ಬೆಂಗಳೂರು: ಇಂದು 8,191 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 10,421 ಮಂದಿ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 87 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 7,26,106ಕ್ಕೆ ಏರಿಕೆಯಾಗಿದೆ. ಈ ಪೈಕಿ 1,13,459 ಸಕ್ರಿಯ ಪ್ರಕರಣಗಳಾಗಿದ್ದರೆ ಆಸ್ಪತ್ರೆಯಿದ ಒಟ್ಟು 6,02,505 ಮಂದಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಒಟ್ಟು 10,123 ಮಂದಿ ಮೃತಪಟ್ಟಿದ್ದು, 919 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 43,023 ಮಂದಿಗೆ ಆಂಟಿಜನ್ ಟೆಸ್ಟ್, 63,218 ಮಂದಿ ಆರ್‌ಟಿ ಪಿಸಿಆರ್ ಟೆಸ್ಟ್ ಮಾಡಲಾಗಿದ್ದು, ಒಟ್ಟು 1,06,241 ಮಂದಿಗೆ ಟೆಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 61,37,221 ಪರೀಕ್ಷೆ ಮಾಡಲಾಗಿದೆ.
ಬೆಂಗಳೂರಿನಲ್ಲಿ 3,776, ತುಮಕೂರು 391, ಬೆಳಗಾವಿ 358, ದಕ್ಷಿಣ ಕನ್ನಡ 314, ಚಿತ್ರದುರ್ಗ 242 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರ 346, ಧಾರವಾಡ 93, ಬಳ್ಳಾರಿ 76, ಹಾಸನ 49, ಕಲಬುರಗಿ 41, ಬಾಗಲಕೋಟೆಯಲ್ಲಿ 28 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.