ಆಸೀಸ್ ಮಾಜಿ ಕ್ರಿಕೆಟರ್ ಡೀನ್ ಜೋನ್ಸ್ ನಿಧನ

Public TV
1 Min Read

-ಮುಂಬೈನಲ್ಲಿ ಹೃದಯಾಘಾತ

ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಲೆಜೆಂಡ್ ಡೀನ್ ಜೋನ್ಸ್ ಅವರು ಹೃದಯಾಘಾತವಾಗಿ ಇಂದು ನಿಧನರಾಗಿದ್ದಾರೆ.

59 ವರ್ಷದ ಡೀನ್ ಜೋನ್ಸ್ ಅವರು ಐಪಿಎಲ್‍ನಲ್ಲಿ ಕಮೆಂಟರಿ ಮಾಡಲು ಮುಂಬೈಗೆ ಬಂದಿದ್ದರು. ಮುಂಬೈನ ಸೆವೆನ್ ಸ್ಟಾರ್ ಹೋಟೆಲ್‍ನಲ್ಲಿ ಬಯೋ ಸೆಕ್ಯೂರ್ ಬಬಲ್ ವಲಯದಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದರು. ಆದರೆ ಇಂದು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಡೀನ್ ಜೋನ್ಸ್ ಸಕ್ರಿಯ ಕ್ರಿಕೆಟ್ ವಿಶ್ಲೇಷಕರಾಗಿದ್ದು, ಇದರ ಜೊತೆಗೆ ಯುಎಇಯಲ್ಲಿ ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2020 ಕುರಿತು ಆಫ್-ಟ್ಯೂಬ್ ಕಮೆಂಟರ್ ಆಗಿ ಕೆಲಸ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಸ್ಟಾರ್ ಸ್ಪೋಟ್ಸ್ ವಾಹಿನಿ ಜೊತೆ ಟೈಆಫ್ ಮಾಡಿಕೊಂಡಿದ್ದರು. ಇಂಡಿಯಾದ ಕ್ರಿಕೆಟ್ ವಾಹಿನಿಗಳಲ್ಲಿ ಡೀನ್ ಜೋನ್ಸ್ ಬಹಳ ಹೆಸರು ಮಾಡಿದ್ದರು. ಜೊತೆಗೆ ಖಾಸಗಿ ವಾಹಿನಿಯಲ್ಲಿ ಬರುತ್ತಿದ್ದ ಅವರ ಪ್ರೊಫೆಸರ್ ಡಿಯಾನೋ ಕಾರ್ಯಕ್ರಮ ಬಹಳ ಜನಪ್ರಿಯಾವಾಗಿತ್ತು.

ಆಸ್ಟ್ರೇಲಿಯಾದ ಮೆಲ್ಬೋರ್ನ್‍ನಲ್ಲಿ ಜನಿಸಿದ ಡೀನ್ ಜೋನ್ಸ್ ಆಸೀಸ್ ಪರ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.55 ಸರಾಸರಿಯಲ್ಲಿ 3,631 ರನ್ ಗಳಿಸಿದ್ದರು. ಟೆಸ್ಟ್ ನಲ್ಲಿ 216 ರನ್ ಭಾರಿಸಿದ್ದು, ಇವರ ವೈಯಕ್ತಿಕ ಸ್ಕೋರ್ ಆಗಿತ್ತು. ಅಲನ್ ಬಾರ್ಡರ್ ತಂಡದ ಪ್ರಮುಖ ಸದಸ್ಯರಾಗಿದ್ದ ಜೋನ್ಸ್, 11 ಟೆಸ್ಟ್ ಶತಕ ಸಿಡಿಸಿದ್ದರು. ಜೊತೆಗೆ 164 ಏಕದಿನ ಪಂದ್ಯಗಳನ್ನು ಆಡಿರುವ ಅವರು, ಏಳು ಶತಕ ಮತ್ತು 46 ಅರ್ಧಶತಕಗಳ ಸಹಾಯದಿಂದ 6,068 ರನ್ ಗಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *