ಅಮ್ಮನ ಸೀರೆಯುಟ್ಟು ಸಪ್ತಪದಿ ತುಳಿದ `ಉಲ್ಲಾಸ ಉತ್ಸಾಹ’ ನಟಿ

Public TV
2 Min Read

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ಉಲ್ಲಾಸ ಉತ್ಸಾಹ’ ಚಿತ್ರದ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ನಟಿ ಯಾಮಿ ಗೌತಮ್ . ಇದಾದ ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂ, ಪಂಜಾಬಿ ಹೀಗೆ ಬಹು ಭಾಷೆಗಳಲ್ಲಿ ಯಾಮಿ ನಟಿಸಿದ್ದಾರೆ. ಇತ್ತೀಚೆಗಷ್ಟೇ `ಉರಿ’ ಸಿನಿಮಾ ನಿರ್ದೇಶಕ ಆದಿತ್ಯ ಧರ್ ಜೊತೆ ಹಿಮಾಚಲ ಪ್ರದೇಶದಲ್ಲಿ ಸರಳವಾಗಿ ವಿವಾಹವಾಗಿರುವ ಯಾಮಿ, ತಮ್ಮ ಮದುವೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Yami Gautam (@yamigautam)

ಮದುವೆ ಬಗ್ಗೆ ಎಲ್ಲಾ ಹೆಣ್ಣುಮಕ್ಕಳಿಗೂ ಅಪಾರ ಕನಸಿರುತ್ತದೆ. ಮದುವೆ ದಿನ ಧರಿಸಬೇಕಾದ ಉಡುಪು ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಹೆಣ್ಮಕ್ಕಳು ಎರಡು-ಮೂರು ತಿಂಗಳು ಮೊದಲೇ ತಯಾರಿ ಆರಂಭಿಸಿರುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳು ಅಂದ್ರೆ ಕೇಳಬೇಕಾ ? ಮೆಹಂದಿ, ಅರಶಿನ ಶಾಸ್ತ್ರ ಹೀಗೆ ಮದುವೆಯಲ್ಲಿ ನಡೆಯುವ ಎಲ್ಲಾ ಶಾಸ್ತ್ರಗಳಿಗೂ ಅದಕ್ಕೆ ಹೊಂದುವಂತೆ ತಮ್ಮ ಉಡುಗೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.

 

View this post on Instagram

 

A post shared by Yami Gautam (@yamigautam)

ನಟಿಯರು ಸಾಮಾನ್ಯವಾಗಿ ತಮ್ಮ ಮದುವೆಗೆ ಡಿಸೈನರ್ ಉಡುಪುಗಳನ್ನು ತಯಾರಿ ಮಾಡಿಸುತ್ತಾರೆ. ಆದರೆ ಯಾಮಿ ಮಾತ್ರ ಈ ವಿಷಯದಲ್ಲಿ ಸ್ವಲ್ಪ ವಿಭಿನ್ನವಾಗಿದ್ದಾರೆ. ಹೌದು, ಯಾಮಿ ತಮ್ಮ ಮದುವೆಗೆ ಡಿಸೈನರ್ ಉಡುಪಿನ ಬದಲು ತಮ್ಮ ತಾಯಿಯ ಮದುವೆ ಸೀರೆಯನ್ನೇ ಧರಿಸಿದ್ದಾರೆ. ಆ ಸೀರೆ ಸುಮಾರು 33 ವರ್ಷ ಹಳೆಯ ಸೀರೆಯಾಗಿದ್ದು, ಯಾಮಿ ಧರಿಸಿದ್ದ ಕೆಂಪು ಬಣ್ಣದ ದುಪ್ಪಟ್ಟ ಅವರ ಅಜ್ಜಿ ಕೊಟ್ಟಿದ್ದು ಎನ್ನಲಾಗಿದೆ.

 

View this post on Instagram

 

A post shared by Yami Gautam (@yamigautam)

ಇನ್ನೂ ಯಾಮಿ ತಮ್ಮ ಮದುವೆಗೆ ಸರಳವಾಗಿ ರೆಡಿಯಾಗಿದ್ದು, ಸಿಂಪಲ್ ಆಗಿ ಎರಡು ಸರ, ಬೈತಲೆ ಬೊಟ್ಟು, ಕಿವಿಯೋಲೆ ಜೊತೆಗೆ ಸೀರೆಗೆ ಹೊಂದುವಂತೆ ಕೆಂಪು ಬಣ್ಣದ ಬಳೆಗಳನ್ನು ತೊಟ್ಟಿದ್ದಾರೆ. ಕೆಂಪು ಲಿಪ್‍ಸ್ಟಿಕ್, ಕಾಡಿಗೆ ಜೊತೆಗೆ ಸ್ವಲ್ಪ ಚೀಕ್ ರೋಸ್ ಬಳಸಿ ತಾವೇ ಲೈಟಾಗಿ ಮೇಕಪ್ ಮಾಡಿಕೊಂಡಿದ್ದಾರೆ. ಮದುವೆ ವಿಚಾರ ಬಹಿರಂಗವಾದ ಬಳಿಕ ಯಾಮಿ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಯಾಮಿ ಸರಳತೆ ಕಂಡು ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.

 

View this post on Instagram

 

A post shared by Wedding Blogger (@wedding_diaries_1)

Share This Article
Leave a Comment

Leave a Reply

Your email address will not be published. Required fields are marked *