ಕೊಪ್ಪಳ: ಆತ್ಮವಿಶ್ವಾಸ, ಧೈರ್ಯವಿದ್ದರೆ ಕೊರೊನಾ ಗೆಲ್ಲಬಹುದು ಎಂದು ಶ್ರೀ ಅಮೋಘ ಸಿದ್ದೇಶ್ವರ ಮಠದ ಶ್ರೀ ಮಾದಯ್ಯ ಸ್ವಾಮಿ ಹೇಳಿದ್ದಾರೆ.
ಮೇ 18 ರಂದು ಕೊರೊನಾ ಸೊಂಕಿಗೊಳಗಾಗಿ ಶ್ರೀ ಮಾದಯ್ಯ ಸ್ವಾಮಿಯ ಆರೋಗ್ಯ ಸ್ಥಿತಿ ಗಂಭಿರವಾಗಿತ್ತು. ಹೀಗಾಗಿ ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ಅವರನ್ನು ಚಿಕಿತ್ಸೆಗೆ ದಾಖಲಿಸಿದಾಗ ಅವರ ಆಕ್ಸಿಜನ್ ಪ್ರಮಾಣ 40 ರಷ್ಟಿತ್ತು. ಅಲ್ಲದೆ ಶ್ವಾಸಕೋಶದಲ್ಲಿ ಶೇಕಡಾ 25 ರಷ್ಟು ಕಫವಿತ್ತು. ಇದರಿಂದಾಗಿ ಅವರ ಆರೋಗ್ಯ ಪರಸ್ಥಿತಿ ತುಂಬಾ ಗಂಭೀರವಿತ್ತು.
ವೆಂಟಿಲೇಟರ್, ಆಕ್ಸಿಜನ್ ನಲ್ಲಿ ಚಿಕಿತ್ಸೆ ನೀಡಲಾಯಿತು. ಗವಿಮಠ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಯ ಜೊತೆಗೆ ಶ್ರೀಮಠದಿಂದ ಆತ್ಮಸ್ಥೈರ್ಯ ತುಂಬುವ ಚಟುವಟಿಕೆಗಳಿಂದ ಅವರು ಗುಣಮುಖರಾಗಿದ್ದಾರೆ. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಯಾದ ಬಳಿಕ ಆಶೀರ್ವಚನ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆಗಿಂತ ಭಯ ನಿವಾರಣೆ, ಆತ್ಮಸ್ಥೈರ್ಯ ಅವಶ್ಯ. ನಾನು ಇಲ್ಲಿ ದಾಖಲಾದ ಸಂದರ್ಭದಲ್ಲಿ ನಾನು ಬದುಕುತ್ತೇನೆ ಎಂಬ ಭರವಸೆ ಇರಲಿಲ್ಲ. ಆತ್ಮಸ್ಥೈರ್ಯವಿದ್ದರೆ ಕೊರೊನಾ ಗೆಲ್ಲಬಹುದು ಎಂದು ಉಳಿದ ಸೋಂಕಿತರಿಗೆ ಧೈರ್ಯ ಹೇಳಿದರು.