ಆಹಾರ ಕಿಟ್ ಅವ್ಯವಹಾರ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ

Public TV
2 Min Read

– ಬೆಂಗಳೂರಿನಲ್ಲಿ ಕಾರ್ಮಿಕರ ಬಂಧನ ತೀವ್ರ ಖಂಡನೆ

ಬೆಂಗಳೂರು: ಇಂದು ರಾಜ್ಯ ವಿವಿಧ ಕಟ್ಟಡ ಕಾರ್ಮಿಕ ಸಂಘಗಳು ಆಹಾರ ಕಿಟ್ ಹಂಚಿಕೆಯಲ್ಲಿ ನಡೆದಿರುವ ಕೋಟ್ಯಾಂತರ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು ಮತ್ತು ಕಾರ್ಮಿಕರಿಗೆ ಕೋವಿಡ್ ಎರಡನೇ ಅಲೆ ಪರಿಹಾರ ಹತ್ತು ಸಾವಿರಕ್ಕೆ ಆಗ್ರಹಿಸಿ ಬೆಂಗಳೂರಿನ ಕಲ್ಯಾಣ ಮಂಡಳಿ ಮತ್ತು ರಾಜ್ಯದ ವಿವಿದ ಜಿಲ್ಲೆ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ಬೆಳೆಗ್ಗೆಯೇ 40 ಕ್ಕೂ ಅಧಿಕ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಕಾರ್ಮಿಕರು ಮಂಡಳಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದ ಬೆಂಗಳೂರು, ತುಮಕೂರು, ಕೋಲಾರ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮಂಡ್ಯ ಧಾರವಾಡ ಸೇರಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪ್ರತಿಭಟನೆಗಳು ನಡೆದವು.

ಬೆಂಗಳೂರಿನಲ್ಲಿ ಬೆಳಗ್ಗೆ ಕಲ್ಯಾಣ ಮಂಡಳಿ ಮುಂದೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ 40 ಕಾರ್ಮಿಕರನ್ನು ಬಂಧಿಸಿದ್ದು, ತೀವ್ರ ಖಂಡನಾರ್ಹ ಬಳಿಕ ಮತ್ತೆ ಕಾರ್ಮಿಕರ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಪೊಲೀಸರು ಬಂಧಿಸಲು ಮುಂದಾದರು.

ಇಂದು ಬೆಳೆಗ್ಗೆ 40 ಜನ ಕಾರ್ಮಿಕರನ್ನು ಬಂಧಿಸಿದ ಬಳಿಕಾವೂ ಸಮಾವೇಶಗೊಂಡ ನೂರಾರು ಕಾರ್ಮಿಕರು ಪೊಲೀಸರ ಕ್ರಮವನ್ನು ಖಂಡಿಸಿದರು. ಮತ್ತೆ ಸಮಾವೇಶಗೊಂಡ ಕಾರ್ಮಿಕ ನಾಯಕರು ಮತ್ತು ಕಾರ್ಮಿಕರನ್ನು ಬಂಧಿಸಲು ಮುಂದಾದಾಗ ಅದನ್ನು ಪ್ರತಿಭಟಿಸಿ ಕಾರ್ಮಿಕರು ಸಮನ್ವಯ ಸಮಿತಿ ನಾಯಕರ ನೇತೃತ್ವದಲ್ಲಿ ಮಂಡಳಿ ಮುಂದೆ ಪ್ರತಿಭಟನೆ ಯಶಸ್ವಿಯಾಗಿ ಪ್ರತಿಭಟನೆ ನಡೆಸಿದರು. ನಮ್ಮ ಪತ್ರಿಭಟನೆಗೆ ಮಣಿದು ಪೊಲೀಸರು ಅವಕಾಶ ನೀಡಲೇಬೇಕಾಯಿತು. ಮತ್ತು ಮಂಡಳಿ ಸಿಇಓ ಆಗಮಿಸಿ ಮನವಿ ಸ್ವೀಕರಿಸಬೇಕಾಯಿತು. ಬಳಿಕ ಒಂದೂವರೆ ಗಂಟೆ ಸಮನ್ವಯ ಸಮಿತಿ ಮುಖಂಡರ ಜೊತೆ ಮಾತುಕತೆ ನಡೆಸಿದರು.

ಬಾಕಿ ಇರುವ ಕೋವಿಡ್ ಪರಿಹಾರ, ಆಹಾರ ಕಿಟ್ ಹಂಚಿಕೆಯನ್ನು ಶಾಸಕರಿಗೆ ವಹಿಸಿರುವುದು, ವೈದ್ಯಕೀಯ ಪರಿಹಾರ, ಮನೆಗೆ ಧನಸಹಾಯ ಪಿಂಚಣಿ ಸೇರಿ ಇತ್ಯಾದಿ ಅಂಶಗಳ ಕುರಿತು ತ್ವರಿತಗತಿಯಲ್ಲಿ ಕ್ರಮವಹಿಸಲು ಸಮನ್ವಯ ಸಮಿತಿ ಮುಖಂಡರು ಆಗ್ರಹಿಸಿದರು. ರಾಜ್ಯಾದ್ಯಂತ ಜುಲೈ 12 ರ ಹೋರಾಟವನ್ನು ಯಶಸ್ವಿ ಗೊಳಿಸಿದ ಕಾರ್ಮಿಕರಿಗೆ ಸಮನ್ವಯ ಸಮಿತಿ ಅಭಿನಂದನೆ ಸಲ್ಲಿಸಿದೆ. ಇದನ್ನೂ ಓದಿ: ಹೋರಿಯ ಹುಟ್ಟು ಹಬ್ಬ ಆಚರಿಸಿದ ಶಾಸಕ ರೇಣುಕಾಚಾರ್ಯ

ಬೆಂಗಳೂರಿನಲ್ಲಿ ಹೋರಾಟದ ನೇತೃತ್ವವನ್ನು ಸಮನ್ವಯ ಸಮಿತಿಯ ಮುಖಂಡರಾದ ಕೆ.ಮಹಾಂತೇಶ, ಶಾಮಣ್ಣ ರೆಡ್ಡಿ ಎನ್.ಪಿ ಸ್ವಾಮಿ ,ನಾಗನಾಥ್, ಅಪ್ಪಣ್ಣ, ಲಿಂಗರಾಜ್, ಲಕ್ಷ್ಮೀ, ಲಕ್ಮಣ್ ಕುಮಾರ್, ವಿನಯ್ ಶ್ರೀನಿವಾಸ್, ಲೀಲಾವತಿ ಧನಶೇಖರ್, ಹನುಮೇಶ್,ಶ್ರೀಕಾಂತ, ಹರೀಶಕುಮಾರ್ ಹನುಮಂತರಾವ್ ಹವಾಲ್ದಾರ್ ಸೇರಿ ಹಲವರು ವಹಿಸಿದ್ದರು. ಮತ್ತು ಮಂಡಳಿ ಸಿ.ಇ.ಓ ಜೊತೆ ನಡೆದ ಮಾತುಕತೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಮಗಳ ಸಾವಿನ ಸುದ್ದಿ ಕೇಳಿ ತಂದೆ ಹೃದಯಾಘಾತದಿಂದ ಸಾವು

Share This Article
Leave a Comment

Leave a Reply

Your email address will not be published. Required fields are marked *