭಟನೆಯಲ್ಲಿ ಬಳಸಿಕೊಂಡಿದ್ದೇನು? ಅಂದು ಟೂಲ್‌ಕಿಟ್ ಬಳಸಿ ಚಳವಳಿಯ ರೂಪುರೇಷೆ ಮಾಡಿದ್ದು ದೇಶದ್ರೋಹವಾಗಿರಲಿಲ್ಲವೆ. ಬಿಜೆಪಿಯವರ ಪ್ರಕಾರ, ತಾವು ತಿಂದರೆ‌ ಮಾತ್ರ ಅದು ಮೃಷ್ಟಾನ, ಬೇರೆಯವರು ತಿಂದರೆ ಅದು ತಂಗಳನ್ನವೇ.?

ಒಂದು ಪ್ರತಿಭಟನೆ ಹಾಗೂ ಟೀಕೆಯನ್ನು ಸೈದಾಂತಿಕವಾಗಿ ಹಾಗೂ ನೈತಿಕವಾಗಿ ಎದುರಿಸಲಾಗದ ಸರ್ಕಾರವೊಂದು ಅನುಸರಿಸುವ ಹೇಡಿಯ ಮಾರ್ಗವೇ ದೇಶದ್ರೋಹದ ಕೇಸ್. ಸದ್ಯ ಕೇಂದ್ರ ಸರ್ಕಾರವೂ ಇದೇ ಹೇಡಿ ಮಾರ್ಗ ಅನುಸರಿಸಿ ಪ್ರತಿಭಟನೆಯ ದನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಈ ಸರ್ಕಾರದ ಅಂತ್ಯದ ಆರಂಭವಷ್ಟೇ.

Share This Article
Leave a Comment

Leave a Reply

Your email address will not be published. Required fields are marked *