ಮುಂಬೈ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾವನ್ನು ನಿಯಂತ್ರಣಕ್ಕೆ ತರಲು ವೈದ್ಯರು ತಮ್ಮ ಜೀವನವನ್ನೇ ಒತ್ತೆ ಇಟ್ಟು ಜನರನ್ನು ಕಾಪಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಉಲ್ಬಣವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮುಂಬೈ ವೈದ್ಯೆಯೊಬ್ಬರು ಕಣ್ಣೀರು ಹಾಕಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿರುವ ಸಾಂಕ್ರಾಮಿಕ ರೋಗತಜ್ಞೆ ಡಾಕ್ಟರ್ ತೃಪ್ತಿ ಗಿಲಾಡಿ ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ. ದಯಮಾಡಿ ಮಾಸ್ಕ್ ಧರಿಸಿ. ನಾವು ಅಸಹಾಯಕರಾಗಿದ್ದೇವೆ. ಅಲ್ಲದೆ ನನ್ನಂತಹ ಅನೇಕ ವೈದ್ಯರು ಅಸಹಾಯಕರಾಗಿದ್ದಾರೆ. ಅರ್ಥ ಮಾಡಿಕೊಂಡು ಕೋವಿಡ್ ನಿಯಂತ್ರಣ ಮಾಡುವಲ್ಲಿ ಸಹಕರಿಸಿ. ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ನಾವು ಸೋಂಕಿನಿಂದ ಗಂಭೀರವಾಗಿ ಬಳಲುತ್ತಿರುವ ರೋಗಿಗಳಿಗೆ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಯಾಕೆಂದ್ರ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ. ನಾವು ಈ ವಿಚಾರವಾಗಿ ಸಂತೋಷವನ್ನು ಪಡುತ್ತಿಲ್ಲ ಎಂದಿದ್ದಾರೆ.
ಸೋಂಕಿನಿಂದ ಗುಣಮುಖರಾದವರು ನಾವು ಹೀರೋಗಳು ಎಂದು ಭಾವಿಸಬೇಡಿ ಎಚ್ಚರಿಕೆಯಿಂದ ಇರಿ. ಕೊರೊನ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಗಂಭೀರವಾಗಿ ಸೋಂಕಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನೀವು ಹೊರಗಡೆ ಹೋದರೆ ಮಾಸ್ಕ್ ಧರಿಸಿಕೊಂಡು ಹೋಗಿ. ಕೊರೊನಾ ಸೋಂಕು ತಗುಲಿರುವ ಎಲ್ಲರೂ ಆಸ್ಪತ್ರೆಗೆ ಬಂದು ದಾಖಲಾಗಬೇಡಿ. ಇಲ್ಲಿ ಬೆಡ್‍ಗಳ ಕೊರತೆ ಇದೆ. ಮೊದಲು ಮನೆಯಲ್ಲಿಯೇ ಕ್ವಾರಂಟೈನ್ ಆಗಿರಿ. ನಿಮ್ಮ ವೈದ್ಯರಿಂದ ಸಲಹೆಗಳನ್ನು ಪಡೆಯಿರಿ. ಆರೋಗ್ಯದಲ್ಲಿ ಕೊಂಚ ಬದಲಾವಣೆಯಾದರೂ ಆಸ್ಪತ್ರೆಗೆ ದಾಖಲಾಗಬೇಡಿ. ಸೋಂಕು ತಗುಲಿರುವ ಎಲ್ಲರೂ ಆಸ್ಪತ್ರೆಗೆ ದಾಖಲಾದರೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದಿಲ್ಲ.ಲಸಿಕೆಯಿಂದ ಗುಣಮುಖರಾಗುವುದಿಲ್ಲ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ವದಂತಿಗಳಿಕೆ ಕಿವಿಗೊಡಬೇಡಿ. ಯಾರೆಲ್ಲ ಲಸಿಕೆ ತೆಗೆದುಕೊಂಡಿಲ್ಲ ಅವರು ಮೊದಲು ಲಸಿಕೆ ತೆಗೆದುಕೊಳ್ಳಿ ಎಂದು ಡಾಕ್ಟರ್ ತೃಪ್ತಿ ಮನವಿ ಮಾಡುತ್ತಾ ಕಣ್ಣೀರು ಹಾಕಿದ್ದಾರೆ.