ಅಶ್ಲೀಲ ವಿಡಿಯೋ ನೋಡುವಂತೆ ಶಾಲಾ ವಿದ್ಯಾರ್ಥಿಗಳು ಒತ್ತಾಯ- ಬಾಲಕಿಯ ಮನೆಗೆ ಹೋಗಿ ಅತ್ಯಾಚಾರ

Public TV
2 Min Read

– ಅಪ್ರಾಪ್ತ ಹುಡುಗರಿಂದ 11ರ ಬಾಲಕಿಯ ಮೇಲೆ ರೇಪ್
– ಆಸ್ಪತ್ರೆಗೆ ಹೋದಾಗ ಆರೋಪಿಗಳ ಕೃತ್ಯ ಬಯಲು

ಚೆನ್ನೈ: 11 ವರ್ಷದ ಬಾಲಕಿಯ ಮೇಲೆ ಮೂವರು ಶಾಲಾ ವಿದ್ಯಾರ್ಥಿಗಳು ಅನೇಕ ಬಾರಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಮೂವರು ಆರೋಪಿಗಳು 7ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರ ಪೈಕಿ ಇಬ್ಬರನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಮೂರನೇ ಆರೋಪಿ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಡುತ್ತಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆ ಸುಂದರಪುರಂ ಪ್ರದೇಶದ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಕೆಲವು ವರ್ಷಗಳ ಹಿಂದೆ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದು, ಸದ್ಯಕ್ಕೆ ಆಕೆ ತಂದೆ ಮತ್ತು ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು. ಪೋಷಕರಿಬ್ಬರು ಕೆಲಸ ಮಾಡುತ್ತಿದ್ದಾರೆ. ಮನೆಯ ಮಾಲೀಕರು ಗ್ರೌಂಡ್‌ಫ್ಲೋರ್‌ನಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತೆ ಟಿವಿ ನೋಡಲು ಆಗಾಗ ಮಾಲೀಕರ ಮನೆಗೆ ಹೋಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಮಾಲೀಕರಿಗೆ 16 ವರ್ಷದ ಮಗ ಆನಂದ್ (ಹೆಸರು ಬದಲಾಯಿಸಲಾಗಿದೆ) ಈತ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಈತನ ಪೋಷಕರು ಸಹ ಕೆಲಸಕ್ಕೆ ಹೋಗುತ್ತಿದ್ದರಿಂದ ಆನಂದ್ ಹೆಚ್ಚಾಗಿ ಮನೆಯಲ್ಲಿ ಏಕಾಂಗಿಯಾಗಿರುತ್ತಿದ್ದನು. ಅಲ್ಲದೇ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಆತನಿಗೆ ಮೊಬೈಲ್ ಫೋನ್ ನೀಡಲಾಗಿತ್ತು. ಆತನ ಸ್ನೇಹಿತರಲ್ಲೊಬ್ಬರಾದ ಶರ್ಮಾನ್ (ಹೆಸರು ಬದಲಾಯಿಸಲಾಗಿದೆ) ಆನಂದ್ ಮನೆಗೆ ಆಗಾಗ ಭೇಟಿ ನೀಡುತ್ತಿದ್ದನು.

ಎಂದಿನಂತೆ ಮೇ 20ರಂದು ಸಂತ್ರಸ್ತೆ ಟಿವಿ ನೋಡಲು ಮಾಲೀಕರ ಮನೆಗೆ ಬಂದಿದ್ದಾಳೆ. ಆಗ ಇಬ್ಬರು ಹುಡುಗರು ಮೊಬೈಲ್ ಫೋನ್‍ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿರುವುದನ್ನು ಅವಳು ಗಮನಿಸಿದಳು. ತಕ್ಷಣ ಆಕೆ ಅಲ್ಲಿಂದ ಹೋಗಲು ಮುಂದಾಗಿದ್ದಾಳೆ. ಆದರೆ ಆ ಹುಡುಗರ ಆಕೆಯನ್ನು ಬಲವಂತವಾಗಿ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯಿಸಿದ್ದಾರೆ. ನಂತರ ಆಕೆ ಅಲ್ಲಿಂದ ತನ್ನ ಮನೆಗೆ ಹೋಗಿದ್ದಾಳೆ. ಆದರೂ ಆರೋಪಿಗಳು ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ಆಕೆಯ ಮನೆಯಲ್ಲಿ ಹೋಗಿದ್ದಾರೆ.

ಆಕೆಯ ಮನೆಯಲ್ಲಿಯೇ ಆರೋಪಿಗಳು ಅನೇಕ ಬಾರಿ ಅತ್ಯಾಚಾರ ಎಸಗಿದ್ದು, ಮತ್ತೊಬ್ಬ ಸ್ನೇಹಿತ ಲೋಕೇಶ್ (ಹೆಸರು ಬದಲಾಯಿಸಲಾಗಿದೆ)ನನ್ನು ಕರೆದಿದ್ದಾರೆ. ನಂತರ ಸಂತ್ರಸ್ತೆಗೆ ಮತ್ತೆ ಮೂವರು ಆರೋಪಿಗಳು ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯಿಸಿದ್ದಾರೆ. ಇದೇ ರೀತಿ ಮೂವರು ಆರೋಪಿಗಳು ಆಕೆಯ ಮನೆಗೆ ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಂತ್ರಸ್ತೆ ಹೊಟ್ಟೆ ನೋವಿನ ಬಳಲುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವೈದ್ಯರು ಸಂತ್ರಸ್ತೆ ಬಳಿ ಕೇಳಿದ್ದಾರೆ. ಆಗ ಸಂತ್ರಸ್ತೆ ಮಾಲೀಕನ ಮಗ ಮತ್ತು ಆತನ ಇಬ್ಬರು ಸ್ನೇಹಿತರು ನೀಡಿದ ಕಿರುಕುಳವನ್ನು ತಿಳಿಸಿದ್ದಾಳೆ. ತಕ್ಷಣ ವೈದ್ಯರು ಮಹಿಳಾ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆನಂದ್ ಮತ್ತು ಶರ್ಮಾನ್ ಇಬ್ಬರನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಆರೋಪಿ ಲೋಕೇಶ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *