– ನನ್ನಿಂದ ಅಪ್ಪ, ಅಮ್ಮನ ಗೌರವಕ್ಕೆ ಧಕ್ಕೆ ಆಯ್ತು
ನವದೆಹಲಿ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನವದೆಹಲಿಯ ಭಜನಾಪುರದಲ್ಲಿ ನಡೆದಿದೆ. ಯುವತಿ ಪತ್ರದಲ್ಲಿ ತನ್ನ ಸಾವಿಗೆ ಕಾರಣನಾದ ಯುವಕನ ಹೆಸರು ಬರೆದಿದ್ದಾಳೆ.
23 ವರ್ಷದ ನಾಜಿಶಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಐಪಿ ಯುನಿವರ್ಸಿಟಿಯಲ್ಲಿ ಬಿ.ಎಡ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅಕ್ಟೋಬರ್ 12ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಪೋಷಕರು ಮಗಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಾಜಿಶಾ ಸಾವನ್ನಪ್ಪಿದ್ದಾಳೆ. ಆರಂಭದಲ್ಲಿ ನಾಜಿಶಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದರಿಲ್ಲ. ಪೊಲೀಸರು ನಾಜಿಶಾಳ ಕೋಣೆ ಪರಿಶೀಲಿಸಿದಾಗ ಡೆತ್ ನೋಟ್ ಸಿಕ್ಕಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ತನ್ನ ಆತ್ಮಹತ್ಯೆಗೆ ಲೋನಿ ನಿವಾಸಿ ಹಾಜಿ ಸಲ್ಮಾನ್ ಕಾರಣ ಎಂದು ನಾಜಿಶಾ ಪತ್ರದಲ್ಲಿ ಬರೆದಿದ್ದಾಳೆ. ಬಿ.ಎಸ್ ವ್ಯಾಸಂಗ ಮಾಡುತ್ತಿದ್ದ ನಾಜಿಶಾಳನ್ನ ಸಲ್ಮಾನ್ ಹಿಂಬಾಲಿಸುತ್ತಿದ್ದನು. ಸಲ್ಮಾನ್ ವರ್ತನೆಯಿಂದ ಮಾನಸಿಕವಾಗಿ ನಾಜಿಶಾ ನೊಂದಿದ್ದಳು. ಆಗಸ್ಟ್ 9ರಂದು ವಿದ್ಯಾರ್ಥಿನಿ ಮನೆಗೆ ಬಂದಿದ್ದ ಸಲ್ಮಾನ್ ಆಕೆಯ ಪೋಷಕರಿಗೆ ಬೆದರಿಕೆ ಹಾಕಿದ್ದನು. ಈ ವೇಳೆ ಪೋಷಕರು ಮತ್ತು ಸ್ಥಳೀಯರು ಸಲ್ಮಾನ್ ನನ್ನು ಹಿಡಿದು ಥಳಿಸಿ ಕಳುಹಿಸಿದ್ದರು.
ಈಕೆಯೇ ನನ್ನ ಮಗಳು, ಆದ್ರೆ ನನ್ನ ಪಾಲಿಗೆ ಸತ್ತಿದ್ದಾಳೆ – ಪುತ್ರಿಯನ್ನ ನೋಡಿ ಕಣ್ಣೀರಿಟ್ಟ ತಂದೆ
– ಜೀವಂತವಾಗಿ ಬಂದ ಸುಂದರಿ ಹೇಳಿದ್ದು ಮೈ ನಡುಗಿಸೋ ಕೊಲೆ ಕಥೆ
-ಸ್ವಾರ್ಥಕ್ಕಾಗಿ 3 ವರ್ಷದ ಮಗುವಿನ ತಾಯಿಯ ಪ್ರಾಣ ತೆಗೆದ ಚೆಲುವೆಯ ಭಯಾನಕ ಕಹಾನಿhttps://t.co/kVP5VFf0YX#Love #Marriage #Father #ShikhaDubeyCase #KannadaNews— PublicTV (@publictvnews) October 18, 2020
ಈ ಮೊದಲೇ ಮಾನಸಿಕವಾಗಿ ಕುಗ್ಗಿದ ನಾಜಿಶಾಳ ಮೇಲೆ ಸಲ್ಮಾನ್ ಮನೆಗೆ ಬಂದು ಹೋದ ಘಟನೆ ಮತ್ತಷ್ಟು ಅಘಾತವನ್ನುಂಟು ಮಾಡಿತ್ತು. ಅಂದಿನಿಂದ ನಾಜಿಶಾ ಒಂಟಿಯಾಗಿ ಇರಲಾರಂಭಿಸಿದಳು. ಹೊರಗೆ ಹೋದ್ರೆ ಸಲ್ಮಾನ್ ಎದುರಾಗಬಹುದು ಎಂಬ ಭಯದಿಂದ ಮನೆಯಿಂದ ಸಹ ನಾಜಿಶಾ ಹೊರ ಬಂದಿರಲಿಲ್ಲ. ಇತ್ತ ಸಲ್ಮಾನ್ ಘಟನೆಯಿಂದಾಗಿ ಸ್ಥಳೀಯವಾಗಿ ತನ್ನಿಂದಾಗಿ ತಂದೆ-ತಾಯಿಯ ಗೌರವಕ್ಕೂ ಧಕ್ಕೆ ಆಯ್ತು ಎಂದು ನಾಜಿಶಾ ಚಿಂತಿಸತೊಡಗಿದಳು.
ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ?- 5 ವರ್ಷಗಳ ಬಳಿಕ ಮಗಳನ್ನು ಹುಡುಕಿ ಬಂದ ಅಪ್ಪ-ಅಮ್ಮ
– ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಯುವತಿ
– ಜೆರಾಕ್ಸ್ ಪ್ರತಿಯಿಂದ ಸಾವಿನ ಸತ್ಯ ಬೆಳಕಿಗೆhttps://t.co/BlxUrTS0mN#Mandya #Love #Marriage #Police #Parents #KannadaNews— PublicTV (@publictvnews) October 20, 2020
ಇಂತಹ ಸಾಲು ಸಾಲು ಯೋಚನೆಯಿಂದ ಸಂಪೂರ್ಣವಾಗಿ ಕುಗ್ಗಿದ ಆತ್ಮಹತ್ಯೆಯ ನಿರ್ಧಾರ ಮಾಡಿ ಡೆತ್ ನೋಟ್ ಬರೆದಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಜಿಶಾಳ ಮರಣೋತ್ತರ ಶವ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿದ್ದಾರೆ. ಘಟನೆ ಸಂಬಂಧ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ನಾಜಿಶಾ ಮತ್ತು ಸಲ್ಮಾನ್ ಫೇಸ್‍ಬುಕ್ ನಲ್ಲಿ ಗೆಳೆಯರಾಗಿದ್ದರು ಎಂದು ತಿಳಿದು ಬಂದಿದೆ.
ಮರ್ಯಾದಾ ಹತ್ಯೆ- ಪ್ರೀತಿಸಿ ಮದ್ವೆಯಾಗಿದಕ್ಕೆ ತಮ್ಮನಿಂದ ಅಕ್ಕನ ಕೊಲೆ
– ಆರು ತಿಂಗಳ ಹಿಂದೆ ಮದ್ವೆಯಾಗಿದ್ದ ಬ್ಯಾಂಕ್ ಉದ್ಯೋಗಿಗಳು
– ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದು ತಪ್ಪಾಯ್ತು https://t.co/VjdnsIBqu3#Koppal #Karatagi #Couple #Love #Marriage #Police #Sister #Brother #KannadaNews— PublicTV (@publictvnews) October 18, 2020