ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಲೋಚನೆ ಅವಾಸ್ತವಿಕ: ರಾಹುಲ್ ದ್ರಾವಿಡ್

Public TV
2 Min Read

– 2ನೇ ದಿನದಾಟದಲ್ಲಿ ಆಟಗಾರನಿಗೆ ಕೊರೊನಾ ಪಾಸಿಟಿವ್ ಬಂದರೆ?

ಬೆಂಗಳೂರು: ಬಯೋ ಸೆಕ್ಯೂಲರ್ ಪರಿಸರಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಡೆಸಿರುವ ಚಿಂತನೆ ಉತ್ತಮವಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯದ ಬ್ಯುಸಿ ವೇಳಾಪಟ್ಟಿಯಲ್ಲಿ ಇಂತಹ ಸಿದ್ಧತೆಗಳನ್ನು ಕೈಗೊಳ್ಳಲು ಎಲ್ಲಾ ಕ್ರಿಕೆಟ್ ಮಂಡಳಿಗಳಿಂದ ಸಾಧ್ಯವಿಲ್ಲ. ಮುಖ್ಯವಾಗಿ ಯಾವುದೇ ಕ್ರಿಕೆಟ್ ಟೂರ್ನಿಗಳಲ್ಲಿ ಹಲವು ಮಂದಿಯೊಂದಿಗೆ ವ್ಯವಹಾರ ನಡೆಸಬೇಕಾದ ಕಾರಣ ಬಯೋ ಸೆಕ್ಯೂರ್ ಪರಿಸರಲ್ಲಿ ಟೂರ್ನಿ ಆಯೋಜಿಸಲು ಕಷ್ಟಸಾಧ್ಯ ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

ಟೂರ್ನಿಯ ಸಂದರ್ಭದಲ್ಲಿ ಪ್ರತಿ ದಿನ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಆರೋಗ್ಯ ಪರೀಕ್ಷೆ ನಡೆಸಬೇಕಾಗುತ್ತದೆ. ಆದರೆ ಪಂದ್ಯದ 2ನೇ ದಿನದಾಟದ ಸಂದರ್ಭದಲ್ಲಿ ಒಬ್ಬ ಆಟಗಾರನಿಗೆ ಕೊರೊನಾ ಪಾಸಿಟಿವ್ ವರದಿ ಬಂದರೇ ಉಳಿದ ಟೂರ್ನಿಯನ್ನು ರದ್ದು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆ ಎಲ್ಲರನ್ನು ಕ್ವಾರಂಟೈನ್ ಮಾಡಲು ಸೂಚಿಸುತ್ತಿದೆ. ಅಲ್ಲದೇ ಖಾಲಿ ಮೈದಾನದಲ್ಲಿ ಪಂದ್ಯವನ್ನು ನಿರ್ವಹಿಸುವುದರಿಂದ ಪ್ರೇಕ್ಷಕರಿಲ್ಲದ ಕೊರತೆಯನ್ನು ಆಟಗಾರರು ಎದುರಿಸುತ್ತಾರೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಬೋರ್ಡಿಗೆ ಬಯೋ ಸೆಕ್ಯೂರ್ ಪರಿಸರಲ್ಲಿ ಟೂರ್ನಿ ಆಯೋಜಿಸುವ ಸಾಮರ್ಥ್ಯವಿದೆ. ಅವರಿಗೆ ಈ ಟೂರ್ನಿ ಬಿಟ್ಟು ಬೇರೆ ಆಯ್ಕೆಗಳಿಲ್ಲ. ಆದರೂ ಆಟಗಾರರ ಪ್ರಯಾಣ, ಪ್ರವಾಸ ಸಂದರ್ಭದಲ್ಲಿ ಎದುರಾಗುವ ಎಲ್ಲರನ್ನು ಗಣನೆಗೆ ತೆಗೆದುಕೊಳ್ಳಲು ಹಾಗೂ ಇಂತಹ ವ್ಯವಸ್ಥೆಯನ್ನು ಎಲ್ಲಡೆ ಕಲ್ಪಿಸಲು ಸಾಧ್ಯವಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. ಅಂದಹಾಗೇ ಇತ್ತೀಚೆಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ವಿರುದ್ಧದ ಟೂರ್ನಿಗಳನ್ನು ಬಯೋ ಸೆಕ್ಯೂರ್ ಪರಿಸರದಲ್ಲಿ ನಡೆಸುವುದಾಗಿ ಘೋಷಿಸಿತ್ತು.

ಇದೇ ವೇಳೆ ಆಟಗಾರರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಆಟದ ಬಗ್ಗೆ ಗಮನಿಸುವ ಅಗತ್ಯವಿದೆ ಎಂದು ದ್ರಾವಿಡ್ ಸಲಹೆ ನೀಡಿದ್ದಾರೆ. ಲಾಕ್‍ಡೌನ್ ಕಾರಣದಿಂದ ಕಳೆದ 2 ತಿಂಗಳಿನಿಂದ ಕ್ರೀಡಾ ಜಗತ್ತು ಸ್ತಬ್ಧವಾಗಿದೆ. ಹಲವು ದೇಶಗಳಲ್ಲಿ ಲಾಕ್‍ಡೌನ್ ನಿಯಮಗಳನ್ನು ಸಡಿಲಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು ಹಲವು ಬೋರ್ಡ್‍ಗಳು ಪ್ರಯತ್ನಿಸುತ್ತಿವೆ. ಇತ್ತ ದಕ್ಷಿಣ ಆಫ್ರಿಕಾ ಕೂಡ ಭಾರತ ವಿರುದ್ಧದ ಟೂರ್ನಿಯನ್ನು ಬಯೋ ಸೆಕ್ಯೂರ್ ಪರಿಸರದಲ್ಲಿ ನಡೆಸಲು ಸಲಹೆ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *